ಜೀವನ ಧರ್ಮ ತತ್ವವನ್ನು ಬದುಕಲ್ಲಿ ಅಳವಡಿಸಿಕೊಳ್ಳಬೇಕು: ಒಡಿಯೂರುಶ್ರೀ


Team Udayavani, Nov 23, 2019, 5:35 PM IST

mumbai-tdy-2

ಪುಣೆ, ನ. 22: ಸನಾತನ ಎಂದರೆ ಮೂಲ ಪುರಾತನ ಪರಂಪರೆ. ಸನಾತನ ಸಂಸ್ಕೃತಿಯನ್ನು ಅರಿತು ಧರ್ಮದ ಹಾದಿಯಲ್ಲಿ ಹೊಸ ಪ್ರಪಂಚದಲ್ಲಿ ಹೊಂದಾಣಿಕೆಯೊಂದಿಗೆ ಸಾಗಬೇಕಾಗಿದೆ.

ಸನಾತನ ಸಂಸ್ಕೃತಿಯನ್ನು ಮರೆತರೆ ಜೀವನವು ಸರಿಯಾದ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಆದ್ದರಿಂದ ಜೀವನ ಧರ್ಮ ಎಂಬ ತತ್ವವನ್ನು ನಾವೆಲ್ಲರೂ ಬದುಕಲ್ಲಿ  ಅಳವಡಿಸಿಕೊಳ್ಳಬೇಕು. ಮನುಷ್ಯ ಸಂಘ ಜೀವಿ. ಪರೋಪಕಾರ ಧರ್ಮದೊಂದಿಗೆ ಸಮೂಹವಾಗಿ ಭಾಗಿಗಳಾಗಿ ಸೇರಿದಾಗ ಸಂಘಟನೆ ರೂಪುಗೊಳ್ಳುತ್ತದೆ. ಯುವ ಜನತೆಯ ಕಾರ್ಯ ಯೋಜನೆಗಳೊಂದಿಗೆ ಹೊಂದಾಣಿಕೆಯ ಬದುಕು ನಮ್ಮದಾ ಗಬೇಕು. ಅನುಭವ ಎಂಬುದು ಗಮ್ಯವಾಗಿ ಬರುತ್ತದೆ. ಈ ಅನುಭವವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ನಮ್ಮ ನಿತ್ಯದ ದಿನಚರಿಯಲ್ಲಿ ಮನಸ್ಸು ಮುಖ್ಯವಾದುದು.

ನಮ್ಮ ಮನೆಯಲ್ಲಿ ನಾವು ಮಾಡುವ ಊಟದಲ್ಲಿ ಕೂಡನಮ್ಮ ಮನಸ್ಸಿನೊಂದಿಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಯಾವುದೇ ರೀತಿಯ ಕರ್ಮ ಲೋಪವಾಗದಂತೆ ಸನ್ಮಾರ್ಗದ ಹಾದಿಯಲ್ಲಿ ನಡೆಯಬೇಕು. ಕರ್ಮದಲ್ಲಿ ಎರಡು ವಿಧ ಒಂದು ಕಾಮ್ಯ ಕರ್ಮ ಮತ್ತೂಂದು ಖಡ್ಡಾಯ ಕರ್ಮ. ಇದರಲ್ಲಿ ಖಡ್ಡಾಯ ಕರ್ಮ ನಮ್ಮ ಕರ್ತವ್ಯ. ತನಗೆ ಬೇಕಾದಂಥದ್ದನ್ನು ತನ್ನಿಂದತಾನೆ ಮಾಡಿಕೊಳ್ಳುವುದು ಕಾಮ್ಯ ಕರ್ಮ.

