ಸಂತ ನಿರಂಕಾರಿ ಮಿಷನ್‌: ನೇವಿ ನಗರ, ನಲಸೋಪರದಲ್ಲಿ ರಕ್ತದಾನ ಶಿಬಿರ

Team Udayavani, Aug 13, 2021, 2:12 PM IST

ಸಂತ ನಿರಂಕಾರಿ ಮಿಷನ್‌: ನೇವಿ ನಗರ, ನಲಸೋಪರದಲ್ಲಿ ರಕ್ತದಾನ ಶಿಬಿರ

ಮುಂಬಯಿ: ನಲಸೋಪರ ಮತ್ತು ನೇವಿ ನಗರದಲ್ಲಿ ಆ. 8ರಂದು ಸಂತ ನಿರಂಕಾರಿ ಮಿಷನ್  ಆಯೋಜಿಸಿದ ರಕ್ತದಾನ ಶಿಬಿರ ಗಳಲ್ಲಿ 449 ಮಂದಿ ರಕ್ತದಾನಗೈದು ಮಾನವೀಯತೆ ಮೆರೆದರು.

ನೇವಿ ನಗರ ನಿರಂಕಾರಿ ಸತ್ಸಂಗ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 200 ಯುನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು. ಸಂತ ನಿರಂಕಾರಿ ಬ್ಲಿಡ್‌ ಬ್ಯಾಂಕ್‌ನವರು ಸಹಕರಿಸಿದರು. ನಲಸೋಪರದ ನಿರಂಕಾರಿ ಸತ್ಸಂಗ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ನಾಯರ್‌ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ನವರು 137 ಯುನಿಟ್‌ ರಕ್ತವನ್ನು ಸಂಗ್ರಹಿಸಿದರು. ನೇವಿ ನಗರದ ಶಿಬಿರವನ್ನು ವಿಭಾಗದ ಸೆಕ್ಟರ್‌ ಸಂಚಾಲಕ ಬಾಬು ಬಾಯಿ ಪಂಚಾಲ್‌ಜೀ ಉದ್ಘಾಟಿಸಿದರು.

ಸ್ಥಳೀಯ ಶಾಸಕರಾದ ರಾಹುಲ್‌ ನರ್ವೇಕರ್‌ ಶಿಬಿರಕ್ಕೆ ಭೇಟಿ ನೀಡಿ ಸಂತ ನಿರಂಕಾರಿ ಮಿಷನ್‌ ಸೇವಾ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೇವಾದಳದ ಅಧಿಕಾರಿಗಳು, ವಿಭಾಗದ ಸ್ಥಳೀಯ ನಿರ್ವಹಣ ಸದಸ್ಯರು ಉಪಸ್ಥಿತರಿದ್ದರು.ನಲಸೋಪರದ ಶಿಬಿರವನ್ನು ವಿಭಾಗದ ನಾಸಿಕ್‌ ವಲಯದ ಪ್ರಾದೇಶಿಕ ಉಸ್ತುವಾರಿ ಜನಾರ್ದನ ಪಾಟೀಲ್‌ ಉದ್ಘಾಟಿಸಿದರು.

ಇದನ್ನೂ ಓದಿ:ನಟಿ ರಾಧಿಕಾ ‘ಇಂಟಿಮೇಟ್’ ಫೋಟೋ ವಿರುದ್ಧ ನೆಟ್ಟಿಗರು ಆಕ್ರೋಶ : ಬಹಿಷ್ಕಾರಕ್ಕೆ ಆಗ್ರಹ

ಸಾಮಾಜಿಕ ಕಾರ್ಯಕರ್ತ ನಿಲೇಶ್‌ ಚೌಧರಿ ಶುಭ ಹಾರೈಸಿದರು. ಸಂತ ನಿರಂಕಾರಿ ಸೇವಾ ದಳದ ಅನೇಕ ಪದಾಧಿಕಾರಿಗಳು, ಸ್ಥಳೀಯ ವ್ಯವಸ್ಥಾಪಕರು ಶಿಬಿರದಲ್ಲಿ ಪಾಲ್ಗೊಂಡರು. ಸೇವಾದಳದ ಅಧಿಕಾರಿಗಳು, ಸಂತ ನಿರಂಕಾರಿ ಚಾರಿಟೆಬಲ್‌ ಫೌಂಡೇಶನ್‌ನ ಸ್ವಯಂಸೇವಕರು ಸಂಯುಕ್ತವಾಗಿ ಈ ಎರಡು ಶಿಬಿರಗಳನ್ನು ಆಯೋಜಿಸಿದ್ದರು

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.