ಎಟಿಪಿ ಶ್ರೇಯಾಂಕ: ಮತ್ತೆ ಅಗ್ರಸ್ಥಾನಕ್ಕೆ ಮರಳಿದ ನೊವಾಕ್ ಜೊಕೋವಿಕ್
Team Udayavani, Mar 22, 2022, 11:00 PM IST
ನ್ಯೂಯಾರ್ಕ್: ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ಕಾರಣ ರಷ್ಯಾದ ಆಟಗಾರ ಡ್ಯಾನಿಲ್ ಮೆಡ್ವಡೇವ್ ವಿಶ್ವ ನಂ.1 ಪಟ್ಟವನ್ನು ಕಳೆದುಕೊಂಡಿದ್ದಾರೆ . ಹೀಗಾಗಿ ನೊವಾಕ್ ಜೊಕೋವಿಕ್ ಮತ್ತೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
ದುಬಾೖ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ವಿಫಲವಾಗಿದ್ದ ಜೊಕೋವಿಕ್ 2ನೇ ಸ್ಥಾನಕ್ಕೆ ಕುಸಿದಿದ್ದರು.
ಇದನ್ನೂ ಓದಿ:ಬಾಂಗ್ಲಾ ವೇಗಿ ಟಸ್ಕಿನ್ ಅಹ್ಮದ್ ಗೆ ನಿರಾಕ್ಷೇಪಣಾಪತ್ರ ನೀಡಲು ಬಿಸಿಬಿ ನಕಾರ
ಭಾರೀ ಜಿಗಿತ ಕಂಡ ಫ್ರಿಟ್ಜ್
ನೂತನ ಶ್ರೇಯಾಂಕದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ಭಾರೀ ಜಿಗಿತ ಕಂಡಿದ್ದಾರೆ . ಮೊದಲ ಬಾರಿಗೆ ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆದ್ದ ಅವರು 13ನೇ ಸ್ಥಾನಿಯಾಗಿದ್ದಾರೆ . ಇಂಡಿಯನ್ ವೆಲ್ಸ್ ಫೈನಲ್ನಲ್ಲಿ 24 ವರ್ಷದ ಟೇಲರ್ ಫ್ರಿಟ್ಜ್ ಅಮೋಘ ಪ್ರದರ್ಶನ ನೀಡಿ ರಫೆಲ್ ನಡಾಲ್ ಅವರಿಗೆ ನೇರ ಸೆಟ್ಗಳ ಆಘಾತವಿಕ್ಕಿದ್ದರು.