Udayavni Special

ಯುಪಿ ಕ್ರಿಕೆಟ್‌ನಲ್ಲಿ ಬಿರುಗಾಳಿ ಸಂಕಟದಲ್ಲಿ ಬಿಸಿಸಿಐ


Team Udayavani, Jul 20, 2018, 6:25 AM IST

bcci.jpg

ಹೊಸದಿಲ್ಲಿ: ಹಗರಣಗಳಿಗೆ ಸಿಲುಕಿ ಒಳಗೊಳಗೇ ಕುದಿಯುತ್ತಿರುವ ಬಿಸಿಸಿಐನಲ್ಲಿ ಮತ್ತೂಂದು ಬಿರುಗಾಳಿ ಎದ್ದಿದೆ. ಆದರೆ ಪ್ರಕರಣ ನೇರವಾಗಿ ತನಗೆ ಸಂಬಂಧಿಸಿದ್ದಲ್ಲ ಎನ್ನುವುದು ಸದ್ಯ ಬಿಸಿಸಿಐಗೆ ಸಮಾಧಾನದ ಸಂಗತಿ. 

ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ನಿರ್ದೇಶಕ ರಾಜೀವ್‌ ಶುಕ್ಲ ಅವರ ಕಾರ್ಯದರ್ಶಿ ಮೊಹಮ್ಮದ್‌ ಅಕ್ರಮ್‌ ಸೈಫಿ ಅವರು ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಹಲವು ಬೇಡಿಕೆಯಿಟ್ಟಿದ್ದಾರೆ. ಹಣ ಮತ್ತು ಸ್ತ್ರೀಯರನ್ನು ಪೂರೈಸಿದರೆ ಆಯ್ಕೆ ಖಚಿತವೆಂದಿದ್ದಾರೆಂದು ಹಿಂದಿ ಟೀವಿ ವಾಹಿನಿಯೊಂದು ತನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದೆ. ಇದು ಸಂಚಲನ ಸೃಷ್ಟಿಸಿದ್ದು, ಅಕ್ರಮ್‌ ಸೈಫಿಯನ್ನು ಅಮಾನತು ಮಾಡಿ ಬಿಸಿಸಿಐ ತನಿಖೆಗೆ ಆದೇಶಿಸಿದೆ.

ಹಿಂದಿ ವಾಹಿನಿ ನ್ಯೂಸ್‌ 1 ರಹಸ್ಯ ಕಾರ್ಯಾಚರಣೆ ಮೂಲಕ ಕ್ರಿಕೆಟಿಗ ರಾಹುಲ್‌ ಶರ್ಮರೊಂದಿಗೆ ಅಕ್ರಮ್‌ ಸೈಫಿ ನಡೆಸಿ
ದ್ದಾರೆನ್ನಲಾದ ದೂರವಾಣಿ ಸಂಭಾಷಣೆಯನ್ನು ಬಹಿರಂಗಪಡಿ ಸಿತ್ತು. ಈ ಸಂಭಾಷಣೆ ಬುಧವಾರ ಪ್ರಸಾರವಾಗಿತ್ತು. ಸಂಭಾಷಣೆಯಲ್ಲಿ ಹಲವು ಸ್ಫೋಟಕ ಸಂಗತಿಗಳಿವೆ. ಒಂದು ವೇಳೆ ಇವು ಸಾಬೀತಾದರೆ ಭಾರತೀಯ ಕ್ರಿಕೆಟ್‌ನಲ್ಲಿ ಇನ್ನಷ್ಟು ದೊಡ್ಡ ತಲೆಗಳು ಉರುಳುವುದು ಖಚಿತವೆನ್ನಲಾಗಿದೆ.

