ಆಸೀಸ್ ವಿರುದ್ಧ ಗೆದ್ದಅರ್ಜೆಂಟೀನಾ: ಕ್ವಾರ್ಟರ್ ಫೈನಲ್ ಗೆ ಮೆಸ್ಸಿ ಪಡೆ
Team Udayavani, Dec 4, 2022, 8:46 AM IST
ದೋಹಾ: ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಕತಾರ್ ಫುಟ್ಬಾಲ್ ವಿಶ್ವಕಪ್ 2022ರ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟೀನಾ 2-1 ಅಂತರದ ಗೆಲುವು ಸಾಧಿಸಿತು.
ಅಹಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪರ ನಾಯಕ ಲಿಯೋನೆಲ್ ಮೆಸ್ಸಿ 35ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ, ಆಸ್ಟ್ರೇಲಿಯಾದ ಗೋಲ್ಕೀಪರ್ ಮ್ಯಾಥ್ಯೂ ರಿಯಾನ್ ಅವರ ತಪ್ಪಿನ ಅವಕಾಶ ಪಡೆದ ಜೂಲಿಯನ್ ಅಲ್ವಾರೆಜ್ ಗೋಲು ಗಳಿಸಿ ಅರ್ಜೆಂಟೀನಾ ತಂಡಕ್ಕೆ 2-0 ಮುನ್ನಡೆಯನ್ನು ಒದಗಿಸಿದರು.
ಇದನ್ನೂ ಓದಿ:ಮಿವಿ ವಾಚ್ ಮಾಡೆಲ್ ಇ; ಮೇಡ್ ಇನ್ ಇಂಡಿಯಾ ಸ್ಮಾರ್ಟ್ವಾಚ್ ಬಿಡುಗಡೆ
ಆದರೆ 77 ನೇ ನಿಮಿಷದಲ್ಲಿ ಅರ್ಜೆಂಟೀನಾ ಆಟಗಾರ ಎಂಜೊ ಫೆರ್ನಾಡೆಜ್ ಅವರು ಆಸ್ಟ್ರೇಲಿಯಾಗೆ ಒಂದು ಗೋಲು ಹೊಡೆದು ತಪ್ಪು ಮಾಡಿದರು. ಕ್ರೇಗ್ ಗುಡ್ವಿನ್ ಬಾಕ್ಸ್ನ ಅಂಚಿನಿಂದ ಹೊಡದ ಚೆಂಡು ಗೋಲು ಪೋಸ್ಟಿಗೆ ಹೋಯಿತು. ಕೊನೆಯಲ್ಲಿ 2-1 ಅಂತರ ಉಳಿಸಿಕೊಂಡ ಅರ್ಜೆಂಟೀನಾ ಪಂದ್ಯ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿತು.
ಅರ್ಜೆಂಟೀನಾ ತಂಡವು ಕ್ವಾರ್ಟರ್ ಫೈನಲ್ ನಲ್ಲಿ ನೆದರ್ಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಡಿಸೆಂಬರ್ 10ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…