ಅಂಟ್ವೆರ್ಪ್ ಎಟಿಪಿ ಟೆನಿಸ್: ಮರ್ರೆ ಚಾಂಪಿಯನ್
Team Udayavani, Oct 21, 2019, 3:41 AM IST
ಆಂಟೆÌರ್ಪ್ (ಬೆಲ್ಜಿಯಂ): ಅಂಟ್ವೆರ್ಪ್ ಎಟಿಪಿ ಟೆನಿಸ್: ಮರ್ರೆ ಚಾಂಪಿಯನ್ ಬ್ರಿಟನ್ನಿನ ಆ್ಯಂಡಿ ಮರ್ರೆ 2017ರ ಬಳಿಕ ಮೊದಲ ಎಟಿಪಿ ಪ್ರಶಸ್ತಿಯನ್ನೆತ್ತಿದ್ದಾರೆ. ಅವರು ಬೆಲ್ಜಿಯಂನಲ್ಲಿ ನಡೆದ “ಅಂಟ್ವೆರ್ಪ್ ಎಟಿಪಿ ಟೆನಿಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರವಿವಾರ ರಾತ್ರಿಯ ಫೈನಲ್ನಲ್ಲಿ ಮಾಜಿ ನಂ.1 ಟೆನಿಸಿಗ ಆ್ಯಂಡಿ ಮರ್ರೆ ಸ್ವಿಜರ್ಲ್ಯಾಂಡಿನ ಸ್ಟಾನಿಸ್ಲಾಸ್ ವಾವ್ರಿಂಕ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ದಿಟ್ಟ ಹೋರಾಟ ನಡೆಸಿ ಗೆದ್ದು ಬಂದರು. ಅಂತರ 3-6, 6-4, 6-4. ಇದು ಮರ್ರೆ ಜಯಿಸಿದ 46ನೇ ಟೆನಿಸ್ ಪ್ರಶಸ್ತಿ. ವರ್ಷಾರಂಭದಲ್ಲಿ ನಡೆದ ಸೊಂಟದ ಶಸ್ತ್ರಚಿಕಿತ್ಸೆ ಬಳಿಕ ಮರ್ರೆ ಸುದೀರ್ಘ ವಿಶ್ರಾಂತಿಯಲ್ಲಿದ್ದರು.