“ಮಿಸ್ಟರ್‌ ಆ್ಯಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು-2019′ ಅಂತಿಮ ಆಯ್ಕೆ ಪ್ರಕ್ರಿಯೆ

ಜೈ ತುಳುನಾಡ ಪೊರ್ಲು ಚಾರಿಟೆಬಲ್‌ ಟ್ರಸ್ಟ್‌ ಪುಣೆ

Team Udayavani, Apr 5, 2019, 11:55 AM IST

ಮುಂಬಯಿ: ಪುಣೆಯ ಜೈ ತುಳುನಾಡು ಚಾರಿಟೆಬಲ್‌ ಟ್ರಸ್ಟ್‌ ಆಯೋಸುತ್ತಿರುವ “ಮಿಸ್ಟರ್‌ ಆ್ಯಂಡ್‌ ಮಿಸ್‌ ಫೇಸ್‌ ಆಫ್‌ ತುಳುನಾಡು-2019′ ಸೌಂದರ್ಯ ಸ್ಪರ್ಧೆಯ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯು ಮಾ. 31 ರಂದು ಉಡುಪಿ ಬನ್ನಂಜೆಯಲ್ಲಿ ಟ್ರಸ್ಟ್‌ ನ ಸಂಸ್ಥಾಪಕರಾದ ಅರುಣ್‌ ಕುಮಾರ್‌ ಮತ್ತು ಅಧ್ಯಕ್ಷರಾದ ಸೂರ್ಯ ಪೂಜಾರಿ ಇವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಜರಗಿತು.

ಸುಮಾರು 25 ಕ್ಕೂ ಮಿಕ್ಕಿದ ಸ್ಪರ್ಧಾಳುಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಗೌರವ ಅಥಿತಿಗಳಾಗಿ ವಿಶ್ವನಾಥ್‌ ಶೆಟ್ಟಿ ಕೊರಂಗ್ರಪಾಡಿ, ಸುಧೀರ್‌ ಸೋನು ಕಾಪು, ವಿಲ್ಸನ್‌ ಮಣಿಪಾಲ್‌, ಭೋಜ ಸಾಲ್ಯಾನ್‌ ನಕ್ರೆ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ತೀರ್ಪುಗಾರರಾಗಿ ವಾಣಿಜ್ಯೋದ್ಯಮಿ ಪ್ರಜ್ವಲ್‌ ಕಾರ್ಕಳ, ಮುಂಬಯಿಯ ಫ್ಯಾಶನ್‌ ಕೊರಿಯೋಗ್ರಾಫರ್‌ ಸನ್ನಿಧ್‌ ಪೂಜಾರಿ ಕಟಪಾಡಿ, ವಿ4 ಚಾನೆಲ್‌ನ ಪಲ್ಲವಿ ಸಂತೋಷ್‌ ಮತ್ತು ಆಕ್ಟì ಮುಕ್ತ ವಾಹಿನಿಯ ಹಿರಿಯ ಪತ್ರಕರ್ತೆ ಅರ್ಪಿತಾ ಶೆಟ್ಟಿ ಅವರುಗಳು ಸಹಕರಿಸಿದರು. ವಿಶೇಷ ಆಮಂತ್ರಿತರಾಗಿ ಸೂರಜ್‌ ಅಮೀನ್‌, ಕಿರಣ್‌ ಪೂಜಾರಿ, ದರ್ಶನ್‌ ಪೂಜಾರಿ, ಬದ್ರು ಕಳಸ, ಸುಜಿನ್‌ ಮಲ್ಪೆ, ಗುರು ಪ್ರಸಾದ್‌ ಶೆಟ್ಟಿ ಕುಕ್ಕಿಕಟ್ಟೆ, ಹರ್ಷಿತಾ ಶೆಟ್ಟಿ, ಅಶ್ವಿ‌ತಾ ಪೂಜಾರಿ, ಸುನಂದ ಪೂಜಾರಿ, ಅಜಯ್‌ ಶೆಟ್ಟಿ, ಅಜಿತ್‌ ಶೆಟ್ಟಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ಹಾಗೂ ತೀರ್ಪುಗಾರರನ್ನು ಟ್ರಸ್ಟ್‌ನ ಪದಾಧಿಕಾರಿಗಳು ಸ್ಮರಣಿಕೆ ಮತ್ತು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಕಾರ್ಯಕ್ರಮವನ್ನು ಶಷ್ಮಿ ಭಟ್‌ ಅಜ್ಜಾವರ ನಿರೂಪಿಸಿ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