Asian Games ವಾಲಿಬಾಲ್‌: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತ


Team Udayavani, Sep 22, 2023, 11:42 PM IST

1-sdsad

ಹ್ಯಾಂಗ್‌ಝೂ: ಭಾರತದ ಪುರುಷರ ವಾಲಿಬಾಲ್‌ ತಂಡ ಏಷ್ಯನ್‌ ಗೇಮ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಶುಕ್ರವಾರದ ಮುಖಾಮುಖೀಯಲ್ಲಿ ಚೈನೀಸ್‌ ತೈಪೆ ವಿರುದ್ಧ ಭಾರತ 3-0 ಅಂತರದ (25-22, 25-22, 25-21) ಗೆಲುವು ಸಾಧಿಸಿತು. ರವಿವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಸೆಣಸಲಿದೆ.

3 ಗೇಮ್ಸ್‌ ತೀವ್ರ ಪೈಪೋಟಿಯಿಂದ ಕೂಡಿದ್ದವು. ಒಂದು ಗಂಟೆ, 25 ನಿಮಿ ಷಗಳ ತನಕ ಹೋರಾಟ ಸಾಗಿತು. ಅಮಿತ್‌ ಸರ್ವಾಧಿಕ 16 ಅಂಕ ಗಳಿಸಿದರೆ, ಕರ್ನಾಟಕದ ಅಶ್ವಲ್‌ ರೈ 14 ಅಂಕ ತಂದಿತ್ತರು. ವಿನೀತ್‌ ಕುಮಾರ್‌ 12 ಅಂಕ ಗಳಿಸಿದರು.

ಟಿಟಿ: ಗೆಲುವಿನ ಆರಂಭ
ಪುರುಷರ ಹಾಗೂ ವನಿತಾ ಟೇಬಲ್‌ ಟೆನಿಸ್‌ ತಂಡ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರದ ಸ್ಪರ್ಧೆಯಲ್ಲಿ ಯೆಮನ್‌ ವಿರುದ್ಧ ಭಾರತ 3-0 ಅಂತರದ ಗೆಲುವು ಸಾಧಿಸಿತು. ಅಚಂತ ಶರತ್‌ ಕಮಲ್‌, ಜಿ. ಸಥಿಯನ್‌ ಮತ್ತು ಹರ್ಮೀತ್‌ ದೇಸಾಯಿ ಗೆಲುವು ತಂದಿತ್ತರು.

41 ವರ್ಷದ ಅಚಂತ ಶರತ್‌ ಕಮಲ್‌ ಅವರಿಲ್ಲಿ ಕೊನೆಯ ಸಲ ಏಷ್ಯನ್‌ ಗೇಮ್ಸ್‌ ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಇಬ್ರಾಹಿಂ ಅಬ್ದುಲ್ಲ ಹಕೀಮ್‌ ಮೊಹಮ್‌ ಗುಬ್ರಾನ್‌ ವಿರುದ್ಧ 11-3, 11-4, 11-6 ಅಂತರದ ಜಯ ಸಾಧಿಸಿದರು. ವನಿತಾ ತಂಡ ಸಿಂಗಾಪುರ ವಿರುದ್ಧ 3-2 ಅಂತರದಿಂದ ಗೆದ್ದು ಬಂದಿತು. ಮಣಿಕಾ ಬಾತ್ರಾ, ಐಹಿಕಾ ಮುಖರ್ಜಿ, ಶ್ರೀಜಾ ಅಕುಲ್‌ ಭಾರತ ತಂಡದ ಸದಸ್ಯರಾಗಿದ್ದರು.

ರೋವರ್‌ ಬಲ್ರಾಜ್‌ ಫೈನಲ್‌ಗೆ
ಭಾರತದ ರೋವರ್‌ ಬಲ್ರಾಜ್‌ ಪನ್ವಾರ್‌ ಪುರುಷರ ಸಿಂಗಲ್‌ ಸ್ಕಲ್ಸ್‌ ವಿಭಾಗದಲ್ಲಿ “ಫೈನಲ್‌ಎ’ ತಲುಪಿದ್ದಾರೆ. 24 ವರ್ಷದ ಪನ್ವಾರ್‌ ಸೆಮಿಫೈನಲ್‌ ಎಫ್ ಎ/ಬಿ2 ವಿಭಾಗದಲ್ಲಿ 7:22:22 ಸಮಯದಲ್ಲಿ ಈ ದೂರವನ್ನು ಕ್ರಮಿಸಿದರು. “ಫೈನಲ್‌ ಎ’ಯ ಮೊದಲ ಮೂವರಿಗೆ ಪದಕ ಒಲಿಯಲಿದೆ.

 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.