ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕ್ ವಿರುದ್ಧ ಮಲೇಷ್ಯಾಕ್ಕೆ 3-1 ಗೆಲುವು
Team Udayavani, Aug 4, 2023, 12:25 AM IST
ಚೆನ್ನೈ: ಫಿರ್ಹಾನ್ ಅಶಾರಿ ಅವರ ಅವಳಿ ಗೋಲಿನ ನೆರವಿನಿಂದ ಮಲೇಷ್ಯಾ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದ ಪಂದ್ಯದಲ್ಲಿ ಪಾಕಿಸ್ಥಾನವನ್ನು 3-1 ಗೋಲುಗಳಿಂದ ಸೋಲಿಸಿದೆ.
ಮಲೇಷ್ಯಾ ಪರ ಅಶಾರಿ ಅವರು 28 ಮತ್ತು 29ನೇ ನಿಮಿಷದಲ್ಲಿ ಗೋಲು ಬಾರಿಸಿ ಸಂಭ್ರಮಿ ಸಿದರೆ ಶೆಲ್ಲೊ ಸಿಲ್ವೆರಿಯಸ್ 44ನೇ ನಿಮಿಷದಲ್ಲಿ ತಂಡದ ಮೂರನೇ ಗೋಲು ಹೊಡೆದರು. ಪಾಕಿ ಸ್ಥಾನದ ಪರ ಹೊಡೆದ ಏಕೈಕ ಗೋಲನ್ನು 55ನೇ ನಿಮಿಷದಲ್ಲಿ ಅಬ್ದುಲ್ ರೆಹ್ಮಾನ್ ಹೊಡೆದಿದ್ದರು.
ಪಂದ್ಯದ ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿದ ಮಲೇಷ್ಯಾ ಆಟಗಾರರು ಗೋಲು ಹೊಡೆಯಲು ಹಲವು ಪ್ರಯತ್ನ ನಡೆಸಿದರು. ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲು ಹೊಡೆಯುವ ಮೂಲಕ ಮಲೇಷ್ಯಾ ಮೇಲುಗೈ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