ಮುಂಡ್ಕೂರು ದೇವಸ್ಥಾನ : ಅಷ್ಟಬಂಧ ಬ್ರಹ್ಮ ಕಲಶೋತ್ಸವ


Team Udayavani, Feb 14, 2019, 3:52 PM IST

1302mum14.jpg

ಮುಂಬಯಿ: ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಫೆ. 11ರಂದು  ಸಾವಿರಾರು ಸದ್ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಆಚರಿಸಲಾಯಿತು.
ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪುತ್ತಿಗೆ ಶ್ರೀ  ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ  ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.

ಈ ಕ್ಷೇತ್ರಕ್ಕೆ ನಾನು ಅನೇಕ ಬಾರಿ ಆಗಮಿಸಿದ್ದೇನೆ.  ಈ ಕ್ಷೇತ್ರದ ಮಹಿಮೆ ಆಗಾಧವಾದುದು. ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಮುಂಡ್ಕೂರು ದೇವಿಯನ್ನು ದುರ್ಗತಿ ನಾಶಿನಿ ಎಂದೂ ಕರೆಯುತ್ತಾರೆ. ಈ ದುರ್ಗಾ ದೇವಿಯ ಅನುಗ್ರಹ ಸದಾ ನಿಮ್ಮೊಡನೆ ಇರಲಿ ಮತ್ತು ದೇವಿ ಆರಾಧಕರಿಗೆ ಶ್ರೀರಕ್ಷೆಯಾಗಲಿ ಎಂದು  ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ವಿದ್ಯಾವಲ್ಲಭ ತೀರ್ಥರು ಅನುಗ್ರಹಿಸಿ ತುಳುನಾಡಿನ ಯಾವುದೇ ದೇವಸ್ಥಾನಗಳಿಗೆ ಬಂಟ ಸಮುದಾಯದ ಕೊಡುಗೆ ಅಪಾರವಿದೆ. ಅದ್ದರಿಂದಲೇ ನಮ್ಮ ತುಳುನಾಡಿನಲ್ಲಿ ಅಲ್ಲಲ್ಲಿ ದೇವಸ್ಥಾನಗಳು ರಾರಾಜಿಸುತ್ತಿವೆ. ದೇವರನ್ನು ದೃಢವಾಗಿ ನಂಬಿದವರಿಗೆ ಎಂದೂ ಕಷ್ಟಕಾರ್ಪಣ್ಯಗಳು ಬರುವುದಿಲ್ಲ ಎಂದರು.

ನಮ್ಮ ತುಳುನಾಡಿನಲ್ಲಿ ತ್ಯಾಗಮಯಿ  ತಾಯಿಗೆ ವಿಶೇಷ ಮಹತ್ವವಿದೆ. ಮಗುವಿಗೆ ತಂದೆ ಯಾರೆಂದು ತಿಳಿಸುವವಳು ತಾಯಿ. ನಾಡಿನ ಎಲ್ಲಾ ನದಿಗಳಿಗೂ ಸ್ತ್ರೀಯರ ಹೆಸರುಗಳಿಂದ ಕರೆಸಲ್ಪಡುತ್ತವೆೆ. ನಾವೂ ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಸ್ತ್ರೀ ಪ್ರಧಾನ ದುರ್ಗೆಯ ಕೃಪೆ ಎಲ್ಲರಿಗೂ ಇರಲಿ ಎಂದು ಡಾ| ಪ್ರಭಾಕರ ಭಟ್‌ ನುಡಿದರು.

ಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಬಾಲ್ಯದಲ್ಲಿ  ನಾವು ಮುಂಬಯಿಗೆ ಹೋಗು ವಾಗ ನಿಮಗೆ ದೇವರ ಅನುಗ್ರಹ ಸದಾ ಇರಲಿ ಎಂದು ಮಾತಾಪಿತರು, ಮನೆಮಂದಿಯರು ನಮಗೆ ಹರಸಿ ಕಳುಹಿಸುತ್ತಾರೆ. ಅದರಂತೆ ನಾವೂ ಒಳ್ಳೆಯದಾಗಿ ಗಳಿಕೆಯ ಕೆಲವಂಶವನ್ನು ನಮ್ಮ ನಾಡಿಗೆ ನೀಡಿದಾಗಲೇ ನಮ್ಮ ಜನ್ಮ ಸಾರ್ಥಕವಾಗುತ್ತದೆ. ಪ್ರತಿಯೋರ್ವರಿಗೂ ತಾವು ಹುಟ್ಟಿದ ಮಣ್ಣಿನ ಋಣ ಇದೆ. ಅದನ್ನು ತೀರಿಸುವ ಕರ್ತವ್ಯ ನಮ್ಮದು. ದೇವಿಯ ಪ್ರೇರಣೆ, ಕೃಪಾಶೀರ್ವಾದದಿಂದ ಸನ್ಮರ್ಗ, ಸನ್ನಡತೆ, ಸತ್‌ಕೀರ್ತಿಯನ್ನು ನಾವೂ ಪಡೆದಿದ್ದೇವೆ. ತಂದೆ ತಾಯಿಯನ್ನು ಮತ್ತು ದೇವರನ್ನು ಪೂಜಿಸಿದವರು ಎಂದು ಹಾಳಾಗಿಲ್ಲ ಎಂದು ನುಡಿದು ಶುಭಹಾರೈಸಿದರು.

