ತಾಲಿಬಾನ್ಗೆ ಎಚ್ಚರಿಕೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯ
Team Udayavani, Sep 10, 2021, 11:40 AM IST
ಸಿಡ್ನಿ: ಮಹಿಳೆಯರಿಗೆ ಕ್ರಿಕೆಟ್ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿದ್ದರೆ ಆಸ್ಟ್ರೇಲಿಯ ಮತ್ತು ಆಫ್ಘಾನಿಸ್ಥಾನ ಪುರುಷರ ತಂಡಗಳ ನಡುವಿನ ಐತಿಹಾಸಿಕ ಟೆಸ್ಟ್ ಸರಣಿಯನ್ನು ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಾಲಿಬಾನ್ಗೆ ಖಡಕ್ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಆಫ್ಘಾನಿಸ್ಥಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಕ್ರಮೇಣ ಶರಿಯಾ ಕಾನೂನು ಜಾರಿಗೆ ತರುತ್ತಿದ್ದು ಇದರ ಭಾಗವಾಗಿ ಇದೀಗ ಮಹಿಳೆಯರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿದ್ದಾರೆ.
“ಮಹಿಳೆಯರ ಕ್ರೀಡೆ ಅಭಿವೃದ್ಧಿಯನ್ನು ಬೆಂಬಲಿಸುವುದು ಆಸ್ಟ್ರೇಲಿಯದ ಕರ್ತವ್ಯವಾಗಿದೆ. ಮಹಿಳೆಯರ ಕ್ರಿಕೆಟ್ಗೆ ತಾಲಿಬಾನ್ ಅನುಮತಿ ನೀಡದಿದ್ದರೆ ಮುಂಬರುವ ನವೆಂಬರ್ನಲ್ಲಿ ಅಫ್ಘಾನಿಸ್ಥಾನ ವಿರುದ್ಧ ಹೋಬರ್ಟ್ನಲ್ಲಿ ನಡೆಯಬೇಕಿರುವ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನು ರದ್ದುಗೊಳಿತ್ತೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.