ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌: ಕಾರ್ಲೋಸ್‌ ಅಲ್ಕರಾಝ್ ನ್ಯೂಯಾರ್ಕ್‌ ರಾಜ

ಕ್ಯಾಸ್ಪರ್‌ ರೂಡ್‌ ವಿರುದ್ಧ 6-4, 2-6, 7-6 (7-1), 6-3 ಗೆಲುವು; ಪ್ರಥಮ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ

Team Udayavani, Sep 12, 2022, 11:23 PM IST

ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌: ಕಾರ್ಲೋಸ್‌ ಅಲ್ಕರಾಝ್ ನ್ಯೂಯಾರ್ಕ್‌ ರಾಜ

ನ್ಯೂಯಾರ್ಕ್‌: ಸ್ಪೇನ್‌ ಎಂದೊಡನೆ ಟೆನಿಸ್‌ ಪ್ರೇಮಿಗಳಿಗೆ ನೆನಪಿಗೆ ಬರುವುದು ರಫೆಲ್‌ ನಡಾಲ್‌. ಈ ಬಾರಿಯ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಲ್ಲೂ ನಡಾಲ್‌ ನೆಚ್ಚಿನ ಆಟಗಾರನಾಗಿದ್ದರು. ಆದರೆ ಬೇಗನೇ ಹೊರಬಿದ್ದರು. ನಡಾಲ್‌ ನಿರ್ಗಮಿಸಿದರೇನಂತೆ, ಸ್ಪೇನ್‌ನಿಂದ ನಾನಿದ್ದೇನೆ ಎಂದು ಸಾರತೊಡಗಿದ 19 ವರ್ಷದ ಕಾರ್ಲೋಸ್‌ ಅಲ್ಕರಾಝ್ ಯುಎಸ್‌ ಓಪನ್‌ ಪ್ರಶಸ್ತಿಯನ್ನೆತ್ತಿ ಹೊಸ ಇತಿಹಾಸವನ್ನೇ ಬರೆದರು.

ಫೈನಲ್‌ ಹಣಾಹಣಿಯಲ್ಲಿ ಕಾರ್ಲೋಸ್‌ ಅಲ್ಕರಾಝ್ 6-4, 2-6, 7-6 (7 -1), 6-3 ಅಂತರದಿಂದ ನಾರ್ವೆಯ ಕ್ಯಾಸ್ಪರ್‌ ರೂಡ್‌ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಈ ವರ್ಷದ ಎರಡೂ ಗ್ರ್ಯಾಮ್‌ಸ್ಲಾಮ್‌ ಫೈನಲ್‌ಗ‌ಳಲ್ಲಿ ರೂಡ್‌ಗೆ ಪ್ರಶಸ್ತಿಯ “ರೋಡ್‌’ ಮುಚ್ಚಲ್ಪಟ್ಟಿತು. ಕಳೆದ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲೂ ಅವರು ಪ್ರಶಸ್ತಿ ಸುತ್ತು ತಲುಪಿದ್ದರು. ಅಲ್ಲಿ ರಫೆಲ್‌ ನಡಾಲ್‌ಗೆ ಶರಣಾಗಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಇಲ್ಲಿ ಸ್ಪೇನ್‌ನ ಯುವ ಆಟಗಾರನ ಬಲೆಗೆ ಬಿದ್ದರು.

ಒತ್ತಡದಲ್ಲಿ ಒಲಿದ ಗೆಲುವು
ಈ ವರ್ಷ ಎರಡು ಮಾಸ್ಟರ್-1000 ಪ್ರಶಸ್ತಿ ಜಯಿಸಿದ ಸಾಧನೆ ಕಾರ್ಲೋಸ್‌ ಅಲ್ಕರಾಝ್ ಅವರದಾಗಿತ್ತು. ಆದರೆ ಯುಎಸ್‌ ಓಪನ್‌ಗೂ ಮೊದಲು ನಡೆದ ಮಾಂಟ್ರಿಯಲ್‌ ಕೂಟದ ಮೊದಲ ಸುತ್ತಿನಲ್ಲೇ ಅನುಭವಿಸಿದ ಸೋಲು, ಸಿನ್ಸಿನಾಟಿ ಮಾಸ್ಟರ್ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾದ ಸೋಲು ಅಲ್ಕರಾಝ್ ಅವರ ಆತ್ಮವಿ ಶ್ವಾಸವನ್ನು ಕುಸಿಯುವಂತೆ ಮಾಡಿದ್ದು ಸುಳ್ಳಲ್ಲ. ಅಲ್ಲದೇ ಫೈನಲ್‌ಗ‌ೂ ಹಿಂದಿನ 3 ಪಂದ್ಯಗಳಲ್ಲಿ ಸತತ 5 ಸೆಟ್‌ಗಳ ಹೋರಾಟವನ್ನು ಅವರು ನಡೆಸಿದ್ದರು.

ನಂಬರ್‌ ವನ್‌ ರ್‍ಯಾಂಕಿಂಗ್‌
ಯುಎಸ್‌ ಓಪನ್‌ ಗೆಲುವಿನೊಂದಿಗೆ ಕಾರ್ಲೋಸ್‌ ಅಲ್ಕರಾಝ್ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದರು. ಅವರೀಗ ವಿಶ್ವದ ನಂಬರ್‌ ವನ್‌ ಟೆನಿಸಿಗನೆಂಬ ಗೌರವಕ್ಕೆ ಭಾಜನರಾಗಿದ್ದಾರೆ. ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಈ ಸ್ಥಾನದಿಂದ ಕೆಳಗಿಳಿದರು. 1973ರಲ್ಲಿ ಎಟಿಪಿ ರ್‍ಯಾಂಕಿಂಗ್‌ ಆರಂಭವಾದಂದಿನಿಂದ ನಂ.1 ಆಟಗಾರನೆನಿಸಿದ ವಿಶ್ವದ ಕಿರಿಯ ಟೆನಿಸಿಗನೆಂಬುದು ಅಲ್ಕರಾಝ್ ಹಿರಿಮೆ.

ಜೆಕ್‌ ಜೋಡಿಗೆ ಡಬಲ್ಸ್‌ ಪ್ರಶಸ್ತಿ
ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ- ಕ್ರೆಜಿಕೋವಾ ಯುಎಸ್‌ ಓಪನ್‌ ವನಿತಾ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ಅದೃಷ್ಟದ ಸಂಪೂರ್ಣ ಬೆಂಬಲ ಪಡೆದ ಇವರು ಆತಿಥೇಯ ಅಮೆರಿಕದ ಕ್ಯಾಟಿ ಮೆಕ್‌ನಾಲಿ-ಟಯ್ಲರ್‌ ಟೌನ್ಸೆಂಡ್‌ ವಿರುದ್ಧ 3-6, 7-5, 6-1 ಅಂತರದ ಗೆಲುವು ಸಾಧಿಸಿದರು.

 

 

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.