ಎರಡು ಹಂತಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ?
ದುಬಾೖ-ಶಾರ್ಜಾ ಲೀಗ್ ಬಳಿಕ ಅಬುಧಾಬಿಯಲ್ಲಿ ಪಂದ್ಯಗಳ ಆಯೋಜನೆಗೆ ನಿರ್ಧಾರ
Team Udayavani, Aug 27, 2020, 7:14 PM IST
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಪಂದ್ಯಾವಳಿಗಾಗಿ ಎಲ್ಲ ತಂಡಗಳು ಯುಎಇಯಲ್ಲಿ ಬೀಡುಬಿಟ್ಟಿವೆ. ಕೆಲವು ತಂಡಗಳ ಆಟಗಾರರು ಅಭ್ಯಾಸವನ್ನೂ ಆರಂಭಿಸಿದ್ದಾರೆ. ಆದರೆ ಈ ಕೂಟದ ಮಾದರಿ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಬಿಸಿಸಿಐ ಮೂಲವೊಂದರ ಪ್ರಕಾರ ಇದು ಎರಡು ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ.
ದುಬಾೖ ಮತ್ತು ಶಾರ್ಜಾದಲ್ಲಿ ಮೊದಲ ಹಂತದ ಪಂದ್ಯಗಳನ್ನು ಆಯೋಜಿಸಿದ ಬಳಿಕ ಅಬುಧಾಬಿಯಲ್ಲಿ ಪಂದ್ಯಗಳನ್ನು ನಡೆಸುವುದು ಬಿಸಿಸಿಐ ಯೋಜನೆ ಎನ್ನಲಾಗಿದೆ. ಇದಕ್ಕೆ ಅಬುಧಾಬಿಯ ಕಟ್ಟುನಿಟ್ಟಿನ ಪ್ರಯಾಣ ನಿಯಮವೇ ಕಾರಣ. ದುಬಾೖ-ಶಾರ್ಜಾ ನಡುವಿನ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ದುಬಾೖಯಿಂದ 130 ಕಿ.ಮೀ. ದೂರದಲ್ಲಿರುವ ಅಬುಧಾಬಿಗೆ ತೆರಳುವ ಮುನ್ನ ಕ್ರಿಕೆಟಿಗರ ಮ್ಯಾಂಡಿಟರಿ ರ್ಯಾಪಿಡ್ ಟೆಸ್ಟ್ ನಡೆಸಬೇಕಾದುದು ಕಡ್ಡಾಯ. ಇದನ್ನು ಪ್ರತೀ ಸಲವೂ ನಡೆಸಬೇಕಾದ್ದರಿಂದ ಕೊನೆಯ ಹಂತದ ಪಂದ್ಯಗಳನ್ನು ಒಮ್ಮೆಲೇ ಅಬುಧಾಬಿಯಲ್ಲಿ ನಡೆಸುವುದು ಬಿಸಿಸಿಐ ಯೋಜನೆ.
ವಾರಾಂತ್ಯದಲ್ಲಿ ವೇಳಾಪಟ್ಟಿ?
ಈ ಕುರಿತು ಐಪಿಎಲ್ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಅಧಿಕಾರಿ ಹೇಮಾಂಗ್ ಅಮೀನ್ ಯುಎಇ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ 48 ಗಂಟೆಗಳಲ್ಲಿ ಅಂತಿಮ ನಿರ್ಧಾರವೊಂದಕ್ಕೆ ಬರುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಐಪಿಎಲ್ ವೇಳಾಪಟ್ಟಿ ಪ್ರಕಟವಾದೀತು.
56 ಗ್ರೂಪ್ ಪಂದ್ಯಗಳಲ್ಲಿ ದುಬಾೖ ಮತ್ತು ಅಬುಧಾಬಿಯಲ್ಲಿ ತಲಾ 21, ಶಾರ್ಜಾದಲ್ಲಿ 14 ಪಂದ್ಯಗಳನ್ನು ಆಯೋಜಿಸುವುದು ಸದ್ಯದ ಲೆಕ್ಕಾಚಾರ.
ಕೋವಿಡ್ ಕೇಸ್ ಹೆಚ್ಚಳ
ಯುಎಇಯಲ್ಲೀಗ ಕೋವಿಡ್ ಕೇಸ್ ಹೆಚ್ಚುತ್ತಿರುವುದು ಬಿಸಿಸಿಐಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಸ್ತುತ ಮುಂಬೈ ಮತ್ತು ಕೆಕೆಆರ್ ತಂಡಗಳು ಅಬುಧಾಬಿಯಲ್ಲಿವೆ. ಒಂದು ವೇಳೆ ಮೊದಲ ಲೀಗ್ ಪಂದ್ಯಗಳು ದುಬಾೖ ಮತ್ತು ಶಾರ್ಜಾದಲ್ಲಿ ನಡೆಯುವುದಾದರೆ ಆಗ ಈ ಎರಡೂ ತಂಡಗಳ ಆಟಗಾರರು ತಮ್ಮ ನೆಲೆಯನ್ನು ಇಲ್ಲಿಗೆ ವರ್ಗಾಯಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !