ದೇಶೀಯ ಕ್ರಿಕೆಟ್ ನಡೆಸುವುದೋ? ಹಣ ನೀಡಿ ಸುಮ್ಮನಾಗುವುದೋ?
Team Udayavani, Dec 3, 2020, 7:39 AM IST
ಮುಂಬೈ: ಹಣದ ಹೊಳೆಯನ್ನೇ ಹರಿಸುವ ಐಪಿಎಲ್ ಅನ್ನು ಯಶಸ್ವಿಯಾಗಿ ಮುಗಿಸಿರುವ ಸಂಭ್ರಮದಲ್ಲಿ ಬಿಸಿಸಿಐಯಿದೆ. ಇದರ ಮಧ್ಯೆ ದೇಶೀಯ ಕ್ರಿಕೆಟ್ ನಡೆಸುತ್ತೀರೋ ಇಲ್ಲವೋ ಎಂಬ ಪ್ರಶ್ನೆಗಳ ಸುರಿಮಳೆ ಶುರುವಾಗಿದೆ.
ಸದ್ಯ ಬಿಸಿಸಿಐ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದೆ. ರಾಜ್ಯಗಳ ಅಭಿಪ್ರಾಯ ನೋಡಿ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಇನ್ನೊಂದು ಕಡೆ ಬಿಸಿಸಿಐ ಒಂದು ಇಬ್ಬಂದಿಯಲ್ಲಿ ಸಿಕ್ಕಿಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ದೇಶೀಯ ಕ್ರಿಕೆಟನ್ನು ನಡೆಸುವುದೋ ಅಥವಾ ಆಟಗಾರರಿಗೆ ನೀಡಬೇಕಾದ ಹಣ ನೀಡಿ ಸುಮ್ಮನಾಗುವುದೋ ಎನ್ನುವುದು ಇಲ್ಲಿನ ಪ್ರಶ್ನೆ.
ಒಂದು ವೇಳೆ ರಣಜಿ ಕೂಟ ನಡೆಯದಿದ್ದರೂ ಆಟಗಾರರಿಗೆ ಹಣವನ್ನಂತೂ ನೀಡಲೇಬೇಕು. ಆದರೆ ಕೂಟ ನಡೆಸಿಯೇ ಹಣ ನೀಡುವುದು ಹೇಳಿದಷ್ಟು ಸುಲಭವಿಲ್ಲ. ಕಾರಣ 38 ದೇಶೀಯ ತಂಡಗಳಿರುವುದು. ಐಪಿಎಲ್ ನಲ್ಲಿರುವ 8 ತಂಡಗಳಿಗೆ ಜೈವಿಕ ಸುರಕ್ಷಾ ವಲಯ ಸೃಷ್ಟಿಸಬಹುದು. 38 ತಂಡಗಳಿಗೆ ಆ ವ್ಯವಸ್ಥೆ ಮಾಡುವುದು ದುಸ್ವಪ್ನವೇ ಸರಿಯೆಂದು ಮೂಲಗಳು ಹೇಳಿವೆ. ಒಂದು ವೇಳೆ ಸವಾಲು ತೆಗೆದುಕೊಂಡು ಕೂಟ ನಡೆಸಿದರೂ, ಯಾರಿಗಾದರೂ ಅಪಾಯವಾದರೆ ಏನು ಗತಿ?
ಬಿಸಿಸಿಐ ರಣಜಿ ನಡೆಸದಿದ್ದರೆ, ಅದು ಹಣದ ಹಿಂದೆ ಬಿದ್ದಿದೆ ಎಂಬ ಆರೋಪ ಬರುತ್ತದೆ. ಹಾಗಂತ ಆಟಗಾರರನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ ಎನ್ನುವುದು ಇಲ್ಲಿನ ವಾದ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444