ಫಿಫಾ ವಿಶ್ವಕಪ್‌: ಸೆಮಿಫೈನಲ್‌ ಕ್ಷಣಗಣನೆ; ಮಹಾವಿಜಯಕ್ಕೆ ಕಾದಿವೆ

ಆರ್ಜೆಂಟೀನಾ-ಕ್ರೊವೇಶಿಯ; ಮೆಸ್ಸಿ ಕನಸು ನನಸಾಗುವುದೇ? ಮೋಡಿಗೈವರೇ ಮೊಡ್ರಿಕ್‌?

Team Udayavani, Dec 13, 2022, 7:30 AM IST

ಫಿಫಾ ವಿಶ್ವಕಪ್‌: ಸೆಮಿಫೈನಲ್‌ ಕ್ಷಣಗಣನೆ; ಮಹಾವಿಜಯಕ್ಕೆ ಕಾದಿವೆ

ದೋಹಾ: ಇದು ಕಣ್ಣೀರಿನ ವಿಶ್ವಕಪ್‌ ಆಗಿ ಗೋಚರಿಸುತ್ತಿದೆ. ಮೊದಲು ನೇಮರ್‌, ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ… ಮುಂದಿನ ಸರದಿ ಯಾರದು? ಆರ್ಜೆಂಟೀನಾದ “ಪ್ಲೇಮೇಕರ್‌’ ಲಿಯೋನೆಲ್‌ ಮೆಸ್ಸಿಗೆ ಇಂಥದೊಂದು ಸ್ಥಿತಿ ಎದುರಾದೀತೇ ಅಥವಾ ಅವರು ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ಯಬಹುದೆ? ಮಂಗಳವಾರ ನಡುರಾತ್ರಿ ಬಳಿಕ ಇದಕ್ಕೆ ನಿಧಾನವಾಗಿ ಉತ್ತರ ಲಭಿಸತೊಡಗುತ್ತದೆ.

ಫೈನಲ್‌ ಪಂದ್ಯದ ತಾಣವಾದ “ಲುಸೈಲ್‌ ಸ್ಟೇಡಿಯಂ’ನಲ್ಲಿ ಫಿಫಾ ವಿಶ್ವಕಪ್‌ ಕೂಟದ ಮೊದಲ ಸೆಮಿಫೈನಲ್‌ ನಡೆಯಲಿದ್ದು, ಆರ್ಜೆಂಟೀನಾ ಕಳೆದ ಸಲದ ರನ್ನರ್ ಅಪ್‌ ಕ್ರೊವೇಶಿಯ ಸವಾಲನ್ನು ಎದುರಿಸಲಿದೆ.
ಆರ್ಜೆಂಟೀನಾ ಇದಕ್ಕೂ ಹಿಂದಿನ ರನ್ನರ್ ಅಪ್‌ ತಂಡ (2014) ಎಂಬುದನ್ನು ಮರೆಯುವಂತಿಲ್ಲ.
ಆರ್ಜೆಂಟೀನಾ 1986ರ ಬಳಿಕ ವಿಶ್ವಕಪ್‌ ಎತ್ತಿಲ್ಲ. ಅದು ಮರಡೋನಾ ಕಾಲವಾಗಿತ್ತು. 35ರ ಹರೆಯದ ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ಉಪಾಂತ್ಯಕ್ಕೆ ತಂದು ನಿಲ್ಲಿಸಿದ್ದಾರೆ. ಅವರದು “ಕ್ಲೆವರ್‌ ಕ್ರಿಯೇಟರ್‌’ ಪಾತ್ರ. ಮುಂದಿನದು ಅದೃಷ್ಟದಾಟ.

ಸಹಜವಾಗಿಯೇ ಆರ್ಜೆಂಟೀನಾ ಮೇಲೆ ನಿರೀಕ್ಷೆ ಹೆಚ್ಚಿದೆ. ಒತ್ತಡವೂ ಅಷ್ಟೇ ಇದೆ. ಬಹುತೇಕ ಕೊನೆಯ ವಿಶ್ವಕಪ್‌ನಲ್ಲಿ ಆಡಲಿರುವ ಮೆಸ್ಸಿ ಪಾಲಿಗಂತೂ ಇದು ಪ್ರತಿಷ್ಠೆಯ ಕದನ. ದೇಶಕ್ಕೆ ಮತ್ತು ತನಗಾಗಿ ಸ್ವತಃ ತಾನೇ ಟ್ರೋಫಿ ಗೆದ್ದು ತರಬೇಕಾದ ತೀರಾ ಸಂದಿಗ್ಧ ಕಾಲ. ಮೆಸ್ಸಿ ಈ ಕೂಟದಲ್ಲಿ 4 ಗೋಲು ಬಾರಿಸಿ ನಾಯಕನ ಆಟವನ್ನೇನೋ ಆಡಿದ್ದಾರೆ. ಆದರೆ ಸೆಮಿಫೈನಲ್‌ ಎಂಬುದು ಡಿಫ‌ರೆಂಟ್‌ ಬಾಲ್‌ ಗೇಮ್‌.

