ಗಾಣಿಗ ಸಮಾಜ ಮುಂಬಯಿ ದ್ವಿದಶ ವಾರ್ಷಿಕೋತ್ಸವ ಸಮಾರೋಪ

Team Udayavani, Jun 16, 2017, 2:20 PM IST

12-Mum08a.jpg

ಮುಂಬಯಿ: ಮನುಷ್ಯನಾದವನಿಗೆ ಸ್ವಸಮುದಾಯದ ಬಗ್ಗೆ ಪ್ರೀತಿ ಮತ್ತು ಕಾಳಜಿ ಇರಬೇಕು. ಆದರೆ ಇದೆಲ್ಲವೂ ನಿಸ್ವಾರ್ಥ ವಾಗಿರಬೇಕು. ಒಗ್ಗಟ್ಟಿನಲ್ಲಿ ಶಕ್ತಿ ಅಡಗಿದೆ ಎಂಬುದನ್ನು ತಿಳಿದಾಗಲೇ ಇಂತಹ ಯಶಸ್ವೀ ಕಾರ್ಯಕ್ರಮಗಳ ಆಯೋಜನೆ ಸಾಧ್ಯ. ಈ ಮೂಲಕವೇ ಸಮುದಾಯದ ಸಾಂಘಿಕತೆ ಭದ್ರವಾಗುವುದು. ಮುಂಬಯಿಯಲ್ಲಿನ ಗಾಣಿಗ ಬಾಂಧ‌ವರ ಇತಿಹಾಸ ಬರೆದ ಕಾರ್ಯಕ್ರಮ ಇದಾಗಿದ್ದು ಭವಿಷ್ಯತ್ತಿನ್ನುದ್ದಕ್ಕೂ ಇಂತಹ ಸಾಮರಸ್ಯದ, ಸಾಂಘಿಕತೆಯ ಮನೋ ಭಾವ ನಿಮ್ಮೆಲ್ಲರಲ್ಲೂ ಜೀವಂತವಾಗಿರಲಿ ಎಂದು ಉಡುಪಿ ಜಿಲ್ಲಾ ಸೋಮ ಕ್ಷತ್ರಿಯ ಗಾಣಿಗ ಸಮಾಜ ಬಾಕೂìರು ಇದರ ಅಧ್ಯಕ್ಷ ಕುತ್ಪಾಡಿ ಗೋಪಾಲ್‌ ಅವರು ತಿಳಿಸಿದರು.