ಇದರ ತಿಳಿವಳಿಕೆ ನಮ್ಮಲ್ಲಿ ಹಾಗೂ ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ನಮಗೆಲ್ಲರಿಗೂ ಬೇಕು. ಕರ್ಮದಲ್ಲಿಎರಡು ವಿವಿಧ ಫಲವೂ ಕೂಡಾ ಲಭಿಸಬಹುದು. ನಾವು ಪ್ರೀತಿಯಿಂದ ಮಾಡುವ ಭಗವಂತನಿಗೆ ಪ್ರಿಯ ವಾಗಿ ಮಾಡುವ ಯಾವುದೇ ಕಾರ್ಯಗಳಲ್ಲಿ ಸತ್ಫಲವೇಲಭಿಸುತ್ತದೆ. ಪ್ರೀತಿ ವಾತ್ಸಲ್ಯದ ಕೊರತೆ ಬಾರದಂತೆ ಹೃದಯ ವಿಶಾಲತೆ ಮೆರೆದು ಕರ್ಮ ಯೋಜನೆ ಗಳನ್ನು ಮಾಡಬೇಕು. ನಿಜವಾದ ಪ್ರೀತಿಗೆ ಸೂಜಿಕಲ್ಲಿನಂತೆ ಎಳೆದುಕೊಳ್ಳುವ ಶಕ್ತಿಯಿದೆ ಎಂದು ಒಡಿಯೂರಿನ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ನ. 21ರಂದು ಪುಣೆಯ ಹಡಪ್ಸರ್‌ನ ಅಮರ್‌ ಕಾಟೇಜ್‌ನ ಸಾಯಿ ನಿಲಯದಲ್ಲಿ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಸೇರಿದ ಭಕ್ತರನ್ನು ಆಶೀರ್ವದಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರೀತಿಯಿಂದ ಯಶಸ್ಸನ್ನು ಪಡೆಯಬಹುದು ಅಲ್ಲದೆ ಸಮೃದ್ಧಿ ಕೀರ್ತಿಯನ್ನು ಗಳಿಸಬಹುದು. ಪ್ರೀತಿ ಎಲ್ಲಿದೆಯೋ ಅಲ್ಲಿ ಯಶಸ್ಸು ಸಮೃದ್ಧಿ ತಾನಾಗಿಯೇ ಬರುತ್ತದೆ. ಉತ್ತಮ ಸಂಸ್ಕಾರದೊಂದಿಗೆ ಧರ್ಮದ ಹಾದಿಯಲ್ಲಿ ನಾವು ಮಾಡುವಂತಹ ಯಾವುದೇ ಸಮಾಜ ಸೇವಾ ಕಾರ್ಯಗಳು ಸಮಾಜದ ಪ್ರತಿಯೋರ್ವ ಸದಸ್ಯರನ್ನು ತಲುಪುವಂತಾಗಬೇಕು. ಅನ್ಯೋನ್ಯತೆಯಿಂದ ಕೂಡಿದಾಗ ಧರ್ಮದ ಹಾದಿಯಲ್ಲಿ ಬದಲಾವಣೆಯ ಗಾಳಿ ಬೀಸಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ. ಬದುಕು ಎಂಬುವುದು ನೀರಿನಂತೆ. ಏರುಪೇರು ಎಂಬುವುದು ಸಹಜವಾದುದು. ಅರಿತು ಬೆರೆತು ಬಾಳಿದರೆ ಜೀವನ ಸಾಕ್ಷಾತ್ಕಾರ,ನಡೆ-ನುಡಿ ಮಧುರವಾಗಿದ್ದರೆಬದುಕು ಸುಂದರ. ಬದಲಾವಣೆಯ ಸಮಯದಲ್ಲಿ ಅವಕಾಶಗಳಿಗೆ ತಕ್ಕಂತೆ ಸೇವಾ ಕಾರ್ಯಗಳನ್ನು ಮಾಡುವ ಸೇವಾ ಮಾನೋಭಾವನೆ ನಮ್ಮಲ್ಲಿರಲಿ ಎಂದರು. ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಕೆ. ಶೆಟ್ಟಿ, ಸುಧಾ ಎನ್‌. ಶೆಟ್ಟಿ ದಂಪತಿ ಪಾದಪೂಜೆಗೈದರು.

ಪಾದಪೂಜೆಯ ಅನಂತರ ಭಜನೆ ಕಾರ್ಯಕ್ರಮವು ಶ್ರೀಗಳು ಹಾಗೂ ಸಾಧ್ವಿ ಮಾತಾನಂದಮಯಿ ಅವರ ಜೊತೆಯಲ್ಲಿ ನಡೆಯಿತು. ನಂತರ ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು. ಪ್ರಸಾದ ವಿತರಣೆಯ ನಂತರ ಅನ್ನ

ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ನಿಕಟಪೂರ್ವ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಮತ್ತು ಇಂದಿರಾ ಶೆಟ್ಟಿ ದಂಪತಿ, ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ, ಪುಣೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷರಾದ ಆನಂದ್‌ ಶೆಟ್ಟಿ ಮಿಯ್ನಾರು, ಬಳಗದ ಉಪಾಧ್ಯಕ್ಷರಾದ ಪ್ರಭಾಕರ ಶೆಟ್ಟಿ, ರಂಜಿತ್‌ ಶೆಟ್ಟಿ, ಗೌರವ ಕಾರ್ಯದರ್ಶಿ ರೋಹಿತ್‌ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಉಪಾಧ್ಯಕ್ಷೆ ಸುಮನಾ ಎಸ್‌. ಹೆಗ್ಡೆ, ಕಾರ್ಯದರ್ಶಿ ವೀಣಾ ಪಿ. ಶೆಟ್ಟಿ, ಬಂಟ್ಸ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಅರವಿಂದ್‌ ರೈ, ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ಅಧ್ಯಕ್ಷೆ ದೀಪಾ ಎ. ರೈ, ಕಾರ್ಯದರ್ಶಿ ಉಷಾ ಯು. ಶೆಟ್ಟಿ ಹಾಗೂ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರು ಬಂಟ್ಸ್‌ ಅಸೋಸಿಯೇಶನ್‌ನ ಪದಾಧಿಕಾರಿಗಳು ಅಪಾರ, ಸಂಖ್ಯೆಯ ಭಕ್ತರು, ಭಕ್ತಾಭಿಮಾನಿ ಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಬಳಗದ ಕಾರ್ಯ ದರ್ಶಿ ಎನ್‌. ರೋಹಿತ್‌ ಡಿ. ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ ಪುಣೆ

ಟಾಪ್ ನ್ಯೂಸ್

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ದೇಶದ ಉನ್ನತಿಗಾಗಿರುವ ಕಾನೂನುಗಳಿಗೆ ವಿರೋಧ ವಿಷಾಧನೀಯ

ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಉದ್ದೇಶ: ಯು. ಶಿವಾಜಿ ಪೂಜಾರಿ

ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಉದ್ದೇಶ: ಯು. ಶಿವಾಜಿ ಪೂಜಾರಿ

ಫೆ. 11: ಶ್ರೀ ರಾಮಾಂಜನೇಯ-ಶಿವಪಂಚಾಕ್ಷರಿ ಯಕ್ಷಗಾನ ಪ್ರದರ್ಶನ

ಫೆ. 11: ಶ್ರೀ ರಾಮಾಂಜನೇಯ-ಶಿವಪಂಚಾಕ್ಷರಿ ಯಕ್ಷಗಾನ ಪ್ರದರ್ಶನ

ಸಂಸ್ಥೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ: ಡಾ| ಕವಿತಾ ಚೌತ್ಮೋಲ್‌

ಸಂಸ್ಥೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ: ಡಾ| ಕವಿತಾ ಚೌತ್ಮೋಲ್‌

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.