ಕೊಪಾ ಅಮೆರಿಕ ಫುಟ್ಬಾಲ್: ಜಪಾನ್-ಉರುಗ್ವೆ ಪಂದ್ಯ ಡ್ರಾ
Team Udayavani, Jun 22, 2019, 5:34 AM IST
ರಿಯೋ ಡಿ ಜನೈರೊ: ಕೋಜಿ ಮಿಯೋಶಿ ಅವರ ಅವಳಿ ಗೋಲಿನ ನೆರವಿನಿಂದ ಜಪಾನ್ ತಂಡ ಕೊಪಾ ಅಮೆರಿಕ ಫುಟ್ಬಾಲ್ ಪಂದ್ಯಾಟದಲ್ಲಿ ಬಲಿಷ್ಠ ಉರುಗ್ವೆ ತಂಡದೆದುರು 2-2 ಗೋಲುಗಳಿಂದ ಡ್ರಾ ಸಾಧಿಸಿದೆ.
ಮಿಯೋಶಿ ಸಾಹಸದಿಂದ ಜಪಾನ್ ಮುನ್ನಡೆ ಸಾಧಿಸಿದರೂ ಉರುಗ್ವೆ ತಂಡ ವಿವಾದಾತ್ಮಕ ಪೆನಾಲ್ಟಿ ಅವಕಾಶದಿಂದ ಡ್ರಾ ಸಾಧಿಸಿತು. ಪೆನಾಲ್ಟಿಯಲ್ಲಿ ಲೂಯಿಸ್ ಸೂರೆಜ್ ಗೋಲು ಹೊಡೆ ದರೆ, ಜೋಸ್ ಜಿಮೆನೆಸ್ ಹೆಡರ್ ಮೂಲಕ ಇನ್ನೊಂದು ಗೋಲು ಹೊಡೆದಿದ್ದರು.
ಡ್ರಾದಿಂದಾಗಿ ಜಪಾನ್ಗೆ “ಸಿ’ ಬಣದಿಂದ ಕ್ವಾರ್ಟರ್ ಫೈನಲಿಗೇರುವ ಅವಕಾಶ ಕಠಿನವಾಗಿದೆ. ಜಪಾನ್ ಆರಂಭಿಕ ಪಂದ್ಯದಲ್ಲಿ ಚಿಲಿಯೆದುರು 0-4 ಗೋಲುಗಳಿಂದ ಸೋತಿತ್ತು.
ಆರಂಭಿಕ ಪಂದ್ಯದಲ್ಲಿ ಇಕ್ವಾಡೋರ್ ತಂಡವನ್ನು ಮಣಿಸಿದ್ದ ಉರುಗ್ವೆ, ಜಪಾನ್ ವಿರುದ್ಧ ಜಯಿಸಿದ್ದರೆ ಸುಲಭ ವಾಗಿ ಕ್ವಾರ್ಟರ್ ಫೈನಲ್ ತಲುಪುವ ಸಾಧ್ಯತೆಯಿತ್ತು.
23 ನಿಮಿಷದಲ್ಲಿ ಜಪಾನ್ ಮುನ್ನಡೆ ಸಾಧಿಸಿತ್ತು. ಮಿಡ್ಫಿàಲ್ಡರ್ ಮಿಯೋಶಿ ಗೋಲು ಹೊಡೆ ದು ಸಂಭ್ರಮಿಸಿದ್ದರು. ಆದರೆ ಈ ಆಚರಣೆ ಹೆಚ್ಚು ಹೊತ್ತು ಉಳಿಯಲಿಲ್ಲ. ನಾಲ್ಕೇ ನಿಮಿಷದಲ್ಲಿ ಪೆನಾಲ್ಟಿ ಹೊಡೆತದ ಕೊಡುಗೆ ಪಡೆದ ಉರುಗ್ವೆ ಸಮಬಲ ಸ್ಥಾಪಿಸಿತ್ತು.