59ನೇ ನ್ಯಾಶನಲ್‌ ಆ್ಯತ್ಲೆಟಿಕ್ಸ್‌:ನೀರಜ್‌ ಚೋಪ್ರಾ ಮೇಲೆ ನಿರೀಕ್ಷೆ

Team Udayavani, Oct 10, 2019, 5:44 AM IST

ರಾಂಚಿ: 59ನೇ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಗುರುವಾರದಿಂದ ರಾಂಚಿಯಲ್ಲಿ ಆರಂಭವಾಗಲಿದ್ದು, ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಮರಳಿ ಕಣಕ್ಕೆ ಇಳಿಯಲಿದ್ದಾರೆ.

ಕಳೆದ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಜಕಾರ್ತಾ ಏಶ್ಯಾಡ್‌ನ‌ಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್‌ ಚೋಪ್ರಾ, ಮಣಿಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಒಂದು ವರ್ಷ ಕಾಲ ಸುದೀರ್ಘ‌ ವಿಶ್ರಾಂತಿಯಲ್ಲಿದ್ದರು.

2018ರ ಸೆಪ್ಟಂಬರ್‌ನಲ್ಲಿ ಜಾಲಹಳ್ಳಿಯಲ್ಲಿ ನಡೆದ ಸರ್ವೀಸಸ್‌ ಆ್ಯತ್ಲೆಟಿಕ್ಸ್‌ನಲ್ಲಿ 83.90 ಮೀ. ದೂರದ ಸಾಧನೆಯೊಂದಿಗೆ ಬಂಗಾರ ಗೆದ್ದ ಬಳಿಕ ನೀರಜ್‌ ಸ್ಪರ್ಧಾತ್ಮಕ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಟೋಕಿಯೊ ಒಲಿಂಪಿಕ್ಸ್‌ಗೆ ಕೇವಲ 10 ತಿಂಗಳಿರುವಾಗ ನೀರಜ್‌ ಅವರ ಪುನರ್‌ ಪ್ರವೇಶ ಸಹಜವಾಗಿಯೇ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ನೀರಜ್‌ ಹೊರತುಪಡಿಸಿದರೆ ಸ್ಪ್ರಿಂಟರ್‌ ಮೊಹಮ್ಮದ್‌ ಅನಾಸ್‌, ವಿ.ಕೆ. ವಿಸ್ಮಯಾ, ಲಾಂಗ್‌ಜಂಪರ್‌ ಶ್ರೀಶಂಕರ್‌, ಮೆಟ್ರಿಕ್‌ ಮೈಲರ್‌ ಜಿನ್ಸನ್‌ ಜಾನ್ಸನ್‌, ಜಾವೆಲಿನ್‌ ಎಸೆತಗಾರ್ತಿ ಅನ್ನು ರಾಣಿ, ಸ್ಪ್ರಿಂಟರ್‌ ದ್ಯುತಿ ಚಂದ್‌, ಶಾಟ್‌ಪುಟರ್‌ ತೇಜಿಂದರ್‌ಪಾಲ್‌ ಸಿಂಗ್‌ ತೂರ್‌ ಮೇಲೂ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕಳೆದ ದೋಹಾ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಇವರೆಲ್ಲ ನಿರಾಸೆ ಮೂಡಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