ಶ್ರೀಕೃಷ್ಣವಿಟ್ಠಲ ಪ್ರತಿಷ್ಠಾನದ ವಿದ್ವಾನ್ ವಿಶ್ವನಾಥ್ ಭಟ್‌ರಿಂದ ಹರಿಕಥಾ ಕಾಲಕ್ಷೇಪ
Team Udayavani, Jan 31, 2021, 6:32 PM IST
ಮುಂಬಯಿ: ಶ್ರೀಕೃಷ್ಣ ವಿಟ್ಠಲ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ಮತ್ತು ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ಹರಿಕಥಾ ಕಾಲಕ್ಷೇಪವು ತಾಯ್ನಾಡಿನಲ್ಲಿ ನಡೆಯ ಲಿದೆ.
ಫೆ. 1ರಂದು ಸಂಜೆ ಮಂಗಳೂರಿನ ಕೊಂಚಾಡಿಯ ದೇರರಬೈಲು ಶ್ರೀರಾಮ ಭಜನ ಮಂಡಳಿಯ ವತಿ ಯಿಂದ ನಳದಮಯಂತಿ ತುಳು ಭಕ್ತಿ ಪ್ರಧಾನ ಹರಿಕಥಾ ಕಾಲಕ್ಷೇಪ ನಡೆಯಲಿದೆ.
ಫೆ. 2ರಂದು ಸಂಜೆ ಕಲ್ಯಾ ಕೈರಬೆಟ್ಟು ಬ್ರಹ್ಮಬೈದರ್ಕಳ ಗರೋಡಿಯ ಆವರಣದಲ್ಲಿ ಆಡಳಿತ ಮಂಡಳಿಯ ವತಿಯಿಂದ ಭಕ್ತ ಗೇರಾ ಕುಂಭಾಶಿ ತುಳು ಹರಿಕಥಾ ಕಾಲಕ್ಷೇಪವನ್ನು ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ಸಂಗೀತ ನಿರ್ದೇಶಕ ಶೇಖರ ಸಸಿಹಿತ್ಲು ಅವರು ಹಾರ್ಮೋನಿಯಂನಲ್ಲಿ, ಜನಾರ್ದನ್ ಸಾಲ್ಯಾನ್ ಅವರು ತಬಲಾದಲ್ಲಿ, ರವಿ ಕುಕ್ಯಾನ್ ಅವರು ತಾಳದಲ್ಲಿ ಸಹಕರಿಸಲಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ: ಸಚಿವ ಪಾಟೀಲ
ಕಲಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.