ಗೆಳತಿ ಊರ್ವಶಿ ವಾಟ್ಸಅಪ್‌ ಸಂಖ್ಯೆ ಬ್ಲಾಕ್‌ ಮಾಡಿದ ಪಂತ್‌?

ಪರಸ್ಪರ ಕಿತ್ತಾಡಿಕೊಂಡು ದೂರವಾದ ಪಂತ್‌-ಊರ್ವಶಿ: ಮಾಧ್ಯಮ ವರದಿ

Team Udayavani, Jan 11, 2020, 7:54 PM IST

ಮುಂಬೈ: ಗೆಳತಿ ಇಶಾ ನೆಗಿ ಜತೆ ಹೊಸ ವರ್ಷದ ಆರಂಭದಲ್ಲಿ ಭಾರತ ಕ್ರಿಕೆಟಿಗ ರಿಷಭ್‌ ಪಂತ್‌ ಕಾಣಿಸಿಕೊಂಡಿದ್ದ ಬೆನ್ನಲ್ಲೇ ಮತ್ತೋರ್ವ ಗೆಳತಿ ಬಾಲಿವುಡ್‌ ನಟಿ ಊರ್ವಶಿ ರೌಟೇಲ ಮೊಬೈಲ್‌ ವಾಟ್ಸಅಪ್‌ ಸಂಖ್ಯೆಯನ್ನು ಪಂತ್‌ ಬ್ಲಾಕ್‌ ಮಾಡಿದ್ದಾರೆ ಎನ್ನಲಾಗಿದೆ.

ಸ್ವತಃ ಊರ್ವಶಿ ಆಪ್ತ ಮೂಲಗಳು ವಿಷಯವನ್ನು ಖಚಿತಪಡಿಸಿವೆ. ಕೆಲವು ತಿಂಗಳ ಹಿಂದೆ ರಿಷಭ್‌ ಪಂತ್‌ ಬಾಲಿವುಡ್‌ ನಟಿ ಊರ್ವಶಿ ಜತೆ ಕಾಣಿಸಿಕೊಂಡಿದ್ದರು. ಇಬ್ಬರು ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆನಂತರದ ದಿನದಲ್ಲಿ ಪಂತ್‌ ಇಶಾ ನೆಗಿ ಜತೆ ಹಿಮ ಪರ್ವತವೊಂದರಲ್ಲಿ ಹೊಸ ವರ್ಷವನ್ನು ಆಚರಿಸಿದ್ದರು. ಸದ್ಯ ಪಂತ್‌ ಕಳಪೆ ಫಾರ್ಮ್ನಲ್ಲಿದ್ದಾರೆ. ಹೀಗಿರುವಾಗ ಆಟದ ಹೊರತಾಗಿ ಪಂತ್‌ ಈ ಫೋಟೊ ಪ್ರಕಟಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಮೂಲಗಳ ಮಾಹಿತಿ ಪ್ರಕಾರ ಪಂತ್‌ ಜತೆ ಮಾತನಾಡಲು ಊರ್ವಶಿ ಪ್ರಯತ್ನಿಸಿದ್ದಾರೆ. ಆದರೆ ಊರ್ವಶಿ ಜತೆ ರಿಷಭ್‌ ಪಂತ್‌ ಮಾತನಾಡಲು ಇಷ್ಟಪಟ್ಟಿಲ್ಲ. ಹೀಗಾಗಿ ಇಬ್ಬರ ನಡುವಿನ ಸಂಬಂಧಕ್ಕೆ ಫ‌ುಲ್‌ ಸ್ಟಾಪ್‌ ಬಿದ್ದಿದೆ ಎನ್ನಲಾಗಿದೆ. ಲಂಕಾ ವಿರುದ್ಧದ ನಡೆದ 3ನೇ ಟಿ20 ಪಂದ್ಯದಲ್ಲಿ ಪಂತ್‌ಗೆ ಆಡುವ ಹನ್ನೊಂದರಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