ಇನ್ನೊಬ್ಬರಿಗೆ ಜೀವದಾನ ಮಾಡುವ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಿ


Team Udayavani, Dec 11, 2021, 12:04 PM IST

ಇನ್ನೊಬ್ಬರಿಗೆ ಜೀವದಾನ ಮಾಡುವ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಿ

ಕಲ್ಯಾಣ್‌: ಹಿಂದಿನ ಕಾಲದಲ್ಲಿ ಅನ್ನದಾನ ಹಾಗೂ ವಿದ್ಯಾದಾನ ಶ್ರೇಷ್ಠ ದಾನಗಳಾಗಿದ್ದವು. ಆದರೆ ಇಂದಿನ ದಿನಗಳಲ್ಲಿ ರಕ್ತದಾನವೇ ಸರ್ವ ಶ್ರೇಷ್ಠ ದಾನವಾಗಿದೆ. ಅನ್ನದಾನದಿಂದ ಹಸಿವು ನೀಗಿದರೆ ವಿದ್ಯೆಯಿಂದ ಬದುಕು ಕಟ್ಟಿಕೊಳ್ಳಬ ಹುದು. ಒಂದು ಸಲ ರಕ್ತದಾನ ಮಾಡಿದರೆಮೂವರು ಜೀವವನ್ನು ಉಳಿಸಬಹುದು. ಆದ್ದರಿಂದ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕರಿಸೋಣ. ಒಬ್ಬ ದಾನಿಯಿಂದ ಹೆಚ್ಚೆಂದರೆ ಶೇ. 8ರಷ್ಟು ಮಾತ್ರ ರಕ್ತವನ್ನು ಪಡೆಯಲಾಗುತ್ತದೆ. ಆದ್ದರಿಂದ ರಕ್ತದಾನವನ್ನು ಪ್ರತಿಯೊಬ್ಬರೂ ಮಾಡಬಹುದು ಎಂದು ಮುಲುಂಡ್‌ ಶಿಶುತಜ್ಞ ಡಾ| ಸತ್ಯಪ್ರಕಾಶ ಶೆಟ್ಟಿ ಅವರು ಹೇಳಿದರು.

