ಬೇರ್‌ಸ್ಟೊ ಶತಕದ ಬಳಿಕ ಸ್ಮಿತ್‌ ಕಪ್ತಾನನಾಟ

Team Udayavani, Dec 16, 2017, 6:25 AM IST

steve-smith-batting.jpg

ಪರ್ತ್: ಜಾನಿ ಬೇರ್‌ಸ್ಟೊ ಅವರ ಶತಕದ ಹೊರತಾಗಿಯೂ ದಿಢೀರ್‌ ಕುಸಿದ ಇಂಗ್ಲೆಂಡ್‌ ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ 403 ರನ್ನಿಗೆ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಆಸ್ಟ್ರೇಲಿಯಕ್ಕೆ ಸ್ಟೀವ್‌ ಸ್ಮಿತ್‌ ಅವರ ಕಪ್ತಾನನ ಆಟ ರಕ್ಷಣೆಯೊದಗಿಸಿದ್ದು, ದ್ವಿತೀಯ ದಿನದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 203 ರನ್‌ ಮಾಡಿದೆ.

ಆ್ಯಶಸ್‌ ಸರಣಿಯ ತೃತೀಯ ಟೆಸ್ಟ್‌ ಪಂದ್ಯದ ಮೊದಲ ದಿನ ಇಂಗ್ಲೆಂಡ್‌ 4 ವಿಕೆಟಿಗೆ 305 ರನ್‌ ಮಾಡಿತ್ತು. ಆದರೆ ಶುಕ್ರವಾರ ದಿಢೀರ್‌ ಕುಸಿತಕ್ಕೆ ಸಿಲುಕಿ 98 ರನ್‌ ಸೇರಿಸುವಷ್ಟರಲ್ಲಿ ಆಲೌಟ್‌ ಆಯಿತು. ಮಾಲನ್‌ 110ರಿಂದ ಹಾಗೂ ಬೇರ್‌ಸ್ಟೊ 75 ರನ್ನಿನಿಂದ ದಿನದಾಟ ಮುಂದುವರಿಸಿದರು. ಇವರ ಜತೆಯಾಟ 368ರ ತನಕ ಸಾಗಿತು. ಆಗ ಇಂಗ್ಲೆಂಡ್‌ 500ರ ಗಡಿ ದಾಟಿ ಮುನ್ನುಗ್ಗುವ ಸಾಧ್ಯತೆ ಬಲವಾಗಿತ್ತು. ಆದರೆ ಮಾಲನ್‌ ವಿಕೆಟ್‌ ಕಿತ್ತ ಲಿಯೋನ್‌ ಆಂಗ್ಲರ ಕುಸಿತಕ್ಕೆ ಚಾಲನೆ ನೀಡಿದರು. ಬರೀ 35 ರನ್‌ ಅಂತರದಲ್ಲಿ ಇಂಗ್ಲೆಂಡಿನ 6 ವಿಕೆಟ್‌ಗಳು ಹಾರಿಹೋದವು! ಬೇರ್‌ಸ್ಟೊ ಅವರ 4ನೇ ಶತಕ ಇಂಗ್ಲೆಂಡ್‌ ಸರದಿಯ ದ್ವಿತೀಯ ದಿನದ ಆಕರ್ಷಣೆಯಾಗಿತ್ತು. 75ರಲ್ಲಿದ್ದ ಅವರು 119ರ ತನಕ ಬ್ಯಾಟಿಂಗ್‌ ವಿಸ್ತರಿಸಿದರು. 215 ಎಸೆತಗಳ ಈ ಸೊಗಸಾದ ಆಟದ ವೇಳೆ 18 ಬೌಂಡರಿ ಸಿಡಿಯಲ್ಪಟ್ಟಿತು. ಇದು ಆಸ್ಟ್ರೇಲಿಯ ವಿರುದ್ಧ ಬೇರ್‌ಸ್ಟೊ ಬಾರಿಸಿದ ಮೊದಲ ಸೆಂಚುರಿ. 110 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಮಾಲನ್‌ ಮತ್ತೆ 30 ರನ್‌ ಸೇರಿಸಿದರು. ಹೀಗೆ, ಅವರ ಮೊದಲ ಟೆಸ್ಟ್‌ ಶತಕ 140ರ ತನಕ ಬೆಳೆಯಿತು. 227 ಎಸೆತ ಎದುರಿಸಿದ ಮಾಲನ್‌ 19 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಮಾಲನ್‌-ಬೇರ್‌ಸ್ಟೊ ಜೋಡಿಯಿಂದ 5ನೇ ವಿಕೆಟಿಗೆ 237 ರನ್‌ ಹರಿದು ಬಂತು.

