5 ತಿಂಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲಿ ಭಾರೀ ಇಳಿಕೆ


Team Udayavani, Jul 6, 2020, 5:40 PM IST

5 ತಿಂಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲಿ ಭಾರೀ ಇಳಿಕೆ

ಸಾಂದರ್ಭಿಕ ಚಿತ್ರ

ಮುಂಬಯಿ, ಜು. 5: ರಾಜ್ಯದಲ್ಲಿ 2019 ಮತ್ತು 2018ನೇ ಸಾಲಿಗೆ ಹೋಲಿಸಿದರೆ 2020ರ ಮೊದಲ 5 ತಿಂಗಳುಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ತೀರಾ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಜನವರಿಯಿಂದ ಮೇ ವರೆಗೆ 826 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಪ್ರಿಲ್‌ನಲ್ಲಿ 102 ಮಂದಿ ರೈತರು ಸಾವನ್ನಪ್ಪಿದ್ದು, ಇದು ಕಳೆದ ಐದು ವರ್ಷಗಳಲ್ಲೇ ಏಪ್ರಿಲ್‌ನಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ. 2020ರ ಮೊದಲ ಮೂರು ತಿಂಗಳಲ್ಲಿ ಕ್ರಮವಾಗಿ 198, 201, 168 ರೈತರ ಆತ್ಮಹತ್ಯೆ ಪ್ರಕರಣಗಳು ನಡೆದರೆ, ಮೇ ತಿಂಗಳಲ್ಲಿ 157 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018 ಮತ್ತು 2019ರಲ್ಲಿ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಕ್ರಮವಾಗಿ 1,117 ಮತ್ತು 1,085 ಆತ್ಮಹತ್ಯೆಗಳು ದಾಖಲಾಗಿವೆ. 2018 ಮತ್ತು 2019ರಲ್ಲಿ ಕ್ರಮವಾಗಿ 2,761 ಮತ್ತು 2,808 ರೈತ ಆತ್ಮಹತ್ಯೆಗಳು ವರದಿಯಾಗಿವೆ.

ವಿದರ್ಭ ಪ್ರಥಮ ಸ್ಥಾನ : ಈ ಐದು ತಿಂಗಳಲ್ಲಿ ಬಹುಪಾಲು ಆತ್ಮಹತ್ಯೆಗಳು 437 ವಿದರ್ಭದ 11 ಜಿಲ್ಲೆಗಳಲ್ಲಿ ವರದಿಯಾಗಿದ್ದು, ಅನಂತರದ ದಿನಗಳಲ್ಲಿ ಮರಾಠವಾಡ 273, ಪಶ್ಚಿಮ ಮತ್ತು ಉತ್ತರ ಮಹಾರಾಷ್ಟ್ರವು ಮೇ 31ರ ವರೆಗೆ ಕ್ರಮವಾಗಿ 12 ಮತ್ತು 104 ಪ್ರಕರಣಗಳನ್ನು ವರದಿ ಮಾಡಿದೆ. ಕೊರೊನಾ ಲಾಕ್‌ಡೌನ್‌ ಕಾರಣ ಮೂರು ತಿಂಗಳ ಅಂತರದ ಅನಂತರ ರಾಜ್ಯ ಸರಕಾರ ಆತ್ಮಹತ್ಯೆ ಡೇಟಾವನ್ನು ಬಿಡುಗಡೆ ಮಾಡಿದ್ದು, ಅಂಕಿಅಂಶಗಳನ್ನು ರಾಜ್ಯದ ಪರಿಹಾರ ಮತ್ತು ಪುನರ್ವಸತಿ ಇಲಾಖೆಯು ಸಂಗ್ರಹಿಸಿದೆ.

