Udayavni Special

ಬಾಕ್ಸಿಂಗ್‌ ಟೆಸ್ಟ್‌ ಗೆ ಕಿವೀಸ್‌ ಸಜ್ಜು


Team Udayavani, Dec 25, 2019, 12:18 AM IST

baxing-test

ಮೆಲ್ಬರ್ನ್: ಈಗಾಗಲೇ ಆಸ್ಟ್ರೇಲಿಯ ವಿರುದ್ಧದ ಮೂರು ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿರುವ ನ್ಯೂಜಿಲ್ಯಾಂಡ್‌ ದ್ವಿತಿಯ ಟೆಸ್ಟ್‌ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ.

30 ವರ್ಷದ ಬಳಿಕ ಮೆಲ್ಬರ್ನ್ ಕ್ರಿಕೆಟ್‌ ಅಂಗಳದಲ್ಲಿ ಮೊದಲ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವಾಡುತ್ತಿರುವ ಕಿವೀಸ್‌ ಸರಣಿ ಸಮಬಲಗೊಳಿಸಲು ಹೋರಾಡಲಿದೆ. ಇದಕ್ಕಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಲು ಬಯಸಿದೆ. ಬೌಲಿಂಗ್‌ ಪಡೆ ಬಲಿಷ್ಠಗೊಳಿಸಲು ಮೊದಲ ಟೆಸ್ಟ್‌ ವೇಳೆ ಹೊರಗಿದ್ದ ವೇಗಿ ಟ್ರೆಂಟ್‌ ಬೌಲ್ಟ್ ಅವರನ್ನು ತಂಡಕ್ಕೆ ವಾಪಸ್‌ ಕರೆಸಿಕೊಳ್ಳಲಾಗಿದೆ.

ಒಂದು ಬದಿಯ ಸ್ನಾಯು ಸೆಳೆತದಿಂದ ಬಳಲುತ್ತಿರುವ ಬೌಲ್ಟ್ ಪರ್ತ್‌ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದರಿಂದಾಗಿ ಪ್ರವಾಸಿ ತಂಡ 296 ರನ್ನುಗಳಿಂದ ಸೋಲನ್ನು ಕಂಡಿತ್ತು. ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಬೌಲ್ಟ್ ದ್ವಿತೀಯ ಟೆಸ್ಟ್‌ನಲ್ಲಿ ಪರಿಣಾಮಕಾರಿಯಾಗಿ ದಾಳಿ ನಡೆಸುವ ನಿರೀಕ್ಷೆ ಇಡಲಾಗಿದೆ.

ಈ ಹಿಂದೆ ನ್ಯೂಜಿಲ್ಯಾಂಡ್‌ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಿದ್ದು 1987ರಲ್ಲಿ. ಆಗ ಸದ್ಯ ತಂಡದಲ್ಲಿರುವ ಕೆಲವು ಆಟಗಾರರು ಹುಟ್ಟಿಯೇ ಇರಲಿಲ್ಲ. ಆ ಪಂದ್ಯದಲ್ಲಿ ರಿಚರ್ಡ್‌ ಹ್ಯಾಡ್ಲಿ ಮಾರಕ ದಾಳಿ ಸಂಘಟಿಸಿದ್ದರಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಇದೀಗ 30 ವರ್ಷಗಳ ಬಳಿಕ ನಡೆಯುತ್ತಿರುವ ಈ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಲು ಇತ್ತಂಡಗಳು ಶಕ್ತಿಮೀರಿ ಪ್ರಯತ್ನ ನಡೆಸುವ ಸಾಧ್ಯತೆಯಿದೆ.

ಆಸೀಸ್‌ಗೆ ವಾರ್ನರ್‌-ಲಬುಶೇನ್‌ ಬಲ
ಆರಂಭಕಾರ ಡೇವಿಡ್‌ ವಾರ್ನರ್‌ ಮತ್ತು ಯುವ ಆಟಗಾರನಾದ ಮಾರ್ನಸ್‌ ಲಬುಶೇನ್‌ ಅವರ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ಆಸೀಸ್‌ ತಂಡಕ್ಕೆ ಹೆಚ್ಚಿನ ಬಲ ತಂದಿದೆ. ಪಂದ್ಯದಿಂದ ಪಂದ್ಯಕ್ಕೆ ಅಮೋಘ ಪ್ರದರ್ಶನ ನೀಡುತ್ತಿರುವ ಇವರಿಬ್ಬರು ಆಸೀಸ್‌ ಪಾಲಿಗೆ ಹೆಚ್ಚಿನ ಭರವಸೆಯ ಆಟಗಾರರಾಗಿದ್ದಾರೆ.