ಅತಿಥಿ-ಗಣ್ಯರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್‌ ಕುಮಾರ್‌, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಎಂಆರ್‌ಜಿ ಗ್ರೂಪ್‌ ಬೆಂಗಳೂರು ಕಾರ್ಯಾಧ್ಯಕ್ಷ ಮತ್ತು ಮುಂಬಯಿ ಉದ್ಯಮಿ ಕೊರಂಗ್ರಪಾಡಿ ಪ್ರಕಾಶ್‌ ಶೆಟ್ಟಿ, ವೇಧಮೂರ್ತಿ  ಅನಂತ ಕೃಷ್ಣ ಆಚಾರ್ಯ ಮುಂಡ್ಕೂರು, ಮುಂಡ್ಕೂರು ದೊಡ್ಡಮನೆ ಸೀತಾರಾಮ ಶೆಟ್ಟಿ, ಮುಂಡ್ಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಂತ್ರಾಲಗುತ್ತು ಎಂ.ವಾದಿರಾಜ ಶೆಟ್ಟಿ, ಬ್ರಹ್ಮ ಕಲಶೋತ್ಸವ ಸಮಿತಿ ಮುಂಬಯಿ ಇದರ ಗೌರವ ಅಧ್ಯಕ್ಷ ಎಂ. ಜಿ. ಕರ್ಕೇರ, ನಿವೃತ್ತ ಕಸ್ಟಮ್ಸ್‌ ಅಧಿಕಾರಿ ಎರ್ಮಾಳ್‌ ರೋಹಿತ್‌ ಹೆಗ್ಡೆ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಡ್ಕೂರು ವಿದ್ಯಾವರ್ಧಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಮುಂಡ್ಕೂರು ಎಜುಕೇಶನ್‌ ಆ್ಯಂಡ್‌ ಸೋಶಿಯಲ್‌ ವೆಲ್ಫೆàರ್‌ ಟ್ರಸ್ಟ್‌ನ ಅಧ್ಯಕ್ಷ ಪ್ರಸಾದ್‌ ಎಂ. ಶೆಟ್ಟಿ ಅಂಗಡಿಗುತ್ತು, ಆ್ಯಡ್‌ರೋವಿಟ್‌ ಕೋರೊಗ್ರೇಟರ್‌ ಪ್ರೈವೇಟ್‌ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ, ಸಮಾಜ ಸೇವಕ ಮುನಿಯಾಲು  ಉದಯಕುಮಾರ್‌ ಶೆಟ್ಟಿ ಮತ್ತು ಮುಂಬಯಿ  ಸಮಿತಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವದ ಪ್ರಧಾನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಮುಂಬಯಿ ಸಮಿತಿ ಗೌರವಾಧ್ಯಕ್ಷ ಎಂ. ಜಿ. ಕರ್ಕೆàರ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಿನಾಥ್‌ ಶೆಟ್ಟಿ ಮತ್ತು ಅರುಣ್‌ ಕುಮಾರ್‌ ಭಟ್‌ ಸಭಾ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿ ಕಾರ್ಯದರ್ಶಿ ಸದಾಶಿವ ತಾಡ್ಯಾರು ವಂದಿಸಿದರು. 

 ಅನಿರೀಕ್ಷಿತವಾಗಿ ದೇವರ ಸೇವೆ ಮಾಡುವ ಭಾಗ್ಯ ನನ್ನ ಪಾಲಿಗೆ ಒದಗಿದೆ. ಇದನ್ನು ತಲೆಬಾಗಿಸಿ ಸ್ವೀಕರಿಸಿ ನನ್ನಿಂದಾದಷ್ಟು ಉತ್ತಮ ರೀತಿಯಲ್ಲಿ  ನಿಭಾಯಿಸಿದ ತೃಪ್ತಿ ನನಗಿದೆ. ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಪುಣ್ಯಪ್ರದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಮುಂಬಯಿ ಸಮಿತಿ ಚಿರಋಣಿಯಾಗಿದೆ. ದುರ್ಗಾ ಪರಮೇಶ್ವರಿ ದೇವಿಯ ಕೃಪಾಕಟಾಕ್ಷ ಎಲ್ಲರಿಗಿರಲಿ. ಭವಿಷ್ಯದಲ್ಲೂ ದೇವತಾ ಕಾರ್ಯಗಳಿಗೆ ಎಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ.   
-ರತ್ನಾಕರ ಶೆಟ್ಟಿ ಮುಂಡ್ಕೂರು,
ಅಧ್ಯಕ್ಷರು , ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ

 ಚಿತ್ರ-ವರದಿ : ರೊನಿಡಾ ಮುಂಬಯಿ

ಟಾಪ್ ನ್ಯೂಸ್

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.