ಸತ್ಯ ಧರ್ಮದಲ್ಲಿ ನಡೆದರೆ ದಾರಿ ಸುಗಮ: ತೋನ್ಸೆ ಆನಂದ ಶೆಟ್ಟಿ

Team Udayavani, Dec 7, 2019, 5:27 PM IST

ಮುಂಬಯಿ, ಡಿ. 6: ಮನುಷ್ಯನಿಗೆ ಜೀವನದಲ್ಲಿ ಬಡತನ, ಶ್ರೀಮಂತಿಕೆ ಶಾಶ್ವತವಲ್ಲ. ಸತ್ಯ, ಧರ್ಮದಲ್ಲಿ ನಡೆದರೆ ಆತನ ದಾರಿ ಸುಗಮವಾಗಿ ಸಾಗುತ್ತದೆ ಎಂದು ಮುಂಬಯಿ ಅಗ್ಯಾನಿಕ್‌ ಕೆಮಿಕಲ್ಸ್‌ ಗ್ರೂಪ್‌ ಆಪ್‌ ಕಂಪೆನಿಯ ಸಿಎಂಡಿಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ತೋನ್ಸೆ ಆನಂದ ಶೆಟ್ಟಿ ತಿಳಿಸಿದರು.

ಬಂಟ್ಸ್‌ ಹಾಸ್ಟೆಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಫಲಾನುಭವಿಗಳಿಗೆ ಸಹಾಯ ಧನ ವಿತರಿಸಿ ಮಾತನಾಡಿದ ಅವರು, ಬಂಟರು ಅಂದರೆ ಒಂದು ಕುಟುಂಬವಿದ್ದಂತೆ. ಮನುಷ್ಯನಿಗೆ ಕಷ್ಟಸುಖ ಸಾಮಾನ್ಯ, ಬಂಟ ಸಮಾಜದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಹಾಯ ಧನ ನೀಡಿ ಅವರ ಕಷ್ಟಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿದೆ. ಒಕ್ಕೂಟ ಸಹಾಯಧನ ವಿತರಿಸುವಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಹಂಚಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಈ ಸಂಘಟನೆ ಇತರ ಬಂಟರ ಸಂಘಗಳಿಗೆ ಮಾದರಿಯಾಗಿದೆ. ಮಕ್ಕಳಿಗೆ ವಿದ್ಯೆ ಕೊಡಿ. ವಿದ್ಯೆಯ ಜತೆಗೆ ಸಂಪರ್ಕವೂ ಬೆಳೆಯುತ್ತದೆ. ಮುಂದೆ ಉದ್ಯೋಗ ದೊರೆತಾಗ ಕಷ್ಟ ತನ್ನಿಂದ ತಾನೆ ನಿವಾರಣೆ ಆಗುತ್ತದೆ ಎಂದರು.

ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ಬಂಟ ಸಮಾಜದಲ್ಲಿರುವ ಬಡವರೊಂದಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಯಾವತ್ತೂ ಇರುತ್ತದೆ. ಕಷ್ಟ ಹೇಳಿಕೊಂಡು ಬರುವವರಿಗೆ ಪರಿಹಾರ ಬದಗಿಸುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಕಷ್ಟ ದಲ್ಲಿರುವವರು ಮಾತ್ರ ಒಕ್ಕೂಟಕ್ಕೆ ಅರ್ಜಿ ಸಲ್ಲಿಸಿ, ಸಮಸ್ಯೆ ಇದ್ದಾಗ ಒಕ್ಕೂಟ ತತ್‌ಕ್ಷಣ ಸ್ಪಂದಿಸುತ್ತದೆ. ಸಮಾಜಕ್ಕೆ ಹತ್ತಿರವಾದ ಮತ್ತು ಸಮಾಜ ಮೆಚ್ಚುವ ಕೆಲಸಗಳನ್ನು ಒಕ್ಕೂಟ ಮಾಡುತ್ತಿದೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಈ ಬಾರಿ 26 ಲಕ್ಷಕ್ಕೂ ಮಿಕ್ಕಿದ ಧನ ಸಹಾಯವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು. ಸಮಾರಂಭದಲ್ಲಿ 36 ಮಂದಿಗೆ ಮನೆ ಕಟ್ಟಲು ನೆರವು, 14 ಮಂದಿಗೆ ವೈದ್ಯಕೀಯ ನೆರವು ಹಾಗೂ 13 ಮಂದಿಗೆ ಮದುವೆಗೆ ಸಹಾಯಧನ ವಿತರಿಸಲಾಯಿತು.

ಸಮಾರಂಭದಲ್ಲಿ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್‌ ಅಡಪ ಸಂಕಬೈಲ್‌, ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯ ಕೊಲ್ಲಾಡಿ ಬಾಲಕೃಷ್ಣ ರೈ, ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಕೆಮ್ಮಣ್ಣು ಬಂಟರ ಸಂಘದ ಅಧ್ಯಕ್ಷ ತೋನ್ಸೆ ಮನೋಹರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಉಲ್ಲಾಸ್‌ ಆರ್‌ ಶೆಟ್ಟಿ ಪೆರ್ಮುದೆ, ಸುರೇಶ್‌ ಶೆಟ್ಟಿ ಸೂರಿಂಜೆ, ಹೇಮನಾಥ ಶೆಟ್ಟಿ, ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್‌ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತೀಕ್ಷಾ ಶೆಟ್ಟಿ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಸಾಧನೆಗೈದ ಸಾನ್ವಿ ಆರ್‌. ಶೆಟ್ಟಿ ಸುರತ್ಕಲ್‌ ಹಾಗೂ ಒಕ್ಕೂಟಕ್ಕೆ ಪ್ರಥಮ ನಿರ್ದೇಶಕರಾಗಿ 25 . ರೂ. ದೇಣಿಗೆ ನೀಡಿದ ತೋನ್ಸೆ ಆನಂದ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಒಕ್ಕೂಟದಿಂದ ಎಂ. ಫ್ರೆಂಡ್ಸ್‌ ಸಂಸ್ಥೆಯ ಕಾರುಣ್ಯ ಯೋಜನೆಗೆ ವೆನ್ಲಾಕ್ಆ ಸ್ಪತ್ರೆಯಲ್ಲಿ ರೋಗಿಗಳ ಪೋಷಕರಿಗೆ ಒಂದು ತಿಂಗಳ ರಾತ್ರಿ ಊಟದ ವ್ಯವಸ್ಥೆಗೆ ಧನ ಸಹಾಯ ನೀಡಲಾಯಿತು. ಎಂ. ಫ್ರೆಂಡ್ಸ್‌ ಸಂಸ್ಥೆಯ ಸುಜಾಹ್‌ ಮೊಹಮ್ಮದ್‌ ಅಲಂಕಾರ್‌ ಮತ್ತು ಝುಬೇರ್‌ ಕಂಬಳಬೆಟ್ಟು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕೂಟದ ಜತೆಕಾರ್ಯದರ್ಶಿ ಸತೀಶ್‌ ಅಡಪ ಸಂಕಬೈಲ್‌ ಕಾರ್ಯಕ್ರಮ ನಿರ್ವಹಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