ಭಜರಂಗ್‌ ಬಂಗಾರ ಬೇಟೆ, ಬೆಳ್ಳಿ ಗೆದ್ದ ಪ್ರವೀಣ್‌

Team Udayavani, Apr 24, 2019, 6:00 AM IST

ಚೀನ: ವಿಶ್ವದ ನಂ. ವನ್‌, ಭಾರತದ ಭರವಸೆಯ ಕುಸ್ತಿಪಟು ಭಜರಂಗ್‌ ಪೂನಿಯ “ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌’ ಕೂಟದಲ್ಲಿ ಮತ್ತೂಮ್ಮೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ರವೀಣ್‌ ರಾಣಾ ಬೆಳ್ಳಿ ಪದಕ ಜಯಿಸಿದ್ದು, ಭಾರತದ ಮೊದಲ ದಿನವನ್ನು 3 ಪದಕಗಳೊಂದಿಗೆ ಮುಗಿಸಿದೆ. ಮಂಗಳವಾರ ನಡೆದ ಪುರುಷರ ಫ್ರೀಸ್ಟೈಲ್‌ ವಿಭಾಗದ ರೋಮಾಂಚಕ ಫೈನಲ್‌ನಲ್ಲಿ ಭಜರಂಗ್‌ ಕಜಕೀಸ್ಥಾನದ ಸಯಾಟ್‌ಬೆಕ್‌ ಒಕಾಸೊವಾ ವಿರುದ್ಧ 12-7 ಅಂಕಗಳಿಂದ ಜಯಿಸಿ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದರು.

ಪಂದ್ಯದ ಕೊನೆಯ 60 ಸೆಕೆಂಡ್‌ಗಳಲ್ಲಿ 2-7 ಹಿನ್ನಡೆಯಲ್ಲಿದ್ದ ಕಾಮನ್ವೆಲ್ತ್‌ ಮತ್ತು ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಭಜರಂಗ್‌ ಅನಂತರ ಅತ್ಯದ್ಭುತ ಪ್ರದರ್ಶನ ನೀಡಿ 10 ಅಂಕ ಪಡೆದು ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಈ ಕೂಟದಲ್ಲಿ ಭಜರಂಗ್‌ಗೆ ಇದು 2ನೇ ಚಿನ್ನದ ಪದಕವಾಗಿದೆ. 2017ರ ಆವೃತ್ತಿಯಲ್ಲೂ ಭಜರಂಗ್‌ ಚಿನ್ನ ಜಯಿಸಿದ್ದರು. ಒಟ್ಟಾರೆಯಾಗಿ ಈ ಕೂಟದಲ್ಲಿ ಈ ಕುಸ್ತಿಪಟುವಿಗೆ ಇದು 5ನೇ ಪದಕ. ಈ ಪ್ರದರ್ಶನದ ಮೂಲಕ ಭಜರಂಗ್‌ ತನ್ನೆಲ್ಲ ಎದುರಾಳಿಗಳಿಗೆ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವ ಬಲಿಷ್ಠ ಕ್ರೀಡಾಪಟು ಎಂಬ ಎಚ್ಚರಿಕೆ ರವಾನಿಸಿದ್ದಾರೆ.

ಈ ಸ್ಪರ್ಧೆಯ ಫೈನಲ್‌ ಹಾದಿಯಲ್ಲಿ ಭಜರಂಗ್‌ ಕೇವಲ ಒಂದು ಅಂಕವನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಶ್ರೀಲಂಕಾದ ಚಾರ್ಲೆಸ್‌ ಫೆರ್ನ್ ವಿರುದ್ಧ ತಾಂತ್ರಿಕ ಮೇಲುಗೈ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸುವ ಮುನ್ನ ಭಜರಂಗ್‌ ಉಜ್ಜೆಕಿಸ್ಥಾನದ ಸಿರೊಜಿದ್ದಿನ್‌ ಖಸಾನೋವ್‌ ವಿರುದ್ಧ 12-1ಅಂತರದಿಂದ ಜಯಿಸಿದ್ದರು.

ತಪ್ಪಿದ ಕಂಚಿನ ಪದಕ
57 ಕೆ.ಜಿ. ವಿಭಾಗದಲ್ಲಿ ಚೈನೀಸ್‌ ತೈಪೆಯ ಚಿಯಾ ತ್ಸೋ ಲಿಯೂ 4-0 ಅಂತರದಿಂದ ಸೋಲಿಸಿ ಕಂಚಿನ ಪದಕದ ಫ್ಲೇ ಆಫ್ಗೆ ಪ್ರವೇಶಿಸಿದ್ದ ರವಿ ಕುಮಾರ್‌ ಕಂಚಿನ ಪದಕದ ಪಂದ್ಯದಲ್ಲಿ ಜಪಾನಿನ ಯೂಕಿ ತಕಹಾಶಿ ಅವರ ವಿರುದ್ಧ 3-5 ಅಂತರದಿಂದ ಸೋತು ಪದಕ ತಪ್ಪಿಸಿಕೊಂಡರು.
ಉಳಿದಂತೆ 70 ಕೆ.ಜಿ. ಸ್ಪರ್ಧೆಯಲ್ಲಿ ರಜನೀಶ್‌ ಸೋಲನುಭವಿಸಿ ಕೂಟದಿಂದ ಹೊರನಡೆದಿದ್ದಾರೆ.

ಪ್ರವೀಣ್‌ಗೆ ಬೆಳ್ಳಿ
ಫೈನಲ್‌ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಕುಸ್ತಿಪಟು ಪ್ರವೀಣ್‌ ರಾಣ್‌ 79 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಅವರು ಇರಾನಿನ ಬಹ್ಮನ್‌ ಮೊಹಮ್ಮದ್‌ ತೈಮೌರಿ ವಿರುದ್ಧ 0-3 ಅಂತರದಿಂದ ಸೋತು ಬೆಳ್ಳಿ ಗೆದ್ದರು. ಸತ್ಯವರ್ಥ್ ಕದಿಯಾನ್‌ ಕೂಡ 97 ಕೆ.ಜಿ. ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನದ ಹೊಬಿನ್‌ ಗಾವೊ ವಿರುದ್ಧ 8-1 ಅಂತರದಿಂದ ಗೆದ್ದ ಕಂಚಿಗೆ ತೃಪ್ತಿಪಟ್ಟರು.


ಈ ವಿಭಾಗದಿಂದ ಇನ್ನಷ್ಟು

 • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

 • ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ...

 • ಗುವಾಹಾಟಿ: ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಶಿವ ಥಾಪ ಮತ್ತು ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಪಂಘಾಲ್‌ ನಿರೀಕ್ಷೆಯಂತೆ ಇಂಡಿಯನ್‌ ಓಪನ್‌ ಬಾಕ್ಸಿಂಗ್‌...

 • ಚಿಂಚಿಯೋನ್‌: ದಕ್ಷಿಣ ಕೊರಿಯ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ...

 • 1983ರ ಬಳಿಕ ಅನೇಕ ದೇಶಗಳಲ್ಲಿ ಆತಿಥ್ಯ ಕಂಡ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 1999ರಲ್ಲಿ ಇಂಗ್ಲೆಂಡಿಗೆ ಮರಳಿತ್ತು. ಆದರೆ ಇದಕ್ಕೆ ಪ್ರಧಾನ ಪ್ರಾಯೋಜಕರ್ಯಾರೂ ಇರಲಿಲ್ಲ....

ಹೊಸ ಸೇರ್ಪಡೆ

 • ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ....

 • ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ...

 • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

 • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

 • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

 • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...