ಸಂಭಾಷಣೆಯಲ್ಲೇನಿದೆ?
ಸಂಭಾಷಣೆಯಲ್ಲಿ ರಾಹುಲ್‌ ಶರ್ಮರನ್ನು ಸದ್ಯ ದಲ್ಲೇ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಸೈಫಿ ನೀಡಿದ್ದಾರೆ. ಆದರೆ ಅದಕ್ಕಾಗಿ ಹೊಸದಿಲ್ಲಿ ಹೊಟೇಲ್‌ಗೆ ಸ್ತ್ರೀಯೊಬ್ಬಳ್ಳನ್ನು ಕಳುಹಿಸಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಧ್ವನಿಮುದ್ರಣವನ್ನು ನೀಡುವಂತೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳದ ಮುಖ್ಯಸ್ಥ ಅಜಿತ್‌ ಸಿಂಗ್‌ ಹಿಂದಿ ವಾಹಿನಿಗೆ ಮನವಿ ಮಾಡಿದ್ದಾರೆ.

ಮತ್ತೂಂದು ಕಡೆ ಸೈಫಿ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಉತ್ತರಪ್ರದೇಶ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಯದುವೀರ್‌ ಸಿಂಗ್‌, ರಾಹುಲ್‌ ಶರ್ಮ ಭಾರತ ತಂಡದಲ್ಲಿ ಆಡಿಲ್ಲ, ಉತ್ತರಪ್ರದೇಶದ ಸಂಭಾವ್ಯರ ಪಟ್ಟಿಯಲ್ಲೂ ಸ್ಥಾನ ಪಡೆದಿಲ್ಲ. ಅವರಿಗೆ ಯಾವ ಮಹತ್ವವೂ ಇಲ್ಲ. ಉತ್ತರಪ್ರದೇಶ ಕ್ರಿಕೆಟ್‌ ಸಂಸ್ಥೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಈ ಇಬ್ಬರ ನಡುವೆ ನಡೆದ ಮಾತುಕತೆ ಅವರ ಖಾಸಗಿ ವಿಚಾರ. ಅದಕ್ಕೂ ಉತ್ತರಪ್ರದೇಶ ಕ್ರಿಕೆಟ್‌ ಸಂಸ್ಥೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಸೈಫಿಗೂ ನಮಗೂ ಸಂಬಂಧವಿಲ್ಲ
ಇದೇ ವೇಳೆ ತನಗೂ ಸೈಫಿಗೂ ಸಂಬಂಧವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ತಮಗೆ ಬೇಕಾಗಿರುವ ಕಾರ್ಯದರ್ಶಿಯನ್ನು ಆಯ್ಕೆ ಮಾಡಿಕೊಳ್ಳುವುದು ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಪಟ್ಟಿದ್ದು. ಆದರೆ ಆ ಕಾರ್ಯದರ್ಶಿಗಳ ಸಂಬಳವನ್ನು ಬಿಸಿಸಿಐ ಪಾವತಿಸುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಪಟ್ಟಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಉತ್ತರಪ್ರದೇಶ ಮಾಜಿ ನಾಯಕ ಮೊಹಮ್ಮದ್‌ ಕೈಫ್ ಆಘಾತ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರನ್ನು ಭ್ರಷ್ಟಾಚಾರಿಗಳು ತುಳಿಯುತ್ತಿದ್ದಾರೆ. ರಾಜೀವ್‌ ಶುಕ್ಲ ಅವರು ಈ ಪ್ರಕರಣದಲ್ಲಿ ಮುಕ್ತ ತನಿಖೆ ನಡೆಸುತ್ತಾರೆ. ಯುವ ಪ್ರತಿಭೆಗಳಿಗೆ ನ್ಯಾಯ ಒದಗಿಸುತ್ತಾರೆಂಬ ಭರವಸೆಯಿದೆ ಎಂದಿದ್ದಾರೆ.

