ಜೊಕೋವಿಕ್ ಬಲೆಗೆ ಬಿದ್ದ ರಫೆಲ್ ನಡಾಲ್
Team Udayavani, Jan 13, 2020, 6:15 AM IST
ಸಿಡ್ನಿ: ರವಿವಾರದ “ಎಟಿಪಿ ಕಪ್ ಫೈನಲ್’ನಲ್ಲಿ ಸರ್ಬಿಯಾದ ನೊವಾಕ್ ಜೊಕೋವಿಕ್ ತಮ್ಮ ಬದ್ಧ ಎದುರಾಳಿ ರಫೆಲ್ ನಡಾಲ್ ಅವರಿಗೆ ಸೋಲುಣಿಸಿ ಸಂಭ್ರಮ ಆಚರಿಸಿದ್ದಾರೆ. ವಿಶ್ವದ ನಂ.1 ಟೆನಿಸಿಗನನ್ನು ಜೊಕೋ 6-2, 7-6 (7-4) ಅಂತರದಿಂದ ಮಣಿಸಿದರು.
ಇದರೊಂದಿಗೆ ಸರ್ಬಿಯಾ-ಸ್ಪೇನ್ ನಡುವಿನ ತಂಡ ಸ್ಪರ್ಧೆ 1-1 ಅಂತರದಿಂದ ಸಮಬಲಕ್ಕೆ ಬಂತು. ಅನಂತರದ ಸಿಂಗಲ್ಸ್ ನಲ್ಲಿ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್ 7-5, 6-1ರಿಂದ ಸರ್ಬಿಯಾದ ಡುಸಾನ್ ಲಾಜೋವಿಕ್ಗೆ ಸೋಲುಣಿಸಿದ್ದರು.
“ಪ್ರತೀ ಸಲವೂ ನಡಾಲ್ ವಿರುದ್ಧ ಆಡುವಾಗ ಏನೋ ರೋಮಾಂಚನವಾಗುತ್ತದೆ. ಇಂದು ನಾನು ಪರಿಪೂರ್ಣ ಆರಂಭ ಪಡೆದೆ. ಕೊನೆಯಲ್ಲಿ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿದ್ದರೂ ನಾನು ನರ್ವಸ್ ಆಗಲಿಲ್ಲ’ ಎಂಬುದಾಗಿ ಜೊಕೋವಿಕ್ ಹೇಳಿದರು.