ಜೂ. 11 ರಂದು ಸಾಂತಾಕ್ರೂಜ್‌ ಪೂರ್ವ ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಗಾಣಿಗ ಸಮಾಜ ಮುಂಬಯಿ  ಇದರ ಇಪ್ಪತ್ತನೇ ವಾರ್ಷಿಕೋತ್ಸ‌Õವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಅಣ್ಣ ದಿ| ಆನಂದ ಗಾಣಿಗ ಅವರಿಂದ  ಪ್ರಾರಂಭಿಸಲ್ಪಟ್ಟ   ಸಂಘದಲ್ಲಿ  ನಮ್ಮ ಸಮಾಜ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗು ವಂತಹ ಅದೃಷ್ಟ ನಮ್ಮ ಪಾಲಿಗೆ ಒದಗಿದ್ದು,  ಕಳೆದ ಸುಮಾರು ಎರಡು ದಶಮಾನಗಳಿಂದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಲ್ಲರ ವಿಶ್ವಾಸ ಹಾಗೂ ಸಹಾಯದಿಂದ ಈ ಸಂಸ್ಥೆಯು ಬಹಳಷ್ಟು ಸಾಧಿಸುವಲ್ಲಿ ಸಫಲವಾಗಿದೆ. ಮುಂದೆ ಕೂಡ ಇಂತಹ ಸಹಕಾರವನ್ನು ಬಯಸುತ್ತೇನೆ ಎಂದು ನುಡಿದು ಶುಭಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಯಾಗಿ ರಶ್ಮೀ ಸಂದೇಶ್‌ ಅವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೈಗಾರಿಕೋದ್ಯಮಿ ಸಂದೇಶ್‌ ಕುಮಾರ್‌ ಪುಣೆ ಅವರಿಗೆ “ಗಾಣಿಗ ಉದ್ಯೋಗ ರತ್ನ’ ಬಿರುದು  ಪ್ರದಾನಿಸಲಾಯಿತು.  ಯುವ ಉದ್ಯಮಿ ರತ್ನಾಕರ್‌ ಎ. ಶೆಟ್ಟಿ ಥಾಣೆ ಮತ್ತು ಶೋಭಾ ಶೆಟ್ಟಿ ದಂಪತಿಯನ್ನು  ಮೈಸೂರು ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಸೋಮಕ್ಷತ್ರೀಯ ವೈಷ್ಣವ ಸಮಾಜ ಬೆಂಗಳೂರು ಅಧ್ಯಕ್ಷ ಎಚ್‌. ಟಿ. ನರಸಿಂಹ ಅವರು ಮಾತನಾಡಿ, ಸಂಘದ ಸ್ಥಾಪನೆಯ ಉದ್ದೇಶ ಸಂಘಟನೆ, ಸಂಘಟನೆಯ ಮೂಲಕ ತಮ್ಮ ಸಮುದಾಯಕ್ಕೆ ಪ್ರಯೋಜನವಾಗುವಂತೆ ಎಲ್ಲರೂ ಒಗ್ಗಟ್ಟಿನಿಂದ ಸ್ವಯಂ ಪ್ರೇರಿತರಾಗಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ಮನೋಭಾವ ಹೊಂದಿದಲ್ಲಿ ಯಾವುದೇ ಮಟ್ಟಕ್ಕೆ ಏರಬಹುದು. ಗಾಣಿಗ ಸಮಾಜ ಮುಂಬಯಿ ಈ ಪಥದಲ್ಲಿ ಸಾಗುತ್ತಿರುವುದು ನೋಡಿ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಮತ್ತೋರ್ವ ಅತಿಥಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಗಾಣಿಗ ಸಮಾಜ ಮುಂಬಯಿ ಸಣ್ಣ ಸಮುದಾಯವಾದರೂ ಇಂದಿನ ಸಭೆಯನ್ನು ನೋಡಿ ತುಂಬಾ ಸಂತೋಷಪಟ್ಟಿದ್ದೇನೆ. ಸಂಘ ಸಂಸ್ಥೆಗಳನ್ನು ನಡೆಸುವುದು ಸುಲಭವಲ್ಲ. ಎಲ್ಲಾ ತರಹದ ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾಗುವ ಸನ್ನಿವೇಶಗಳು ಬರುತ್ತವೆ. ಆದರೆ ಒಮ್ಮೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡ ಮೇಲೆ ನಮ್ಮ ಉದ್ದೇಶವನ್ನು ಸಾಧಿಸುವ ತನಕ ಎಲ್ಲವನ್ನೂ ಮೀರಿ ಗುರಿ ತಲುಪುವ ಛಲ ಎಲ್ಲರಲ್ಲಿರಬೇಕು. ನನ್ನ ಜೀವನದಲ್ಲಿ ಕೂಡ ಬಹು ವರ್ಷಗಳ ಕಠಿಣ ಶ್ರಮದಿಂದ ಈ ಸಾಧನೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸೋಮ ಕ್ಷತ್ರೀಯ ವೈಷ್ಣವ ಸಮಾಜ ಬೆಂಗಳೂರು ಮಾಜಿ ಕಾರ್ಯದರ್ಶಿ ಪ್ರತಾಪ್‌ಚಂದ್ರ ಕುತ್ಪಾಡಿ, ಸಂಪರ್ಕ ಸುಧಾ ಮಾಸಿಕದ ಮಾಜಿ ಕಾರ್ಯದರ್ಶಿ ಉದಯ ಕುಮಾರ್‌, ವಿದ್ಯಾದಾಯಿನಿ ಸಭಾ ಇದರ ಜೆ. ಎಂ. ಕೋಟ್ಯಾನ್‌, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.  ಹೊಟೇಲ್‌ ರತ್ನಪಾರ್ಕ್‌ ಥಾಣೆ ಇದರ ಮಾಲಕ ರತ್ನಾಕರ ಜಿ. ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ವಿದ್ಯೋದಯ ಸಮಿತಿಯ ಕಾರ್ಯಾಧಕ್ಷ ವಿಜಯೇಂದ್ರ ಗಾಣಿಗ ಮಾತನಾಡಿ ಸಮಾಜದ ಏಳಿಗೆಗೆ ಶುಭಹಾರೈಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಕೋಶಾಧಿಕಾರಿ ಜಯಂತ್‌ ಪಿ. ಗಾಣಿಗ, ಮಹಿಳಾಧ್ಯಕ್ಷೆ ತಾರಾ ಎನ್‌. ಭಟ್ಕಳ್‌, ಯುವ ವಿಭಾಗಾಧ್ಯಕ್ಷ ಗಣೇಶ್‌ ಆರ್‌. ಕುತ್ಪಾಡಿ ಹಾಗೂ ಅತಿಥಿಗಳು ವಿವಿಧ ಸ್ಪರ್ಧಾ ವಿಜೇತರಿಗೆ ಪದಕ, ಸ್ಮರಣಿಕೆಯನ್ನಿತ್ತು ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ ವಿತರಿಸಿ ಶುಭ ಹಾರೈಸಿದರು.