ಯಾರು ಈ ರಾಹುಲ್‌ ಶರ್ಮ?
ರಾಹುಲ್‌ ಶರ್ಮ ಉತ್ತರಪ್ರದೇಶದ ಕ್ರಿಕೆಟಿಗ. ಅವರಿನ್ನೂ ಉತ್ತರಪ್ರದೇಶವನ್ನೇ ರಣಜಿಯಲ್ಲಿ ಪ್ರತಿನಿಧಿಸಿಲ್ಲ. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಅವರು ಸೈಫಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಸೈಫಿ ಲಂಚ ಕೇಳಿದ್ದಾರೆ, ತಂಡದಲ್ಲಿ ಆಯ್ಕೆ ಮಾಡಿಕೊಳ್ಳಲು ಇನ್ನಿತರ ಆಮಿಷಗಳನ್ನೂ ಒಡ್ಡಿದ್ದಾರೆ. ಅವರು ನಕಲಿ ವಯೋಮಿತಿ ಪ್ರಮಾಣಪತ್ರ ನೀಡುತ್ತಾರೆಂದು ರಾಹುಲ್‌ ಆರೋಪಿಸಿದ್ದಾರೆ.

ವಿಚಾರಣಾಧಿಕಾರಿ ನೇಮಕ
ಇನ್ನೆರಡು ದಿನದೊಳಗೆ ವಿಚಾರಣಾಧಿಕಾರಿ ನೇಮಕ ಮಾಡಲಾಗುತ್ತದೆ. ಅವರು 15 ದಿನದೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು. ಇದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಸೈಫಿ ಅಮಾನತಿನಲ್ಲಿರುತ್ತಾರೆಂದು ಬಿಸಿಸಿಐ ತಿಳಿಸಿದೆ.

ಟಾಪ್ ನ್ಯೂಸ್

ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ

ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

Untitled-1

ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್‌ ರೋಗಿಗಳಿಗಿರಲಿ  ನಮ್ಮೆಲ್ಲರ ಪ್ರೀತಿಯ ಹಾರೈಕೆ

ವಿಜಯಪುರದಲ್ಲಿ ಆಸ್ಪತ್ರೆಯ ನರ್ಸ್ ಮೂಲಕ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ

ವಿಜಯಪುರದಲ್ಲಿ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ ; ಪ್ರಕರಣ ಸುಖಾಂತ್ಯ

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ

ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಕೋವಿಡ್ ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

#IPL2021.. ಮ್ಯಾಜಿಕ್‌ ಮಾಡಿದ ತ್ಯಾಗಿ : ರಾಜಸ್ಥಾನ್‌ ಗೆ 2 ರನ್‌ ಜಯ

Untitled-1

ಯುಎಇಯಲ್ಲಿ ಬದಲಾದೀತೇ ಹೈದರಾಬಾದ್‌ ಅದೃಷ್ಟ?

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

Untitled-1

ಏಕದಿನ ಬ್ಯಾಟಿಂಗ್‌ ಶ್ರೇಯಾಂಕ: ಮಿಥಾಲಿ ವಿಶ್ವ ನಂ.1

ಐಪಿಎಲ್ ನಲ್ಲಿಂದು ರಾಹುಲ್-ಸ್ಯಾಮ್ಸನ್ ಪೈಪೋಟಿ: ಸಂಭಾವ್ಯ ಆಟಗಾರರ ಪಟ್ಟಿ

ಐಪಿಎಲ್ ನಲ್ಲಿಂದು ರಾಹುಲ್-ಸ್ಯಾಮ್ಸನ್ ಪೈಪೋಟಿ: ಸಂಭಾವ್ಯ ಆಟಗಾರರ ಪಟ್ಟಿ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

hubballi news

“ಮಕ್ಕಳನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಿ”

hubballi news

ಆಪರೇಷನ್‌ ಚಿರತೆ

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ

ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ

chitradurga news

ಒಂದೇ ಗಿಡದಲ್ಲಿ 100ಕ್ಕೂಹೆಚ್ಚು ಶೇಂಗಾ ಕಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.