MS Dhoni Catch: 42ರ ಧೋನಿಯ ಡೈವಿಂಗ್ ಕ್ಯಾಚ್!
Team Udayavani, Mar 28, 2024, 7:30 AM IST
ಚೆನ್ನೈ: ಚೆನ್ನೈ-ಗುಜರಾತ್ ನಡುವಿನ ಪಂದ್ಯದ ವೈರಲ್ ಚಿತ್ರ ವೆಂದರೆ ಮಾಜಿ ನಾಯಕ ಧೋನಿ ಅವರ ಡೈವಿಂಗ್ ಕ್ಯಾಚ್. 42ನೇ ವರ್ಷದಲ್ಲೂ, ಕಳೆ ದೊಂದು ವರ್ಷ ದಿಂದ ಐಪಿಎಲ್ ಹೊರತು ಪಡಿಸಿ ಬೇರೆ ಯಾವುದೇ ಪಂದ್ಯ ದಲ್ಲಿ ಆಡದೇ ಹೋದರೂ ಧೋನಿ ಅವರ ಕ್ರಿಕೆಟ್ ಮಟ್ಟ ಸ್ವಲ್ಪವೂ ಕುಸಿದಿಲ್ಲ ಎಂಬುದಕ್ಕೆ ಈ ಡೈವಿಂಗ್ ಕ್ಯಾಚೇ ಸಾಕ್ಷಿ.
ಗುಜರಾತ್ ತಂಡದ ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಆಡಲಿಳಿದ ವಿಜಯ್ ಶಂಕರ್ ಉತ್ತಮ ಆಟದ ಸೂಚನೆ ನೀಡಿದ್ದರು. ಆದರೆ ಡ್ಯಾರಿಲ್ ಮಿಚೆಲ್ ಇದಕ್ಕೆ ಅವಕಾಶ ಕೊಡಲಿಲ್ಲ. ಪಂದ್ಯದ 8ನೇ ಓವರ್ನ 3ನೇ ಎಸೆತದಲ್ಲಿ ಅವರು ವಿಜಯ್ ಶಂಕರ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಟ್ಗೆ ಎಜ್ ಆದ ಚೆಂಡು ಮೊದಲ ಸ್ಲಿಪ್ನತ್ತ ಸಾಗಿತ್ತು. ನಿಜಕ್ಕಾದರೆ ಇದು ಧೋನಿ ಪಡೆಯಬೇಕಿದ್ದ ಕ್ಯಾಚ್ ಆಗಿರಲಿಲ್ಲ. ಆದರೆ ಮಿಂಚಿನಂತೆ ಡೈವ್ ಮಾಡಿದ ಧೋನಿ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದರು!
ಧೋನಿ ಸ್ಪಿನ್ ಬೌಲಿಂಗ್
ಈ ಪಂದ್ಯಕ್ಕೂ ಮುನ್ನ ನೆಟ್ಸ್ ನಲ್ಲಿ ಧೋನಿ ಭಾರೀ ಬೆವರು ಸುರಿಸಿ ಅಭ್ಯಾಸ ನಡೆಸಿದ್ದರು. ಈ ಅವಧಿಯಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಕೂಡ ನಡೆಸಿ ಗಮನ ಸೆಳೆದರು. ಹಾಗಾದರೆ ಧೋನಿ ಈ ಐಪಿಎಲ್ನಲ್ಲಿ ಸ್ಪಿನ್ ಬೌಲಿಂಗ್ ಮಾಡುವ ಸಾಧ್ಯತೆ ಇದೆಯೇ ಎಂಬುದು ಅಭಿಮಾನಿಗಳ ಪ್ರಶ್ನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