ಗಾಯದ ಸಮಸ್ಯೆಗೆ ತುತ್ತಾಗಿರುವ ಜೋಸ್‌ ಹ್ಯಾಝಲ್‌ವುಡ್‌ ಅವರ ಸ್ಥಾನಕ್ಕೆ ಜೇಮ್ಸ್‌ ಪಾಟಿನ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಬೌಲಿಂಗ್‌ನಲ್ಲಿಯೂ ಆಸೀಸ್‌ ಹೆಚ್ಚು ಘಾತಕವಾಗಿದೆ. ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ ಮತ್ತು ನಥನ್‌ ಲಿಯಾನ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಕಿವೀಸ್‌ಗೆ ಹಲವು ಸವಾಲು
ಟೆಸ್ಟ್‌ ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಈ ಒತ್ತಡದ ನಡುವೆ ನಾಯಕ ಕೇನ್‌ ವಿಲಿಯಮ್ಸನ್‌ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎನ್ನುವುದೇ ಪಂದ್ಯದ ಕುತೂಹಲ. ಈ ಪಂದ್ಯವನ್ನು ಜಯಿಸಿದ್ದೇ ಆದಲ್ಲಿ ಕೇನ್‌ ವಿಲಿಯಮ್ಸನ್‌ ಓರ್ವ ಸಮರ್ಥ ಟೆಸ್ಟ್‌ ನಾಯಕನಾಗಿ ಹೊರಹೊಮ್ಮಬಹುದು. ಆದರೆ ಆಸೀಸ್‌ ಬೌಲರ್‌ಗಳನ್ನು ಎದುರಿಸಲು ಸಮರ್ಥ ಆಟಗಾರರು ಕಿವೀಸ್‌ ಪಾಳಯದಲ್ಲಿರದಿರುವುದೇ ತಂಡಕ್ಕೆ ದೊಡ್ಡ ಚಿಂತೆಯಾಗಿದೆ.

ತಂಡಗಳು
ಆಸ್ಟೇಲಿಯ: ಟೀಮ್‌ ಪೈನ್‌ (ನಾಯಕ), ಡೇವಿಡ್‌ ವಾರ್ನರ್‌, ಜೋ ಬರ್ನ್ಸ್, ಮಾರ್ನಸ್‌ ಲಬುಶೇನ್‌, ಸ್ಟಿವನ್‌ ಸ್ಮಿತ್‌, ಮ್ಯಾಥ್ಯೂ ವೇಡ್‌, ಟ್ರ್ಯಾವಿಸ್‌ ಹೆಡ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯಾನ್‌, ಜೇಮ್ಸ್‌ ಪಾಟಿನ್ಸನ್‌, ಮಿಚೆಲ್‌ ನಸೀರ್‌, ಪೀಟರ್‌ ಸಿಡ್ಲ್.

ನ್ಯೂಜಿಲ್ಯಾಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಡ್‌ ಆ್ಯಸ್ಲೆ, ಟಾಮ್‌ ಬ್ಲಿಂಡೆಲ್‌, ಟ್ರೆಂಟ್‌ ಬೌಲ್ಟ್, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಲಾಕಿ ಫ‌ರ್ಗ್ಯುಸನ್‌, ಮ್ಯಾಟ್‌ ಹೆನ್ರಿ, ಟಾಮ್‌ ಲ್ಯಾಥಂ, ಹೆನ್ರಿ ನಿಕೋಲ್ಸ್‌, ಜೆಟ್‌ ರಾವೆಲ್‌, ಮಿಚೆಲ್‌ ಸ್ಯಾಂಟ್ನರ್‌, ಟೀಂ ಸೌಥಿ, ರಾಸ್‌ ಟೇಲರ್‌, ಬಿ.ಜೆ. ವ್ಯಾಟಿÉಂಗ್‌, ನೀಲ್‌ ವ್ಯಾಗ್ನರ್‌.

ಟಾಪ್ ನ್ಯೂಸ್

Untitled-1

ಕೊಹ್ಲಿ ಕಾರು ಮಾರಟಕ್ಕಿದೆ!

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಶಂಕಿತ ಉಗ್ರನಿಗಿತ್ತು ವಿದೇಶಿ ಸಂಪರ್ಕ : ಭಯೋತ್ಪಾದನೆ ನಿಗ್ರಹ ದಳ ಮಾಹಿತಿ

ಶಂಕಿತ ಉಗ್ರನಿಗಿತ್ತು ವಿದೇಶಿ ಸಂಪರ್ಕ : ಭಯೋತ್ಪಾದನೆ ನಿಗ್ರಹ ದಳ ಮಾಹಿತಿ

ghdyt

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?  

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಕೊಹ್ಲಿ ಕಾರು ಮಾರಟಕ್ಕಿದೆ!

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ತಂಡಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

Untitled-1

ಕೊಹ್ಲಿ ಕಾರು ಮಾರಟಕ್ಕಿದೆ!

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಶಂಕಿತ ಉಗ್ರನಿಗಿತ್ತು ವಿದೇಶಿ ಸಂಪರ್ಕ : ಭಯೋತ್ಪಾದನೆ ನಿಗ್ರಹ ದಳ ಮಾಹಿತಿ

ಶಂಕಿತ ಉಗ್ರನಿಗಿತ್ತು ವಿದೇಶಿ ಸಂಪರ್ಕ : ಭಯೋತ್ಪಾದನೆ ನಿಗ್ರಹ ದಳ ಮಾಹಿತಿ

ghdyt

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?  

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.