ಸೌದಿ ಅರೇಬಿಯ ವಿರುದ್ಧ ಮೊದಲ ಲೀಗ್‌ ಪಂದ್ಯ ಸೋತಾಗ ಆರ್ಜೆಂಟೀನಾ ಎದುರಿಸಿದ ಸಂಕಟ ಮತ್ತು ಒತ್ತಡ ಇಡೀ ಫ‌ುಟ್‌ಬಾಲ್‌ ಜಗತ್ತಿಗೇ ಗೊತ್ತು. ಇದು ವಿಶ್ವಕಪ್‌ಇತಿಹಾಸದ “ಬಿಗ್ಗೆಸ್ಟ್‌ ಅಪ್‌ಸೆಟ್‌’ ಎನಿಸಿತು. ಆದರೆ ಇವೆಲ್ಲದರಿಂದ ಮೇಲೆದ್ದು ಬಂದ ಆರ್ಜೆಂಟೀನಾದ ಉಪಾಂತ್ಯ ಪಯಣ ನಿಜಕ್ಕೂ ಒಂದು ಯಶೋಗಾಥೆ. ಉಳಿದೆರಡೂ ಲೀಗ್‌ ಪಂದ್ಯಗಳನ್ನು ಗೆದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ಡಚ್‌ ಪಡೆಗೆ ಸೋಲಿನೇಟು ನೀಡಿ ಮುನ್ನುಗ್ಗಿತು.

“ಕೊಪಾ ಅಮೆರಿಕ’ ಚಾಂಪಿಯನ್‌ ಹಾಗೂ 36 ಪಂದ್ಯಗಳ ಅಜೇಯ ಸಾಧನೆಯೊಂದಿಗೆ ವಿಶ್ವಕಪ್‌ ಆಡಲು ಬಂದ ಆರ್ಜೆಂಟೀನಾವೇ ಸದ್ಯದ ಲೆಕ್ಕಾಚಾರದಲ್ಲಿ ನೆಚ್ಚಿನ ತಂಡವಾಗಿದೆ. 40 ಸಾವಿರದಷ್ಟು ಅಭಿಮಾನಿಗಳು “ಲುಸೈಲ್‌ ಸ್ಟೇಡಿಯಂ’ನಲ್ಲಿ ಮೆಸ್ಸಿ ಪಡೆಗೆ ಬೆಂಬಲ ನೀಡಲಿದ್ದಾರೆ.

ಕ್ರೊವೇಶಿಯದ ಕೆಚ್ಚು ಹೆಚ್ಚಿದೆ
ಇನ್ನೊಂದೆಡೆ ಕೇವಲ 4 ಮಿಲಿಯನ್‌ ಜನಸಂಖ್ಯೆಯುಳ್ಳ ಪುಟ್ಟ ರಾಷ್ಟ್ರ ಕ್ರೊವೇಶಿಯ ತೊಡೆ ತಟ್ಟಿ ನಿಂತಿದೆ. ಕಳೆದ ಫೈನಲ್‌ನಲ್ಲಿ ಫ್ರಾನ್ಸ್‌ಗೆ ಶರಣಾದ ಬಳಿಕ ತಂಡದ ಕೆಚ್ಚು ಹೆಚ್ಚಿದಂತಿದೆ. ಆರ್ಜೆಂಟೀನಾಕ್ಕೆ ಮೆಸ್ಸಿ ಇದ್ದಂತೆ, ಕ್ರೊವೇಶಿಯಕ್ಕೆ ಲುಕಾ ಮೊಡ್ರಿಕ್‌ ಆಧಾರವಾಗಿದ್ದಾರೆ. ಹೀಗಾಗಿ ಇದು ಮೆಸ್ಸಿ ವರ್ಸಸ್‌ ಮೊಡ್ರಿಕ್‌ ಕದನವೆಂದೂ ಬಿಂಬಿಸಲ್ಪಟ್ಟಿದೆ.

ಕಳೆದ ಸಲದ ಫೈನಲ್‌ ಹಾದಿಯಲ್ಲಿ ಕ್ರೊವೇಶಿಯನ್‌ ಪಡೆ ಆರ್ಜೆಂಟೀನಾವನ್ನೂ ಮಣಿಸಿತ್ತು ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬೇಕು. ಲೀಗ್‌ ಪಂದ್ಯದಲ್ಲಿ ಅದು 3-0 ಭರ್ಜರಿ ಗೆಲುವು ಸಾಧಿಸಿತ್ತು. ಈ ಪರಾಕ್ರಮವನ್ನು ಅದು ಪುನರಾವರ್ತಿಸೀತೇ ಎಂಬ ಕುತೂಹಲ ಇದ್ದೇ ಇದೆ. ರಕ್ಷಣ ವಿಭಾಗದ ಮಾರ್ಸೆಲೊ ಬೊÅಝೋವಿಕ್‌, ಮ್ಯಾಟಿಯೊ ಕೊವಾಸಿಕ್‌ ಆಟ ಕ್ರೊವೇಶಿಯ ಪಾಲಿಗೆ ನಿರ್ಣಾಯಕ.

