ಡೇವಿಸ್ ಕಪ್ ತಂಡಕ್ಕೆ ದಿಗ್ವಿಜಯ್ ಪ್ರತಾಪ್ ಸಿಂಗ್
Team Udayavani, Aug 1, 2023, 12:19 AM IST
ಹೊಸದಿಲ್ಲಿ: ಮೊರೊಕ್ಕೊ ವಿರುದ್ಧ ಆಡಲಾಗುವ ಡೇವಿಸ್ ಕಪ್ ಗ್ರೂಪ್ 2 ಹಂತದ ಪಂದ್ಯಕ್ಕೆ ಸೋಮವಾರ ಭಾರತದ ಟೆನಿಸ್ ತಂಡವನ್ನು ಪ್ರಕಟಿಸಲಾಗಿದೆ. ದಿಗ್ವಿಜಯ್ ಪ್ರತಾಪ್ ಸಿಂಗ್ ಈ ತಂಡದ ಹೊಸ ಮುಖವಾಗಿದ್ದಾರೆ.
ಈ ತಂಡ 6 ಆಟಗಾರರನ್ನು ಒಳ ಗೊಂಡಿದೆ. ಸುಮಿತ್ ನಾಗಲ್, ಶಶಿ ಕುಮಾರ್ ಮುಕುಂದ್, ಯುಕಿ ಭಾಂಬ್ರಿ, ರಾಮ್ಕುಮಾರ್ ರಾಮನಾಥನ್ ಮತ್ತು ರೋಹನ್ ಬೋಪಣ್ಣ ಉಳಿದ ಆಟಗಾರರು. ರೋಹಿತ್ ರಾಜ್ಪಾಲ್ ಈ ತಂಡದ ಆಡದ ನಾಯಕರಾಗಿದ್ದಾರೆ.
ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಸುತ್ತಿನಲ್ಲಿ ಡೆನ್ಮಾರ್ಕ್ಗೆ ಶರಣಾದ ಬಳಿಕ ಭಾರತ ವಿಶ್ವ ಗ್ರೂಪ್ 2ಕ್ಕೆ ಇಳಿದಿದೆ. ಪಂದ್ಯಾವಳಿ ಸೆ. 16 ಮತ್ತು 17ರಂದು ಲಕ್ನೋದಲ್ಲಿ ನಡೆಯಲಿದೆ.
ಆಟಗಾರರ ರ್ಯಾಂಕಿಂಗ್, ಲಭ್ಯತೆ, ಸಾಧನೆ ಮತ್ತು ಈಗಿನ ಫಾರ್ಮ್ ಅನ್ನು ಮಾನದಂಡವಾಗಿರಿಸಿಕೊಂಡು ತಂಡವನ್ನು ಅಂತಿಮಗೊಳಿಸಲಾಗಿದೆ. ಸಾಕೇತ್ ಮೈನೇನಿ, ಮಾನಸ್ ಧಾಮ್ನೆ, ಮನೀಷ್ ಸುರೇಶ್ಕುಮಾರ್, ಕರಣ್ ಸಿಂಗ್ ಮತ್ತು ಯುವನ್ ನಂದಲ್ ಕೂಡ ತಂಡದ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಟಿಎ ತಿಳಿಸಿದೆ.
ಬೋಪಣ್ಣ ವಿದಾಯ ಸರಣಿ
ಇದು ದೇಶದ ಅಗ್ರಮಾನ್ಯ ಡಬಲ್ಸ್ ಆಟಗಾರ, ಕರ್ನಾಟಕದ ರೋಹನ್ ಬೋಪಣ್ಣ ಪಾಲಿಗೆ ವಿದಾಯ ಸರಣಿಯೂ ಆಗಿದೆ. ತಾನು ಡೇವಿಸ್ ಕಪ್ ಪಂದ್ಯಾವಳಿಗೆ ವಿದಾಯ ಹೇಳುವುದಾಗಿ ಬೋಪಣ್ಣ ಕಳೆದ ತಿಂಗಳು ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!