ಧೋನಿ ಈಗಲೂ ನಮಗೆ ನಾಯಕ: ಯಜುವೇಂದ್ರ ಚಹಲ್
Team Udayavani, Oct 23, 2017, 7:55 AM IST
ಮುಂಬೈ: ಧೋನಿ ನಾಯಕತ್ವ ಬಿಟ್ಟಿರಬಹುದು, ಆದರೆ ಅವರೊಳಗಿನ ನಾಯಕ ಅವರನ್ನು ಬಿಡಲಾರ. ಅವರು ಈಗಲೂ ನಮಗೆ ನಾಯಕ ಎಂದು ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ತಿಳಿಸಿದ್ದಾರೆ.
ಕೊಹ್ಲಿ ಮಿಡ್ ಆನ್, ಲಾಂಗ್ ಆನ್ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಾ ಆಟಗಾರರಿಂದ ದೂರ ಇರುತ್ತಾರೆ. ಆಗ ಅವರಿಗೆ ಪ್ರತಿಬಾರಿ ಬೌಲರ್ಗಳಿಗೆ ನೆರವು ನೀಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಧೋನಿಯೇ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ನೀನು ಅಲ್ಲಿಯೇ ಇರು ನಾನು ನೋಡಿಕೊಳ್ಳುತ್ತೇನೆಂದು ಕೊಹ್ಲಿಗೆ ಸೂಚಿಸುತ್ತಾರೆ. ಬ್ಯಾಟ್ಸ್ಮನ್ಗಳ ಮನಸ್ಸನ್ನು ಸರಿಯಾಗಿ ಅರಿತು ಅವರು ಬೌಲರ್ಗಳಿಗೆ ಸಲಹೆ ನೀಡುತ್ತಾರೆ. ಅವರ ಈ ಸಾಮರ್ಥ್ಯ ನನಗೆ ಅಚ್ಚರಿ ಮೂಡಿಸಿದೆ ಎಂದು ಎಂದು ಚಹಲ್ ಹೇಳಿದ್ದಾರೆ. ಚಹಲ್ ಭಾರತ ತಂಡದಲ್ಲಿ ಇತ್ತೀಚೆಗೆ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.