ದೆಹಲಿ ಕರ್ನಾಟಕ ಸಂಘದಲ್ಲಿ ಕಾದಂಬರಿ ಬಿಡುಗಡೆ, ಹರಿಕಥಾ ಕೀರ್ತನೆ

Team Udayavani, Sep 4, 2018, 2:25 PM IST

0209mum06.jpg

ಮುಂಬಯಿ: ಕನ್ನಡದ ಒಂದು ಕೃತಿ ಪ್ರಕಟವಾದಾಗ ಅದರ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾದರೆ, ಅದನ್ನು ಕೊಂಡು ಓದುವುದು ಕನ್ನಡಿಗರಾದ ನಮ್ಮ ಕರ್ತವ್ಯ ಎಂದು ದೆಹಲಿ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದರು.

ದೆಹಲಿ ಕರ್ನಾಟಕ ಸಂಘ ಆ.  26 ರಂದು ಆಯೋಜಿಸಿದ್ದ ಪಂಕಜ್‌ ಸೇಖ್‌ಸರಿಯಾಅವರ ‘ಕೊನೆಯ ಅಲೆ’ ಕಾದಂಬರಿಯನ್ನು ಬಿಡುಗಡೆಮಾಡಿ ಮಾತನಾಡಿದ ಅವರು,  ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಬಗ್ಗೆ ಕನ್ನಡದಲ್ಲಿ ಈಗಾಗಲೇ ಮೂರು ಕೃತಿಗಳು  ಬಂದಿವೆ. ಆದರೆ ಪ್ರಸ್ತುತ “ಕೊನೆಯ ಅಲೆ’ ಇದು ಮೊದಲ ಎರಡು ಕೃತಿಗಳಿಗಿಂದ ತುಂಬ ಬೇರೆಯಾಗಿದ್ದು, ಇದು ಅಂಡಮಾನ್‌ ದ್ವೀಪದ ಆತ್ಮಕ್ಕೆ ಇಳಿಯುತ್ತದೆ. ಇವತ್ತು ಅಂಡಮಾನಿನಾದ್ಯಂತ ಕಾಣಸಿಗುವ ಪ್ರವಾಸಿಗರು, ವಸಾಹತು ಕಾಲದಲ್ಲಿ ಅಲ್ಲಿಯೇ ಹುಟ್ಟಿ ಬೆಳೆದ ಸ್ಥಳೀಯ ಜನರು ಮತ್ತು ಸಾವಿರಾರು ವರ್ಷಗಳಿಂದ ಅಲ್ಲಿಯೇ ಬದುಕಿದ್ದು, ಪ್ರಾಚೀನ ಶಿಲಾಯುಗದ ಜೀವನ ವಿಧಾನವನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಜರವಾ ಬುಡಕಟ್ಟು-ಈ ಮೂರೂ ಜನ ಸಮುದಾಯಗಳ ನಡುವಣ ಸಂಘರ್ಷ ಮತ್ತು ಸಮನ್ವಯವನ್ನು ಈ ಕೃತಿ ಸೂಕ್ಷ್ಮವಾಗಿ ದಾಖಲಿಸುತ್ತದೆ ಎಂದರು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್‌ಅವರು ನಾನು ಈ ಕೃತಿಯನ್ನು ಓದಿಲ್ಲ, ಡಾ| ಬಿಳಿಮಲೆ ಅವರು ಹೇಳಿದ ಮಾತಿನಿಂದ ಈ ಕೃತಿಯನ್ನು ಓದಬೇಕನ್ನಿಸುತ್ತದೆ, ಕಾರಣ ಒಂದು ಸƒಜನಾತ್ಮಕತೆ ಅದರಲ್ಲಿದೆ. ಅದು ಭಾಷಾಂತರವಾಗಿ ಬಂದಿದ್ದರಿಂದ. ಭಾಷಾಂತರದಲ್ಲಿ ನನಗೆ ತುಂಬಾ ಆಸಕ್ತಿ ಇರುವುದರಿಂದ ನನಗೆ ಈ ಎರಡೂ ಕೃತಿಯನ್ನು ಓದುವಂತಹ ಆಸೆಯಾಗಿದೆ ಎಂದ‌ರು.

