ಕೋಲ್ಕತಾದಲ್ಲಿ ಮುನಿಸಿಕೊಂಡರು ಫುಟ್ಬಾಲ್ ದೇವರು ಮರಡೋನಾ
Team Udayavani, Dec 14, 2017, 1:13 PM IST
ಕೋಲ್ಕತಾ: ಅಭಿಮಾನಿಗಳ ಆರಾಧ್ಯ ದೈವ, ಅರ್ಜೆಂಟೀನಾ ಮಾಜಿ ಫುಟ್ಬಾಲಿಗ ಡಿಯಾಗೊ ಮರಡೋನಾ ದಕ್ಷಿಣ ಕೋಲ್ಕತಾ ಕ್ಲಬ್ ಕಾರ್ಯಕ್ರಮಕ್ಕೆ ತೆರಳಿದ ವೇಳೆ ತಾಳ್ಮೆ ಕಳೆದುಕೊಂಡು ಸಿಟ್ಟಾದರು. ಅಷ್ಟೇ ಅಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದೇ ವಾಪಸ್ ಹೋಟೆಲ್ಗೆ ಮರಳಿದ ಘಟನೆ ಕೂಡ ನಡೆಯಿತು.
ಮರಡೋನಾ ಕೋಪಕ್ಕೆ ಕಾರಣವಾಗಿದ್ದು ಕಿಕ್ಕೀರಿದು ತುಂಬಿದ್ದ ಅಭಿಮಾನಿಗಳ ವರ್ತನೆ. ಮರಡೋನಾ ಸ್ಥಳೀಯ ಕ್ಲಬ್ ಕಾರ್ಯಕ್ರಮವೊಂದಕ್ಕಾಗಿ ಆಗಮಿಸಿದ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತುಂಬಿಕೊಂಡಿದ್ದರು. ಮರಡೋನಾಗೆ ಕಾರಿನಿಂದ ಕೆಳಕ್ಕೆ ಇಳಿಯಲು ಸಾಧ್ಯವಾಗಲೇ ಇಲ್ಲ. ಭದ್ರತಾ ಅಧಿಕಾರಿಗಳು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು. 2 ನಿಮಿಷ ಇಳಿಯುತ್ತೇನೆ ಎಂದರು ಅಭಿಮಾನಿಗಳು ಕೇಳಲಿಲ್ಲ. ಇದರಿಂದ ಮರಡೋನಾ ಅಭಿಮಾನಿಗಳ ವಿರುದ್ಧ ತಾಳ್ಮೆ ಕಳೆದುಕೊಂಡರು. ಡಿಯಾಗೊ ಸಿಟ್ಟಾಗಿದ್ದನ್ನು ಗಮನಿಸಿದ ಕಾರ್ಯಕ್ರಮದ ಸಂಘಟಕರು ಅವರನ್ನು ಕೆಳಕ್ಕೆ ಇಳಿಯುವಂತೆ ಮತ್ತೆ ಹೇಳಲಿಲ್ಲ. ಮರಡೋನಾ ಕಾರ್ಯಕ್ರಮದ ಸ್ಮರಣಾರ್ಥ ಸಿದ್ಧಪಡಿಸಿದ್ದ ಹಾಳೆಗೆ ಕಾರಿನಲ್ಲೇ ಕುಳಿತು ಸಹಿ ಮಾಡಿ ವಾಪಸ್ ಹೋಟೆಲ್ಗೆ ಮರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್