ಜಾವೆಲಿನ್: ನೀರಜ್ ಚೋಪ್ರಾ ವಿನ್
Team Udayavani, Apr 15, 2018, 6:40 AM IST
ಗೋಲ್ಡ್ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ ಆ್ಯತ್ಲೆಟಿಕ್ಸ್ ವಿಭಾಗದ ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸ್ವರ್ಣ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಾವೆಲಿನ್ ತ್ರೋ ಫೈನಲ್ನಲ್ಲಿ ಅವರು 86.47 ಮೀ. ದೂರ ಎಸೆಯುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಚೋಪ್ರಾ ಜಾವೆಲಿನ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ಮಾಜಿ ಜೂನಿಯರ್ ವರ್ಲ್ಡ್ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನವನ್ನು ತಮ್ಮದಾಗಿಸಿಕೊಂಡರು.
ಕಳೆದ ತಿಂಗಳು ಫೆಡರೇಶನ್ ಕಪ್ ನ್ಯಾಶನಲ್ ಚಾಂಪಿಯನ್ಶಿಪ್ ವೇಳೆ ಚೋಪ್ರಾ 85.94 ಮೀ. ಎಸೆಯುವ ಮೂಲಕ ಕಾಮನ್ವೆಲ್ತ್ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಇದೀಗ ಸಾಕಾರಗೊಂಡಿದೆ.
ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಕೂಟದ ಬೆಳ್ಳಿ ಪದಕ ಕೀನ್ಯಾದ ಜೂಲಿಯಸ್ ಯೆಗೊ ಅಂತಿಮ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾದದ್ದು ಚೋಪ್ರಾರ ಚಿನ್ನದ ಹಾದಿಯನ್ನು ಸುಲಭಗೊಳಿಸಿತು. ಜತೆಗೆ 2012ರ ಒಲಿಂಪಿಕ್ಸ್ ಚಾಂಪಿಯನ್ ಮತ್ತು ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ವಿಜೇತ ಟ್ರಿನಿಡಾಡ್ ಆ್ಯಂಡ್ ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಗೇಮ್ಸ್ನಿಂದ ಹೊರಗುಳಿದದ್ದು ಕೂಡ ಚೋಪ್ರಾಗೆ ಇನ್ನಷ್ಟು ಅನುಕೂಲವನ್ನೊದಗಿಸಿತು.
ನೀರಜ್ ಚೋಪ್ರಾ ಕಾಮನ್ವೆಲ್ತ್ ಗೇಮ್ಸ್ ಜಾವೆಲಿನ್ನಲ್ಲಿ ಪದಕ ಗೆದ್ದ ಭಾರತದ 2ನೇ ಸಾಧಕ. ಇದಕ್ಕೂ ಮೊದಲು ಕಾಶೀನಾಥ್ ನಾಯ್ಕ ಅವರು 2010ರ ಹೊಸದಿಲ್ಲಿ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು.
ವೈಯಕ್ತಿಕ ಶ್ರೇಷ್ಠ ಸಾಧನೆಯಿಂದ ದೂರ
ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿರುವ ನೀರಜ್, ನನ್ನ ಪಾಲಿನ ಪ್ರಮುಖ ಪದಕವಿದು. ನನ್ನ ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಲು ಬಯಸಿದ್ದೆನಾದರೂ ಒಂದು ಸೆಂಟಿಮೀಟರ್ನಲ್ಲಿ ಆ ಅವಕಾಶ ಕಳೆದುಕೊಂಡೆ. ಇದಕ್ಕಾಗಿ ನನಗೆ ನಿರಾಸೆಯಾಗಿದೆ. ಕೊನೆಯೆರಡು ಪ್ರಯತ್ನದಲ್ಲಿ ನಾನು ಸುಧಾರಿಸುವುದೂ ಸಾಧ್ಯವಾಗಲಿಲ್ಲ. ಆದರೆ ಈ ಸಾಧನೆ ನನಗೆ ತುಂಬಾ ಖುಷಿ ನೀಡಿದೆ. ವೈಯಕ್ತಿಕ ಉತ್ತಮ ಸಾಧನೆ ಮೆರೆಯುವುದಕ್ಕೆ ಈ ವರ್ಷದುದ್ದಕ್ಕೂ ನನಗೆ ಸಾಕಷ್ಟು ಅವಕಾಶಗಳಿಗೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?