ಐಒಸಿ ಆ್ಯತ್ಲೆಟಿಕ್ಸ್ ಸಮಿತಿ : ಶೂಟರ್ ಅಭಿನವ್ ಬಿಂದ್ರಾ ಆಯ್ಕೆ
Team Udayavani, Aug 11, 2018, 8:28 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಆ್ಯತ್ಲೆಟಿಕ್ಸ್ ಸಮಿತಿಯ ಸದಸ್ಯರಾಗಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಆಯ್ಕೆಯಾಗಿದ್ದಾರೆ. ಬಿಂದ್ರಾ ಈ ಗೌರವ ಸಂಪಾದಿಸುತ್ತಿರುವ ಭಾರತದ 2ನೇ ಕ್ರೀಡಾಳು. ಈ ಹಿಂದೆ ಸೈನಾ ನೆಹ್ವಾಲ್ ಈ ಹುದ್ದೆ ಅಲಂಕರಿಸಿದ್ದರು.
“ಐಒಸಿ ನೀಡಿರುವ ಗೌರವವನ್ನು ಕೃತಜ್ಞತೆಯಿಂದ ಸ್ವೀಕರಿಸಿದ್ದೇನೆ. ಆ್ಯತ್ಲೀಟ್ಗಳ ಪರವಾಗಿ ಕೆಲಸ ಮಾಡುವ, ಒಲಿಂಪಿಕ್ಸ್ ಸಂಬಂಧಪಟ್ಟ ಸಭೆಗಳಲ್ಲಿ ಭಾರತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅಭಿನವ್ ಬಿಂದ್ರಾ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.