ಅಡಿಲೇಡ್‌: 50-50 ಅವಕಾಶ


Team Udayavani, Dec 6, 2017, 10:56 AM IST

06-15.jpg

ಅಡಿಲೇಡ್‌: ಅಡಿಲೇಡ್‌ನ‌ ಹಗಲು-ರಾತ್ರಿ ಆ್ಯಶಸ್‌ ಟೆಸ್ಟ್‌ ಪಂದ್ಯ ತೀವ್ರ ಕುತೂಹಲ ಹಂತಕ್ಕೆ ತಲುಪಿದೆ. ಇಂಗ್ಲೆಂಡ್‌ ಗೆಲುವಿಗೆ 354 ರನ್‌ ಗುರಿ ನಿಗದಿಯಾಗಿದ್ದು, 4ನೇ ದಿನದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 176 ರನ್‌ ಮಾಡಿದೆ.

ಬುಧವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 6 ವಿಕೆಟ್‌ಗಳಿಂದ 178 ರನ್‌ ಗಳಿಸಬೇಕಾದ ಸವಾಲು ಆಂಗ್ಲರ ಮುಂದಿದೆ. ಜೋ ರೂಟ್‌ 67 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಇಂಗ್ಲೆಂಡ್‌ ಪಾಲಿನ ಭರವಸೆಯಾಗಿ ಉಳಿದಿದ್ದಾರೆ. ಇವರೊಂದಿಗೆ 5 ರನ್‌ ಮಾಡಿರುವ ಕ್ರಿಸ್‌ ವೋಕ್ಸ್‌ ಆಡುತ್ತಿದ್ದಾರೆ. ಮೊಯಿನ್‌ ಅಲಿ, ಜಾನಿ ಬೇರ್‌ಸ್ಟೊ, ಸ್ಟುವರ್ಟ್‌ ಬ್ರಾಡ್‌ ಮೇಲೆ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಪಂದ್ಯ ಸ್ಪಷ್ಟ ಫ‌ಲಿತಾಂಶ ಕಾಣುವುದು ನಿಶ್ಚಿತವಾಗಿದ್ದು, ಇತ್ತಂಡಗಳಿಗೂ 50-50 ಅವಕಾಶ ಇದೆ ಎನ್ನಲಡ್ಡಿಯಿಲ್ಲ. 

ಇಂಗ್ಲೆಂಡಿನ ಗುರಿಯನ್ನು 354ಕ್ಕೆ ನಿಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಕ್ರಿಸ್‌ ವೋಕ್ಸ್‌. ಆ್ಯಂಡರ್ಸನ್‌ 43ಕ್ಕೆ 5 ಹಾಗೂ ವೋಕ್ಸ್‌ 36ಕ್ಕೆ 4 ವಿಕೆಟ್‌ ಹಾರಿಸಿ ಆಸ್ಟ್ರೇಲಿಯದ ದ್ವಿತೀಯ ಸರದಿಯನ್ನು ಕೇವಲ 138 ರನ್ನಿಗೆ ಸೀಮಿತಗೊಳಿಸಿದರು. ಆಸೀಸ್‌ 4ಕ್ಕೆ 53 ರನ್‌ ಮಾಡಿದಲ್ಲಿಂದ ಮಂಗಳವಾರದ ಆಟವನ್ನು ಮುಂದುವರಿಸಿತ್ತು. ಆ್ಯಂಡ ರ್ಸನ್‌ ಆಸ್ಟ್ರೇಲಿಯದಲ್ಲಿ ಆಡಲಾದ ಆ್ಯಶಸ್‌ ಟೆಸ್ಟ್‌ನಲ್ಲಿ 5 ವಿಕೆಟ್‌ ಉರುಳಿಸಿದ್ದು ಇದೇ ಮೊದಲು. ಆಸ್ಟ್ರೇಲಿಯದ ದ್ವಿತೀಯ ಸರದಿ ಯಲ್ಲಿ ತಲಾ 20 ರನ್‌ ಮಾಡಿದ ಖ್ವಾಜಾ ಮತ್ತು ಸ್ಟಾರ್ಕ್‌ ಅವರದೇ ಹೆಚ್ಚಿನ ಗಳಿಕೆ.

ಈ ಕುಸಿತವನ್ನು ಕಂಡಾಗ, “ಅಡಿಲೇಡ್‌ ಓವಲ್‌’ ವೇಗಿಗಳಿಗೆ ಇಷ್ಟೊಂದು ನೆರವು ನೀಡುತ್ತಿದ್ದುದನ್ನು ಗಮನಿಸಿದರೆ ಅಂತಿಮ ದಿನ ಆಸೀಸ್‌ ವೇಗಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇಂಗ್ಲೆಂಡಿನ ದ್ವಿತೀಯ ಸರದಿಯ 4 ವಿಕೆಟ್‌ಗಳಲ್ಲಿ ಮೂರನ್ನು ವೇಗಿಗಳೇ ಹಾರಿಸಿದ್ದಾರೆ. ಅಲ್ಲದೇ ಕಾಂಗರೂ ನೆಲದಲ್ಲಿ ಈವರೆಗೆ ಇಂಗ್ಲೆಂಡ್‌ 350 ಪ್ಲಸ್‌ ರನ್‌ ಬೆನ್ನಟ್ಟಿ ಗೆದ್ದ ಉದಾಹರಣೆ ಇಲ್ಲ. 1928ರ ಮೆಲ್ಬರ್ನ್ ಟೆಸ್ಟ್‌ನಲ್ಲಿ 332 ರನ್‌ ಪೇರಿಸಿ ಗೆದ್ದದ್ದು ದಾಖಲೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-8ಕ್ಕೆ 442 ಡಿಕ್ಲೇರ್‌ ಮತ್ತು 138 (ಖ್ವಾಜಾ 20, ಸ್ಟಾರ್ಕ್‌ 20, ಮಾರ್ಷ್‌ 19, ಆ್ಯಂಡರ್ಸನ್‌ 43ಕ್ಕೆ 5, ವೋಕ್ಸ್‌ 36ಕ್ಕೆ 4). ಇಂಗ್ಲೆಂಡ್‌-227 ಮತ್ತು 4 ವಿಕೆಟಿಗೆ 176 (ರೂಟ್‌ ಬ್ಯಾಟಿಂಗ್‌ 67, ಸ್ಟೋನ್‌ಮ್ಯಾನ್‌ 36, ಮಾಲನ್‌ 29, ಸ್ಟಾರ್ಕ್‌ 65ಕ್ಕೆ 2, ಕಮಿನ್ಸ್‌ 29ಕ್ಕೆ 1, ಲಿಯೋನ್‌ 37ಕ್ಕೆ 1).

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.