ಸಾಲ ಮನ್ನಾ ಪ್ರಕರಣಗಳ ಇಳಿಕೆಗೆ ಕಾರಣ :  30 ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭವಾಗುವ ನಿರೀಕ್ಷೆಯಿರುವ ಸಾಲ ಮನ್ನಾವನ್ನು ಡಿಸೆಂಬರ್‌ ಕೊನೆಯ ವಾರದಲ್ಲಿ ಘೋಷಿಸಲಾಯಿತು. ಆ ಬಳಿಕದ ತಿಂಗಳುಗಳಲ್ಲಿ ಕಡಿಮೆ ಆತ್ಮಹತ್ಯೆಗಳು ವರದಿಯಾಗಿವೆ. ನವೆಂಬರ್‌ ಮತ್ತು ಡಿಸೆಂಬರ್‌ ಅನಂತರ ಕ್ರಮವಾಗಿ 308 ಮತ್ತು 242 ಆತ್ಮಹತ್ಯೆಗಳು ವರದಿಯಾಗಿವೆ ಎಂದು ಪರಿಹಾರ ಮತ್ತು ಪುನರ್ವಸತಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ ಕೊನೆಯ ವಾರದಲ್ಲಿ ವಿತರಣೆಯ ಪ್ರಾರಂಭದ ಅನಂತರ, ರಾಜ್ಯವು 19 ಲಕ್ಷ ರೈತರ ಖಾತೆಗಳಿಗೆ 12,000 ಕೋ. ರೂ. ಗಳನ್ನು ಜಮಾವಣೆಗೊಳಿಸಿದೆ. ಸಾಂಕ್ರಾಮಿಕ ರೋಗದಿಂದಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಆದರೂ 11.12 ಲಕ್ಷಕ್ಕೂ ಹೆಚ್ಚು ರೈತರು 8,100 ಕೋಟಿ ರೂ. ಮೌಲ್ಯದ ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ.

ಟಾಪ್ ನ್ಯೂಸ್

ಬಸವರಾಜ್ ಬೊಮ್ಮಯಿ ಮೇಲಿನ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ: ಸಿದ್ದರಾಮಯ್ಯ

ಬಸವರಾಜ್ ಬೊಮ್ಮಾಯಿ ಮೇಲಿನ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ: ಸಿದ್ದರಾಮಯ್ಯ

ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ

ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ

accident

ಶೂಟಿಂಗ್ ಸೆಟ್‌ಗೆ ಬೈಕ್ ನುಗ್ಗಿಸಿದ ಪಾನಮತ್ತ: ನಟ,ನಟಿಗೆ ಗಾಯ

ಬೊಮ್ಮಾಯಿ ಅವರೂ ರಾಜಕೀಯವಾಗಿ ವೀಕ್ ಆಗಿದ್ದಾರೆ:  ಡಿ.ಕೆ.ಶಿವಕುಮಾರ್

ಬೊಮ್ಮಾಯಿ ರಾಜಕೀಯವಾಗಿ ವೀಕ್ ಆಗಿದ್ದಾರೆ:  ಡಿ.ಕೆ.ಶಿವಕುಮಾರ್

UP: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ಹಿಂದೂ ಧರ್ಮಕ್ಕೆ ಮತಾಂತರ;ಅಂತಿಮ ಇಚ್ಛೆ ಏನು?

UP: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ಹಿಂದೂ ಧರ್ಮಕ್ಕೆ ಮತಾಂತರ;ಅಂತಿಮ ಇಚ್ಛೆ ಏನು?

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯಶ್ರೀ

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯ ಶ್ರೀ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ನೂತನ ಅಧ್ಯಕ್ಷರಾಗಿ ಎಲ್‌. ವಿ. ಅಮೀನ್‌ ಪದಗ್ರಹಣ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ನೂತನ ಅಧ್ಯಕ್ಷರಾಗಿ ಎಲ್‌. ವಿ. ಅಮೀನ್‌ ಪದಗ್ರಹಣ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

MUST WATCH

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

ಹೊಸ ಸೇರ್ಪಡೆ

Untitled-1

ಸರ್ಕಾರದಿಂದ ಅನುದಾನ ತಂದು ಗ್ರಾಪಂ ಅಭಿವೃದಿಗೆ ಆದ್ಯತೆ

22vote

ನಿಮ್ಮ ಮತ ಅಸಿಂಧುವಾಗಲು ಅವಕಾಶ ಕೊಡಬೇಡಿ

1-aa

ಬೆಂಗಳೂರು: ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹಲವು ಮುಖಂಡರು

21plants

ಸಿಂಧನೂರಲ್ಲಿ ಐದು ಸಾವಿರ ಗಿಡಗಳಿಗೆ ಹೊಸ ಲುಕ್

ಅಪ್ಪು ಪುಣ್ಯಸ್ಮರಣೆ: 250 ಮಂದಿ ನೇತ್ರದಾನಕೆ ನೋಂದಣಿ 

ಅಪ್ಪು ಪುಣ್ಯಸ್ಮರಣೆ: 250 ಮಂದಿ ನೇತ್ರದಾನಕೆ ನೋಂದಣಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.