ಲಂಕಾ ತಂಡ ಕೂಡಿಕೊಂಡ ಧನಂಜಯ ಡಿ’ಸಿಲ್ವ
Team Udayavani, Jun 4, 2018, 9:10 AM IST
ಕೊಲಂಬೊ: ಶ್ರೀಲಂಕಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಧನಂಜಯ ಡಿ’ಸಿಲ್ವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ತಂಡವನ್ನು ಕೂಡಿಕೊಳ್ಳಲು ರವಿವಾರ ವಿಮಾನ ಏರಿದರು. ಸೋಮವಾರ ಸಂಜೆ ಅವರು ಟ್ರಿನಿಡಾಡ್ ತಲುಪಲಿದ್ದಾರೆ.
3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಂಡ 9 ದಿನಗಳ ಹಿಂದೆಯೇ ವೆಸ್ಟ್ ಇಂಡೀಸ್ಗೆ ತೆರಳಿತ್ತು. ಆದರೆ ಲಂಕಾ ಕ್ರಿಕೆಟಿಗರು ವಿಂಡೀಸಿಗೆ ವಿಮಾನವೇರಲು ಕೆಲವೇ ಗಂಟೆಗಳಿರುವಾಗ ಧನಂಜಯ ಡಿ’ಸಿಲ್ವ ಅವರ ತಂದೆ ರಂಜನ್ ಡಿ’ಸಿಲ್ವ ಅವರ ಹತ್ಯೆಯಾಗಿತ್ತು. ಹೀಗಾಗಿ ಧನಂಜಯ ತಂಡದಿಂದ ಬೇರ್ಪಟ್ಟಿದ್ದರು.
ಸರಣಿಯ ಮೊದಲ ಟೆಸ್ಟ್ ಪಂದ್ಯ ಜೂ. 6ರಿಂದ ಪೋರ್ಟ್ ಆಫ್ ಸ್ಪೇನ್ನಲ್ಲಿ ಆರಂಭವಾಗಲಿದ್ದು, ಧನಂಜಯ ಡಿ’ಸಿಲ್ವ ಆಯ್ಕೆಗೆ ಲಭ್ಯರಾಗುವರು. ಆದರೆ ಅಂತಿಮ ನಿರ್ಧಾರ ತಂಡದ ಆಡಳಿತ ಮಂಡಳಿಯದ್ದು ಎಂದು ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಗ್ರಹಾಂ ಲಾಬ್ರೂಯ್ ಹೇಳಿದ್ದಾರೆ.
ಧನಂಜಯ ಡಿ’ಸಿಲ್ವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡದೇ ಹೋದರೆ ಮಹೇಲ ಉದವಟ್ಟೆ ಈ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