ಪ್ರೊ ಕಬ್ಬಡಿ: 5ನೇ ಗೆಲುವು ಸಾಧಿಸಿದ ಬುಲ್ಸ್‌

Team Udayavani, Aug 17, 2019, 11:05 PM IST

ಚೆನ್ನೆ: ಪ್ರೊ ಕಬಡ್ಡಿ ಏಳನೇ ಆವೃತ್ತಿಯ ಚೆನ್ನೈ ಚರಣದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಆತಿಥೇಯ ತಮಿಳ್‌ ತಲೈವಾಸ್‌ಗೆ ಆಘಾತವಿಕ್ಕಿ 5ನೇ ಗೆಲುವು ಒಲಿಸಿಕೊಂಡಿದೆ.

ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 32-21 ಅಂಕಗಳ ಅಂತರದಿಂದ ತಲೈವಾಸ್‌ ತಂಡವನ್ನು ಪರಾಭವಗೊಳಿಸಿತು. ತೀವ್ರ ಪೈಪೋಟಿಯಿಂದ ಕೂಡಿದ ಬೆಂಗಾಲ್‌ ವಾರಿಯರ್-ದಬಾಂಗ್‌ ಡೆಲ್ಲಿ ನಡುವಿನ ದ್ವಿತೀಯ ಮುಖಾಮುಖೀ 30-30ರಿಂದ ಟೈ ಆಯಿತು.

ಮತ್ತೆ ಮಿಂಚಿದ ಪವನ್‌
ಪವನ್‌ ಸೆಹ್ರಾವತ್‌ (11 ಅಂಕ) ಎಂದಿನಂತೆ ಭರ್ಜರಿ ರೈಡಿಂಗ್‌ ಪ್ರದರ್ಶಿಸಿ ಬೆಂಗಳೂರನ್ನು ಗೆಲ್ಲಿಸಿದರು. ಅವರು 20 ಸಲ ತಲೈವಾಸ್‌ ಕೋಟೆಗೆ ಲಗ್ಗೆ ಇಟ್ಟರು. 11 ಸಲ ಯಶಸ್ವಿಯಾಗಿ ಅಂಕಗಳೊಂದಿಗೆ ಮರಳಿದರೆ, 3 ಸಲ ಎದುರಾಳಿ ಕೈಗೆ ಸಿಕ್ಕಿ ಔಟಾದರು. 2 ಬೋನಸ್‌ ಅಂಕವನ್ನು ಪಡೆದದ್ದು ಪವನ್‌ ಸೆಹ್ರಾವತ್‌ ಮಿಂಚಿನ ಆಟಕ್ಕೆ ಸಾಕ್ಷಿಯಾಗಿತ್ತು. ಸೌರಭ್‌ ನಡಾಲ್‌ (5 ಅಂಕ) ಅತ್ಯುತ್ತಮ ಟ್ಯಾಕಲ್‌ ನಡೆಸಿದರು. ಆದರೆ ತಂಡದ ನಾಯಕ ರೋಹಿತ್‌ ಕುಮಾರ್‌ ರೈಡಿಂಗ್‌ನಲ್ಲಿ ವಿಫ‌ಲರಾದರು. 13 ರೈಡಿಂಗ್‌ನಿಂದ 2 ಅಂಕ ಮಾತ್ರ ತರಲು ಅವರಿಗೆ ಸಾಧ್ಯವಾಯಿತು.

ಬೆಂಗಳೂರು ತನ್ನ ಹಿಂದಿನ ಪಂದ್ಯದಲ್ಲಿ 35-33ರಿಂದ ಯುಪಿ ಯೋಧಾ ವಿರುದ್ಧ ಸೋಲುಂಡಿತ್ತು. ಈಗ ಮತ್ತೆ ಗೆಲುವಿನ ಟ್ರ್ಯಾಕ್‌ ಏರಿದೆ.

ತವರಲ್ಲಿ ಮುಖಭಂಗ
ತಾರಾ ಆಟಗಾರರ ವೈಫ‌ಲ್ಯ ತಮಿಳ್‌ ತಲೈವಾಸ್‌ಗೆ ಮುಳುವಾಯಿತು. ರೈಡರ್‌ ಅಜಯ್‌ ಕುಮಾರ್‌ (4 ಅಂಕ), ರಾಹುಲ್‌ ಚೌಧರಿ (2 ಅಂಕ) ರೈಡಿಂಗ್‌ನಲ್ಲಿ ಜಾದೂ ಮಾಡಲಿಲ್ಲ. ಆಲ್‌ರೌಂಡರ್‌ ಮಂಜಿತ್‌ ಚಿಲ್ಲಾರ್‌ (1 ಅಂಕ) ಪವಾಡ ಸೃಷ್ಟಿಸಲಿಲ್ಲ. ರೈಡರ್‌ ಶಬ್ಬೀರ್‌ ಬಾಪು ಕೇವಲ 3 ಅಂಕಕ್ಕೆ ಸೀಮಿತರಾದರು. ಇದರಿಂದ ತಂಡ ತವರಲ್ಲೇ ಮುಖಭಂಗ ಅನುಭವಿಸಿತು.

ಪ್ರೊ ಕಬ್ಬಡಿ: ಬೆಂಗಾಲ್‌-ಡೆಲ್ಲಿ ಪಂದ್ಯ ಟೈ
ಚೆನ್ನೈ ಚರಣದ ದಿನದ ಎರಡನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ -ದಬಾಂಗ್‌ ಡೆಲ್ಲಿ ನಡುವಿನ ಪಂದ್ಯ 30-30 ಅಂಕಗಳ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಬೆಂಗಾಲ್‌ ಪರ ರೈಡರ್‌ ಕೆ.ಪ್ರಪಂಜನ್‌ (10 ಅಂಕ) ಹಾಗೂ ಜೀವಾ ಕುಮಾರ್‌ (4 ಅಂಕ) ಅದ್ಭುತ ಟ್ಯಾಕಲ್‌ ನಡೆಸಿದರು. ದಬಾಂಗ್‌ ಡೆಲ್ಲಿ ಪರ ನವೀನ್‌ ಕುಮಾರ್‌ (11 ಅಂಕ), ಚಂದ್ರನ್‌ ರಂಜಿತ್‌ (6 ಅಂಕ), ಜೋಗೀಂದರ್‌ ನರ್ವಲ್‌ (4 ಅಂಕ)ಗಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