T20; ಹರಿಣಗಳಿಗೆ ತವರಲ್ಲೇ ಸೋಲು: ಸರಣಿ ಜಯಿಸಿದ ಆಸ್ಟ್ರೇಲಿಯ
Team Udayavani, Sep 2, 2023, 11:40 PM IST
ಡರ್ಬನ್: ದಕ್ಷಿಣ ಆಫ್ರಿಕಾವನ್ನು ಅವರದೇ ಅಂಗಳ ದಲ್ಲಿ ಮಣಿಸಿದ ಆಸ್ಟ್ರೇ ಲಿಯ ಟಿ20 ಸರಣಿಯನ್ನು ತನ್ನದಾಗಿ ಸಿಕೊಂಡಿದೆ. ಡರ್ಬನ್ನಲ್ಲಿ ನಡೆದ ದ್ವಿತೀಯ ಪಂದ್ಯವನ್ನು ಆಸೀಸ್ 8 ವಿಕೆಟ್ಗಳಿಂದ ಜಯಿಸಿತು.
ಮೊದಲು ಬ್ಯಾಟಿಂಗ್ ನಡೆ ಸಿದ ದಕ್ಷಿಣ ಆಫ್ರಿಕಾ 8 ವಿಕೆ ಟಿಗೆ 164 ರನ್ ಗಳಿಸಿದರೆ, ಆಸ್ಟ್ರೇಲಿಯ ಕೇವಲ 14.5 ಓವರ್ಗಳಲ್ಲಿ ಎರಡೇ ವಿಕೆಟಿಗೆ 168 ರನ್ ಬಾರಿಸಿ ಅಮೋಘ ಗೆಲುವು ಸಾಧಿಸಿತು. ಮೊದಲ ಪಂದ್ಯವನ್ನು ಕಾಂಗರೂ ಪಡೆ 111 ರನ್ನುಗಳಿಂದ ಗೆದ್ದಿತ್ತು.
ಸೀನ್ ಅಬೋಟ್ ಮತ್ತು ನಥನ್ ಎಲ್ಲಿಸ್ ತಲಾ 3 ವಿಕೆಟ್, ಜೇಸನ್ ಬೆಹ್ರೆನ್ಡಾರ್ಫ್ 2 ವಿಕೆಟ್ ಉರುಳಿಸಿ ಹರಿಣಗಳನ್ನು ಕಾಡಿದರು. ನಾಯಕ ಐಡನ್ ಮಾರ್ಕ್ರಮ್ ಸರ್ವಾಧಿಕ 49 ರನ್, ಓಪನರ್ ಟೆಂಬ ಬವುಮ 35 ರನ್ ಮಾಡಿದರು.
ಚೇಸಿಂಗ್ ವೇಳೆ ಆರಂಭಕಾರ ಮ್ಯಾಥ್ಯೂ ಶಾರ್ಟ್ ಮತ್ತು ನಾಯಕ ಮಿಚೆಲ್ ಮಾರ್ಷ್ ಸಿಡಿದು ನಿಂತರು. ಶಾರ್ಟ್ 30 ಎಸೆತಗಳಿಂದ 66 ರನ್ ಬಾರಿಸಿದರೆ (7 ಫೋರ್, 4 ಸಿಕ್ಸರ್), ಮಾರ್ಷ್ 39 ಎಸೆತಗಳಿಂದ 79 ರನ್ ಹೊಡೆದು ಅಜೇಯರಾಗಿ ಉಳಿದರು. ಸಿಡಿಸಿದ್ದು 8 ಬೌಂಡರಿ ಹಾಗೂ 6 ಸಿಕ್ಸರ್.