ಡಿ. 5ರಂದು ಬೆಳಗ್ಗೆ ಬಂಟರ ಸಂಘ ಮುಂಬಯಿ ಇದರ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಲ್ಯಾಣ್‌ ಪಶ್ಚಿಮದ ಗೀತಾ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಬೃಹತ್‌ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಂಟರ ಸಂಘದ ಎಂಟು ಪ್ರಾದೇಶಿಕ ಸಮಿತಿಗಳ ಸಹಕಾರದಿಂದ ಇವರೆಗೆ 1,800 ಯುನಿಟ್‌ ರಕ್ತವನ್ನು ಸಂಗ್ರಹಿಸಲಾಗಿದೆ. ಈ ಅಭೂತಪೂರ್ವ ಕಾರ್ಯಕ್ಕೆ ತಮ್ಮೆಲ್ಲರ ಅವಿರತ ಪರಿಶ್ರಮವೇ ಕಾರಣವಾಗಿದೆ.  ಇಂತಹ ಶಿಬಿರಗಳ ಮುಖಾಂತರ ರಕ್ತ ಸಂಗ್ರಹಿಸಿ ಇನ್ನೊಬ್ಬರಿಗೆ ಜೀವದಾನ ಮಾಡುವ ಪುಣ್ಯದ ಕಾರ್ಯ ಮಾಡೋಣ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬಂಟರ ಸಂಘ ಮುಂಬಯಿಯ ಪೂರ್ವ ವಲಯದ ಸಮನ್ವಯಕ ಸುಬ್ಬಯ್ಯ ಶೆಟ್ಟಿ ಅವರು ಮಾತನಾಡಿ, ಬಂಟರ ಸಂಘ ಮುಂಬಯಿ ಇದರ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತ್ಯ ಪ್ರಕಾಶ್‌ ಶೆಟ್ಟಿ ಅವರ ಕಾರ್ಯ ಅಭಿನಂದನೀಯ. ರಕ್ತದಾನ ಶಿಬಿರಗಳ ಮುಖಾಂತರ ರಕ್ತ ಸಂಗ್ರಹಿಸಿ ಅದನ್ನು ಆವಶ್ಯಕತೆ ಇದ್ದವರಿಗೆ ನೀಡುವುದು ನಿಜವಾದ ಮಾನವೀಯತೆಯ ಸೇವೆಯಾಗಿದೆ. ತಮ್ಮ ಅವಿರತ ಪ್ರಯತ್ನದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಅವರ ಪ್ರಯತ್ನಕ್ಕೆ ನಾವೆಲ್ಲರೂ ಸಹಕರಿಸೋಣ ಎಂದು ಕರೆ ನೀಡಿ ಶುಭಕೋರಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತ ನಾಡಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅವರು, ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ಸಮಾಜಪರ ಕಾರ್ಯಗಳಿಗೆ ನಮ್ಮ ಸಹಾಯ, ಸಹಕಾರ ನಿರಂತರವಾಗಿರಲಿದೆ. ಪ್ರದೇಶಿಕ ಸಮಿತಿಯ ಈ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಲು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸುಧೀರ್‌ ಶೆಟ್ಟಿ ಹಾಗೂ ಎಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರ ಅಮೂಲ್ಯ ಸಹಾಯ, ಅವಿರತ ಪರಿಶ್ರಮವೇ ಕಾರಣವಾಗಿದೆ. ಡಾ| ಸತ್ಯಪ್ರಕಾಶ ಶೆಟ್ಟಿ ಅವರ ಮಾರ್ಗದರ್ಶನ ನಮ್ಮೊಂದಿಗೆ ಸದಾ ಇರಲಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಗಣ್ಯರಾದ ದಿವಾಕರ ಶೆಟ್ಟಿ ಇಂದ್ರಾಳಿ, ಡಾ| ಸತ್ಯಪ್ರಕಾಶ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ವಿನಯ ಶೆಟ್ಟಿ, ಚಿತ್ರಾ ಆರ್‌. ಶೆಟ್ಟಿ, ಸುಧೀರ್‌ ಶೆಟ್ಟಿ, ಸುಭೋದ್‌ ಭಂಡಾರಿ, ಜಗದೀಶ್‌ ಬೆಳ್ಳಂಜೆ ಅವರನ್ನು ಸಮ್ಮಾನಿಸಲಾಯಿತು. ಗಣ್ಯರಾದ ಗುರುದೇವ ಭಾಸ್ಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಸದಾಶಿವ ಸುವರ್ಣ, ನಂದೀಶ್‌ ಪೂಜಾರಿ, ದೀಪಕ್‌ ಹಂಗೇನ, ಸಚಿನ್‌ ಶೆಟ್ಟಿ, ಪ್ರಜ್ವಲ್‌ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ರಾಜೇಶ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಸುಲೋಚನಾ ಶೆಟ್ಟಿ, ರೋಹಿಣಿ ಶೆಟ್ಟಿ, ಸುಜಾತಾ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.

