ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಲಿಂಗಿ ಆಟಗಾರ್ತಿಯರು

Team Udayavani, Apr 20, 2019, 6:00 AM IST

ಮಲ್ಬರ್ನ್: ಜಾಗತಿಕ ಕ್ರಿಕೆಟ್‌ ಲೋಕ ಕಳೆದ ವಾರ ವಿಶೇಷ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ನ್ಯೂಜಿಲೆಂಡ್‌ ಬ್ಯಾಟ್ಸ್‌ವುಮನ್‌ ಹೆಯ್ಲೆ ಜೆನ್ಸನ್‌ ಹಾಗೂ ಆಸ್ಟ್ರೇಲಿಯದ ಆಟಗಾರ್ತಿ ನಿಕೋಲಾ ಹ್ಯಾನ್ಕಾಕ್‌ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಸುದ್ದಿಯಾಗಿದ್ದಾರೆ.

ಸಲಿಂಗಿ ವಿವಾಹಕ್ಕೆ ನೂರಾರು ಗಣ್ಯರು ಆಗಮಿಸಿ ಶುಭಾಶಯ ಕೋರಿದ್ದಾರೆ. ಈ ಮದುವೆಯ ಸಂಭ್ರಮವನ್ನು ಬಿಗ್‌ ಬಾಶ್‌ ಟಿ20 ಕ್ರಿಕೆಟ್‌ ಕೂಟದ ಪ್ರಮುಖ ತಂಡವಾಗಿರುವ ಮೆಲ್ಬರ್ನ್ ಸ್ಟಾರ್ ತಂಡವು ತನ್ನ ಟ್ವೀಟರ್‌ ಖಾತೆಯಿಂದ ಫೋಟೋ ಪ್ರಕಟಿಸಿ ತಿಳಿಸಿದೆ. ಮಾತ್ರವಲ್ಲ ನವದಂಪತಿ
ಗಳಿಗೆ ಮದುವೆಯ ಶುಭಾಶಯಗಳು ಎನ್ನುವ ಸಂದೇಶವನ್ನು ತಿಳಿಸಿದೆ. ಹೆಯ್ಲೆ ಜೆನ್ಸನ್‌ ನ್ಯೂಜಿಲೆಂಡ್‌ ಪರ 8 ಏಕದಿನ ಹಾಗೂ 20 ಟಿ20 ಕ್ರಿಕೆಟ್‌ ಕೂಟವನ್ನು ಆಡಿದ್ದಾರೆ. ನಿಕೋಲಾ ಇನ್ನು ಅನ್‌ಕ್ಯಾಪ್ಡ್ ಆಟಗಾರ್ತಿಯಾಗಿದ್ದಾರೆ.

2013ರಿಂದ ನ್ಯೂಜಿಲೆಂಡ್‌ನ‌ಲ್ಲಿ ಸಲಿಂಗಿ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ಇದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಡೆನ್‌ ವ್ಯಾನ್‌ ನಿಕೆರ್ಕ್‌ ಹಾಗೂ ಸಹ ಆಟಗಾರ್ತಿ ಮರಿಜಾನೆ ಕೆಪಪ್‌ ಸಲಿಂಗಿ ವಿವಾಹವಾಗಿದ್ದನ್ನು ಸ್ಮರಿಸಬಹುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