Rajasthan; ಬಿಕಾನೇರ್ ನಲ್ಲಿದೆ ಇಲಿಗಳ ಮಂದಿರ: ಏನಿದರ ವೈಶಿಷ್ಟ್ಯ

ಮಂದಿರದಲ್ಲಿ ಸುಮಾರು 25 ಸಾವಿರ ಇಲಿಗಳಿವೆಯೆಂದು ಅಂದಾಜಿಸಲಾಗಿದೆ!!!

Team Udayavani, Dec 11, 2023, 7:46 PM IST

1-sad-asds

ಕಾಲ ಗರ್ಭದಲ್ಲಿ ಅಡಗಿರುವ ರಹಸ್ಯಗಳು ನಮ್ಮನ್ನು ನಿಬ್ಬೆರಾಗುಗೊಳಿಸುವುದಲ್ಲದೆ ಕೆಲವೊಮ್ಮೆ ಹೀಗೂ ಉಂಟೆ ಎಂದು ಮೂಕರನ್ನಾಗಿಸುತ್ತವೆ. ಕಳೆದ ತಿಂಗಳು ರಾಜಸ್ಥಾನ ಪ್ರವಾಸಕ್ಕೆ ತೆರಳಿದ್ದೆವು. ಮೊದಲ ದಿನ ಜಯಪುರದ ಅರಮನೆಯನ್ನೆಲ್ಲ ನೋಡಿ ಮರುದಿನ ಉದಯಪುರದ ಕಡೆಗೆ ಹೋರಟ ನಮಗೆ ಇಡೀ ದಿನ ಬಸ್ಸಿನಲ್ಲಿ ಪ್ರಯಾಣವೇ ಆಗಿತ್ತು. ಊಟಕ್ಕೆ ಉಪಹಾರ ಸ್ವೀಕರಿಸಲು ಮಾತ್ರ ವಿಶ್ರಾಂತಿ. ಹೀಗೇ ಹೋಗುತ್ತಿರುವಾಗ ನಮ್ಮನ್ನು ಕೊಂಡೊಯುತ್ತಿದ್ದ ಬಸ್ ನಿಲ್ಲಿಸುತ್ತ ನಿರ್ವಾಹಕರು ಈಗ ನಾವು ತಲಪಿದ ಜಾಗವು ಕರಣಿ ಮಾತಾ ಮಂದಿರ  ಇಲಿಗಳ ಮಂದಿರ ಎಂಬ ಹೆಸರಿನಿಂದ ಪ್ರಸಿದ್ಧ, ಇಲ್ಲಿಯ ದೇವಿಯನ್ನು ನಂಬಿಕೊಂಡು ಆರಾಧಿಸಿಕೊಂಡು ಬಂದವರಿಗೆ ಅವರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ. ಅದಕ್ಕಾಗಿ ದೂರದೂರುಗಳಿಂದ ಬಂದು ಅವರರ ಇಷ್ಟಾರ್ಥ ನಡೆಸಿಕೊಳ್ಳುತ್ತಾರೆ ಹೇಳುತ್ತಿರುವಂತೆ ನಮ್ಮ ಕಾಲುಗಳು ಮುನ್ನಡೆಯುತ್ತಿದ್ದುವು.

ದೇವಸ್ಥಾನದ ಒಳಗೆ ಹೋದರೆ ವಿಶೇಷವೆಂದರೆ ಒಳಗೆ ಹೊರಗೆ ಗರ್ಭ ಗುಡಿಯೊಳಗೆಲ್ಲ ಇಲಿಗಳದೆ ಸಾಮ್ರಾಜ್ಯ! ಅವುಗಳಿಗೆ ತಿನ್ನಲೆಂದೆ ಬಂದ ತಿಂಡಿಗಳು ಎಲ್ಲವೂ ಭಕ್ತಾದಿಗಳಿಂದ ಬಂದ ಹರಕೆ!. ಆದರೆ ವಿಶೇಷ ವೆಂದರೆ ಇಲಿಗಳನ್ನು ನಾವು ಮುಟ್ಟುವಂತಿಲ್ಲ ಆದರೆ ಇಲಿಗಳ ಸುದ್ದಿಗೂ ಹೋಗುವಂತಿಲ್ಲ. ನಮ್ಮ ಇರುವಿಕೆ ಅವುಗಳ ಗಮನ ಸೆಳೆಯುವುದೂ ಇಲ್ಲ.