ರೋಹಿಣಿ ಶೆಟ್ಟಿ, ಸುಜಾತಾ ಸುಕುಮಾರ್‌ ಶೆಟ್ಟಿ ಅವರ ಪ್ರಾರ್ಥನೆ ಯೊಂದಿಗೆ ಗಣ್ಯರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಜಗದೀಶ್‌ ಬೆಳ್ಳಂಜೆ ಕಾರ್ಯಕ್ರಮ ನಿರೂಪಿಸಿದರು. ಹರೀಶ್‌ ಶೆಟ್ಟಿ ವಂದಿಸಿದರು. ಬಂಟರ ಸಂಘ ಮುಂಬಯಿ ಇದರ ಜತೆ ಕಾರ್ಯದರ್ಶಿ, ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬಂಟರ ಸಂಘ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ, ರವೀಂದ್ರ ಶೆಟ್ಟಿ, ಸುಭೋದ್‌ ಭಂಡಾರಿ, ಭಾಸ್ಕರ ಶೆಟ್ಟಿ ದೊಂಡೆರಂಗಡಿ, ಸುಧೀರ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ವಿನಯ್‌ ಶೆಟ್ಟಿ, ಹರೀಶ್‌ ಶೆಟ್ಟಿ, ದಯಾನಂದ ಶೆಟ್ಟಿ, ಪ್ರವೀಣಾ ಪಿ. ಶೆಟ್ಟಿ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನ್ನದಾನ ಹಾಗೂ ವಿದ್ಯಾದಾನ ಹಣವಂತರಷ್ಟೇ ಮಾಡಬಹುದು. ಆದರೆ ರಕ್ತದಾನವನ್ನು ಜನಸಾಮಾನ್ಯರೂ ಮಾಡಬಹುದು. ಇಂದು ಈ ಬೃಹತ್‌ ರಕ್ತದಾನ ಶಿಬಿರವನ್ನು ಆಯೋಜಿಸಿದ್ದ ಬಂಟರ ಸಂಘ ಮುಂಬಯಿ ಇದರ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯ ಅಭಿನಂದನೀಯ. ಬಂಟರ ಸಂಘದ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದ ಹರಿಕಾರ ಎಂದರೆ ತಪ್ಪಾಗಲಾರದು. ಕೊರೊನಾ ಕಾಲಘಟ್ಟದಲ್ಲಿಯೂ ಸುಮಾರು 1,800 ಯುನಿಟ್‌ ರಕ್ತ ಸಂಗ್ರಹಿಸುವ ಜತೆಗೆ ಸೋಂಕಿನಿಂದ ಸಂಕಷ್ಟಕ್ಕೊಳಗಾದ 700 ಕ್ಕೂ ಅಧಿಕ ಮಂದಿಯ ಉಪಚಾರಗೈದು ವೈದ್ಯೋ ನಾರಾಯಣೋ ಹರಿ ಎಂಬುದನ್ನು ಸಾಭೀತುಪಡಿಸಿದ್ದಾರೆ ಪ್ರತಿಯೊಬ್ಬರೂ ರಕ್ತದಾನದ ಈ ಮಹಾಯಜ್ಞದಲ್ಲಿ ಭಾಗವಹಿಸಿ ಜೀವದಾನದ ಮಹತ್ಕಾರ್ಯದಲ್ಲಿ ಭಾಗಿಯಾಗೋಣ.-ಇಂದ್ರಾಳಿ ದಿವಾಕರ ಶೆಟ್ಟಿ, ಜತೆ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ

ಮುಂಬಯಿ ಬಂಟರ ಸಂಘದ ಪ್ರತಿ ಪ್ರಾದೇಶಿಕ ಸಮಿತಿಗಳಲ್ಲೂ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜನರಿಗೆ ರಕ್ತದಾನದ ಮಹತ್ವವನ್ನು ಸಾರಿ ಹೇಳುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರ ಕಾರ್ಯಕ್ಕೆ ನಮ್ಮೆಲ್ಲರ ಸಹಾಯ, ಸಹಕಾರ ನಿರಂತರವಾಗಿರಲಿ. ಮುಂಬರುವ ದಿನಗಳಲ್ಲಿ ಪ್ರಾದೇಶಿಕ ಸಮಿತಿಯ ವತಿಯಿಂದ ಬೃಹತ್‌ ಆರೋಗ್ಯ ಶಿಬಿರವನ್ನು ಆಯೋಜಿಸುವ ಯೋಜನೆ ನಮ್ಮದಾಗಿದೆ. ಸಮಿತಿಯ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ. -ಚಿತ್ರಾ ಆರ್‌. ಶೆಟ್ಟಿ, ಉಪಕಾರ್ಯಾಧ್ಯಕ್ಷೆ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗ

-ಚಿತ್ರ-ವರದಿ: ಗುರುರಾಜ ಪೋತನೀಸ್‌

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.