ಕೃತಿ ಬಿಡುಗಡೆ ಮಾಡಲು ಅನುವು ಮಾಡಿಕೊಟ್ಟ ದೆಹಲಿ ಕರ್ನಾಟಕ ಸಂಘ ಮತ್ತು ಕನ್ನಡಿಗರೆಲ್ಲರಿಗೂ ದಿ ಲಾಸ್ಟ್‌ ವೇವ್‌ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಸುಮಂಗಲಾ ಎಸ್‌. ಮುಮ್ಮುಗಟ್ಟಿ ಅವರಿಗೂ ಪಂಕಜ್‌ ಸೇಖ್‌ಸರಿಯಾ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಸಂಘದ ಜತೆ ಕಾರ್ಯದರ್ಶಿ   ಟಿ. ಪಿ. ಬೆಳ್ಳಿಯಪ್ಪ ವಂದಿಸಿದರು.

ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ| ಎಂ. ಎಸ್‌. ಶಶಿಕುಮಾರ್‌ ಅವರು ನಿರೂಪಿಸಿದರು. ಸಂಘದ ಕೋಶಾಧಿಕಾರಿ ಕೆ. ಎಸ್‌. ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಸಭಾ ಕಾರ್ಯಕ್ರಮದ ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಮಿಣಿ ಹಂಡೆ ಅವರಿಂದ “ಶ್ರೀಕೃಷ್ಣ ಲೀಲೆ’ ಹರಿಕಥಾ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ  ಸುಧೀರ್‌ ಫಡ್ನಿàಸ್‌, ಹಾರ್ಮೋನಿಯಂನಲ್ಲಿ ಅಶ್ವಿ‌ನಿ ಕುಮಾರ್‌, ವಯೋಲಿನ್‌ನಲ್ಲಿ ಶುಭಾದೇವಿ ಪ್ರಸಾದ್‌ ಅವರು ಸಹಕರಿಸಿದರು.

ಟಾಪ್ ನ್ಯೂಸ್

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

dr-sudhakar

ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

1-sas

2022 ಕೊನೆಯ ಸೀಸನ್ : ದೇಹ ಕ್ಷೀಣಿಸುತ್ತಿದೆ ಎಂದ ಸಾನಿಯಾ ಮಿರ್ಜಾ

ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ

ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ

ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ

ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ

1-sadsd

ಮೊದಲ ಏಕದಿನ: ವೆಂಕಟೇಶ್ ಅಯ್ಯರ್‌ ಪಾದಾರ್ಪಣೆ ; ಟಾಸ್ ಗೆದ್ದ ದಕ್ಷಿಣ ಆಫ್ರಿಕಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಕರಿಸಿ ಭಾಷೆ ಉಳಿಸೋಣ: ರವಿ ಎ. ಬಂಗೇರ

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಕರಿಸಿ ಭಾಷೆ ಉಳಿಸೋಣ: ರವಿ ಎ. ಬಂಗೇರ

ಮಾನಸಿಕ, ದೈಹಿಕ ಕ್ಷಮತೆಗೆ ಅಯ್ಯಪ್ಪ ವ್ರತ ಪ್ರೇರಣೆ: ಶ್ರೀನಿವಾಸ ಗುರುಸ್ವಾಮಿ

ಮಾನಸಿಕ, ದೈಹಿಕ ಕ್ಷಮತೆಗೆ ಅಯ್ಯಪ್ಪ ವ್ರತ ಪ್ರೇರಣೆ: ಶ್ರೀನಿವಾಸ ಗುರುಸ್ವಾಮಿ

ಬಿಲ್ಲವರ ಅಸೋ. ಮುಂಬಯಿ ಮಹಿಳಾ ವಿಭಾಗ: ಮಕರ ಸಂಕ್ರಾಂತಿ ಆಚರಣೆ

ಬಿಲ್ಲವರ ಅಸೋ. ಮುಂಬಯಿ ಮಹಿಳಾ ವಿಭಾಗ: ಮಕರ ಸಂಕ್ರಾಂತಿ ಆಚರಣೆ

Untitled-1

ಕಾತ್ರಜ್‌: ಶ್ರೀ ಅಯ್ಯಪ್ಪ ಸ್ವಾಮಿ  ಮಂದಿರದಲ್ಲಿ ಮಕರ ಸಂಕ್ರಾಂತಿ ಆಚರಣೆ

ಯುವ ವಿಭಾಗದಿಂದ ಒಳಾಂಗಣ ಕ್ರೀಡಾ ಸ್ಪರ್ಧೆ

ಯುವ ವಿಭಾಗದಿಂದ ಒಳಾಂಗಣ ಕ್ರೀಡಾ ಸ್ಪರ್ಧೆ

MUST WATCH

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

ಹೊಸ ಸೇರ್ಪಡೆ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

dr-sudhakar

ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

hosanagara news

22 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.