ಕರಣಿ ಮಾತಾ ಯಾರು?
ಇಲಿಗಳಿಗೂ ಕರಣಿ ಮಾತಾಳಿಗೂ ಏನು ಸಂಬಂಧ ಎಂಬುದು ಪ್ರಶ್ನೆ. ಕರಣಿ ಮಾತಾ ಎಂದರೆ 14ನೇ ಶತಮಾನದಲ್ಲಿ ಜನಿಸಿದ ರಿಧು ಬಾಯಿ ಎಂಬ ಹೆಸರಿನ ಸ್ತ್ರೀ ಎಂದು ತಿಳಿಯಿತು. ಅನೇಕ ಪವಾಡಗಳನ್ನು ಮಾಡಿತೋರಿಸಿದ ಅವಳನ್ನು ಸಾಕ್ಷಾತ್ ದುರ್ಗೆಯ ಅವತಾರ ಎಂದು ನಂಬಲಾಗುತ್ತದೆ. ದೀಪೋಜಿ ಚರಣ್ ಎಂಬವರೊಡನೆ ಮದುವೆಯಾಗಿ ಎರಡೇ ವರ್ಷಗಳಲ್ಲಿ ತಂಗಿಯ ಜತೆ ಗಂಡನಿಗೆ ಮದುವೆ ಮಾಡಿಸಿ ತಾನು ಲೋಕಕಲ್ಯಾಣಕ್ಕಾಗಿ ಸನ್ಯಾಸ ದೀಕ್ಷೆ ತೆಗೆದು ಕೊಂಡಳು. ಒಮ್ಮೆ ಲಕ್ಷ್ಮಣ ಎಂಬ ಹೆಸರಿನ ತಂಗಿಯ ಮಗ, ಕಪಿಲ ಸರೋವರದಲ್ಲಿ ನೀರು ಕುಡಿಯಲು ಹೋದಾಗ ನೀರಿನಲ್ಲಿ ಮುಳುಗಿದ್ದ. ಅವನನ್ನು ಬದುಕಿಸಲು ಕರಣಿ ಮಾತಾ ಯಮನಲ್ಲಿ ಪ್ರಾರ್ಥಿಸತೊಡಗಿದಳು. ಅವಳ ಪ್ರಾರ್ಥನೆಗೆ ಮಣಿದು ಯಮನು ಲಕ್ಷ್ಮಣನನ್ನು ಇಲಿಯ ರೂಪದಲ್ಲಿ ಬದುಕಿಸಲು ಒಪ್ಪಿದನು. ಈ ಲಕ್ಷ್ಮಣ ಇಲಿಯ ಸಂತಾನವೇ ಈ ದೇವಾಲಯದಲ್ಲಿ ಮುಂದುವರೆದು ಬಂದುದಾಗಿ ನಂಬಲಾಗಿದೆ. ಈಗ ಕರಣಿ ಮಾತಾ ಮಂದಿರದಲ್ಲಿ ಸುಮಾರು 25000 ಇಲಿಗಳಿವೆಯೆಂದು ಅಂದಾಜಿಸಲಾಗಿದೆ. ಅಂತೂ ಪ್ರಕೃತಿಯ ವಿಚಿತ್ರ ನೋಡಿ ಮೂಕ ವಿಸ್ಮಿತರಾಗಿ ಉದಯಪುರದ ಕಡೆಗೆ ಪ್ರಯಾಣ ಮುಂದುವರಿಸಿದೆವು.

ಬರಹ: ಬಾಳಿಕೆ ಸುಬ್ಬಣ್ಣ ಭಟ್, ಬ್ರಾಂಪ್ಟಾನ್ ನಗರ, ಕೆನಡಾ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.