ಆಸ್ಟ್ರೇಲಿಯ ಪರ ಸ್ಟಾರ್ಕ್‌ 4, ಹ್ಯಾಝಲ್‌ವುಡ್‌ 3, ಕಮಿನ್ಸ್‌ 2 ಹಾಗೂ ಲಿಯೋನ್‌ ಒಂದು ವಿಕೆಟ್‌ ಉರುಳಿಸಿದರು.

ಸ್ಮಿತ್‌-ಖ್ವಾಜಾ ದಿಟ್ಟ ಬ್ಯಾಟಿಂಗ್‌
ಜವಾಬು ನೀಡತೊಡಗಿದ ಆಸ್ಟ್ರೇಲಿಯ ಆರಂಭಿಕರಾದ ವಾರ್ನರ್‌ (22) ಮತ್ತು ಬಾನ್‌ಕ್ರಾಫ್ಟ್ (25) ಅವರನ್ನು 55  ರನ್ನಿಗೆ ಕಳೆದುಕೊಂಡಿತು. ಈ ಎರಡೂ ವಿಕೆಟ್‌ ಓವರ್ಟನ್‌ ಪಾಲಾದವು.

3ನೇ ವಿಕೆಟಿಗೆ ಜತೆಗೂಡಿದ ಉಸ್ಮಾನ್‌ ಖ್ವಾಜಾ ಮತ್ತು ಸ್ಟೀವ್‌ ಸ್ಮಿತ್‌ ಸೇರಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. ಇಂಗ್ಲೆಂಡ್‌ ಆಕ್ರಮಣವನ್ನು ತೀವ್ರ ಎಚ್ಚರಿಕೆಯಿಂದ ನಿಭಾಯಿಸುತ್ತ ಸಾಗಿದ ಇವರಿಂದ 124 ರನ್‌ ಒಟ್ಟುಗೂಡಿತು.

ಖ್ವಾಜಾ 50 ರನ್‌ ಮಾಡಿ ದಿನದಾಟದ ಕೊನೆಯ ಹಂತದಲ್ಲಿ ವೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. 123 ಎಸೆತಗಳ ಈ ಆಟದಲ್ಲಿ 8 ಬೌಂಡರಿ ಸೇರಿತ್ತು. ಸ್ಮಿತ್‌ 122 ಎಸೆತಗಳಿಂದ 92 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (14 ಬೌಂಡರಿ, 1 ಸಿಕ್ಸರ್‌). ಶನಿವಾರ 22ನೇ ಟೆಸ್ಟ್‌ ಶತಕ ಪೂರ್ತಿಗೊಳ್ಳುವುದು ಬಹುತೇಕ ಖಚಿತ. ಇವರೊಂದಿಗೆ 7 ರನ್‌ ಗಳಿಸಿರುವ ಶಾನ್‌ ಮಾರ್ಷ್‌ ಕ್ರೀಸಿನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-403 (ಮಾಲನ್‌ 140, ಬೇರ್‌ಸ್ಟೊ 119, ಸ್ಟೋನ್‌ಮ್ಯಾನ್‌ 56, ಸ್ಟಾರ್ಕ್‌ 91ಕ್ಕೆ 4, ಹ್ಯಾಝಲ್‌ವುಡ್‌ 92ಕ್ಕೆ 3, ಕಮಿನ್ಸ್‌ 84ಕ್ಕೆ 2). ಆಸ್ಟ್ರೇಲಿಯ-3 ವಿಕೆಟಿಗೆ 203 (ಸ್ಮಿತ್‌ ಬ್ಯಾಟಿಂಗ್‌ 92, ಖ್ವಾಜಾ 50, ಓವರ್ಟನ್‌ 46ಕ್ಕೆ 2).

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.