ಕ್ರೊವೇಶಿಯ ಆಡಿದ 2018ರ ಎಲ್ಲ ನಾಕೌಟ್‌ ಪಂದ್ಯಗಳೂ ಹೆಚ್ಚುವರಿ ಅವಧಿಗೆ ವಿಸ್ತರಿಸಲ್ಪಟ್ಟಿದ್ದವು. ಈ ಬಾರಿ ಜಪಾನ್‌ ಹಾಗೂ ಬ್ರಝಿಲ್‌ ತಂಡಗಳೆರಡನ್ನೂ ಶೂಟೌಟ್‌ ಮಾಡಿ ಹೊರದಬ್ಬಿದೆ. ಅದರಲ್ಲೂ ಫೇವರಿಟ್‌ ಬ್ರಝಿಲ್‌ ವಿರುದ್ಧ ಆಡುವಾಗ ಕ್ರೊವೇಶಿಯ ಪರಿಪೂರ್ಣ ಪ್ರದರ್ಶನ ನೀಡಿತ್ತು. ಇನ್ನು ಆರ್ಜೆಂಟೀನಾಕ್ಕೆ ಏನು ಕಾದಿದೆಯೋ?

18 ಹಳದಿ ಕಾರ್ಡ್‌ ನೀಡಿದ ರೆಫ್ರಿ ಮನೆಗೆ!
ನೆದರ್ಲೆಂಡ್ಸ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಲಯೋನೆಲ್‌ ಮೆಸ್ಸಿ ನಾಯಕತ್ವದ ಆರ್ಜೆಂಟೀನಾ ಗೆಲುವು ಸಾಧಿಸಿತ್ತು. ವಿಚಿತ್ರವೆಂದರೆ, ಈ ಪಂದ್ಯದಲ್ಲಿ ರೆಫ್ರಿಯಾಗಿದ್ದ ಸ್ಪೇನ್‌ನ ಆ್ಯಂಟೊನಿಯೊ ಮ್ಯಾಟಿಯೊ ಲಾಹೊಝ್, ಒಂದೇ ಪಂದ್ಯದಲ್ಲಿ 18 ಹಳದಿ ಕಾರ್ಡ್‌ಗಳನ್ನು ನೀಡಿದ್ದು! ಇದು ಎರಡೂ ತಂಡಗಳ ಕೆಂಗಣ್ಣಿಗೆ ಗುರಿಯಾಗಿದೆ.

ಆಟಗಾರರು ಅಪಾಯಕಾರಿ, ಅಶಿಸ್ತಿನ ವರ್ತನೆ ತೋರಿದಾಗ ರೆಫ್ರಿ ಹಳದಿ ಕಾರ್ಡ್‌ ನೀಡುತ್ತಾರೆ. ಇದು ಎಚ್ಚರಿಕೆಯ ಗಂಟೆ. ಮತ್ತೂಮ್ಮೆ ಹಳದಿ ಕಾರ್ಡ್‌ ಸಿಕ್ಕಿದರೆ ಆಟಗಾರ ಪಂದ್ಯದಿಂದಲೇ ಹೊರನಡೆಯಬೇಕಾಗುತ್ತದೆ.

“ಈ ಪಂದ್ಯದಲ್ಲಿ ಲಾಹೋಝ್ ತಲೆಬುಡವಿಲ್ಲದೇ ಹಳದಿ ಕಾರ್ಡ್‌ ನೀಡಿದ್ದಾರೆ, ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಬೇಡಿ’ ಎಂದು ಸ್ವತಃ ಆರ್ಜೆಂಟೀನಾ ನಾಯಕ ಮೆಸ್ಸಿ ಕಿಡಿಕಾರಿದ್ದಾರೆ. ಇದಕ್ಕೆ ಸರಿಯಾಗಿ ಫಿಫಾ ಬಿಡುಗಡೆ ಮಾಡಿದ ವಿಶ್ವಕಪ್‌ನ ಉಳಿದ ಪಂದ್ಯಗಳ ರೆಫ್ರಿಗಳ ಪಟ್ಟಿಯಲ್ಲಿ ಲಾಹೋಝ್ ಹೆಸರು ಕಾಣಿಸಿಕೊಂಡಿಲ್ಲ!

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.