ವೀಣಾ ದಿನೇಶ್‌ ಗಾಣಿಗ ಪ್ರಾರ್ಥನೆಗೈದ‌ರು. ನ್ಯಾಯವಾದಿ ಯು. ಬಾಲಚಂದ್ರ ಕಟಪಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಬಿ. ಜಗದೀಶ್‌ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೋಪಾಲಕೃಷ್ಣ ಗೋವಿಂದ ಗಾಣಿಗ, ರಮೇಶ್‌ ಎನ್‌. ಗಾಣಿಗ, ಸದಾನಂದ ಕಲ್ಯಾಣು³ರ, ನಾಗರತ್ನ ಜಗನ್ನಾಥ್‌ ಅವರು ಅತಿಥಿಗಳನ್ನು  ಪುಷ್ಪಗುತ್ಛವನ್ನಿತ್ತು  ಗೌರವಿಸಿದರು. ವೀಣಾ ದಿನೇಶ್‌ ಗಾಣಿಗ, ಆರತಿ ದಿನೇಶ್‌ ಗಾಣಿಗ ಸಮ್ಮಾನ ಪತ್ರ ವಾಚಿಸಿದರು. ಮಾಜಿ ಕಾರ್ಯದರ್ಶಿ ಬಿ. ವಿ. ರಾವ್‌ ಶ್ಲೋಕ ಪಠಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಆರ್‌. ಗಾಣಿಗ ವಂದಿಸಿದರು.

ನಮ್ಮ ಸಮಾಜ ಬಾಂಧವರು ಇಷ್ಟೊಂದು ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷ ತಂದಿದ್ದು, ಇದು ಸಮುದಾಯದ ಭವಿಷ್ಯವನ್ನು ತೋರ್ಪಡಿಸುತ್ತಿದೆ. ಹಿಂದೆ ನಮ್ಮ ಸಮಾಜ ಕೀಳರಿಮೆಗೆ ಗುರಿಯಾಗಿದ್ದರೂ, ಈಗ ಸಮಾಜದ ಎಲ್ಲರೂ ವಿದ್ಯಾವಂತರಾಗಿ ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ. ಉದ್ಯಮಿಗಳಾಗಿ ತಮ್ಮ ಸ್ವಂತ ಪ್ರತಿಭೆಯಿಂದ ಮುಂದುವರಿಯುತ್ತಿದ್ದಾರೆ. ನಾವೆಲ್ಲರೂ ಈ ಸಂಘಟನೆಯ ಮೂಲಕ ಜಾತಿಗಿಂತಲೂ ಹೆಚ್ಚಾಗಿ ಸುಸಂಸ್ಕೃತ ಮನುಷ್ಯರಾಗಿ, ದೇಶ ಪ್ರೇಮಿಗಳಾಗಿ ಈ ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವನೆ ಹೊಂದಬೇಕಾದ 
ಆವಶ್ಯಕತೆ ಇದೆ 
– ಕುತ್ಪಾಡಿ ರಾಮಚಂದ್ರ ಗಾಣಿಗ (ಅಧ್ಯಕ್ಷರು : ಗಾಣಿಗ ಸಮಾಜ ಮುಂಬಯಿ)

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.