ODI ; ಕಾನ್ವೇ, ಮಿಚೆಲ್ ಸೆಂಚುರಿ ನ್ಯೂಜಿಲ್ಯಾಂಡ್ ಪ್ರಚಂಡ ಚೇಸಿಂಗ್
Team Udayavani, Sep 9, 2023, 11:39 PM IST
ಕಾರ್ಡಿಫ್: ವಿಶ್ವ ಚಾಂಪಿಯನ್ ಇಂಗ್ಲೆಂಡ್ ಎದುರಿನ ಕಾರ್ಡಿಫ್ ಕದನದಲ್ಲಿ ನ್ಯೂಜಿಲ್ಯಾಂಡ್ 8 ವಿಕೆಟ್ಗಳ ಜಯದೊಂದಿಗೆ ಏಕದಿನ ಸರಣಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಡೇವನ್ ಕಾನ್ವೇ ಮತ್ತು ಡ್ಯಾರಿಲ್ ಮಿಚೆಲ್ ಅವರ ಶತಕ ಕಿವೀಸ್ ಸರದಿಯ ವಿಶೇಷವಾಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 6 ವಿಕೆಟಿಗೆ 291 ರನ್ ರಾಶಿ ಹಾಕಿತು. ಪ್ರವಾಸಿ ನ್ಯೂಜಿಲ್ಯಾಂಡ್ 45.4 ಓವರ್ಗಳಲ್ಲಿ ಎರಡೇ ವಿಕೆಟಿಗೆ 297 ರನ್ ಬಾರಿಸಿತು. ಆರಂಭಕಾರ ಡೇವನ್ ಕಾನ್ವೇ 111 ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಡ್ಯಾರಿಲ್ ಮಿಚೆಲ್ 118 ಬಾರಿಸುವ ಜತೆಗೆ, ಅಜೇಯ 180 ರನ್ ಜತೆಯಾಟ ನಡೆಸಿ ಆಂಗ್ಲ ಬೌಲರ್ಗಳಿಗೆ ಬೆವರಿಳಿಸಿದರು.
ಇಂಗ್ಲೆಂಡಿಗೆ ಉರುಳಿಸಲು ಸಾಧ್ಯವಾದದ್ದು 2 ವಿಕೆಟ್ ಮಾತ್ರ. ವಿಲ್ ಯಂಗ್ (29) ಮತ್ತು ಹೆನ್ರಿ ನಿಕೋಲ್ಸ್ (26) ಪೆವಿಲಿಯನ್ ಸೇರಿಕೊಂಡ ಬಳಿಕ ಕಾನ್ವೇ-ಮಿಚೆಲ್ ಜೋಡಿಯ ಪರಾಕ್ರಮ ಮೊದಲ್ಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?