“ಯು.ಎಸ್. ಓಪನ್ಗೆ ಅವಸರ ಬೇಡ’
Team Udayavani, Jun 16, 2020, 5:15 AM IST
ಮೆಲ್ಬರ್ನ್: ಕೋವಿಡ್-19 ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಅದರಲ್ಲೂ ನ್ಯೂಯಾರ್ಕ್ನಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ, ಹೀಗಾಗಿ ಯು.ಎಸ್. ಓಪನ್ ಕೂಟನ್ನು ನಡೆಸಲು ಅವಸರ ಮಾಡಬಾರದು ಎಂಬುದಾಗಿ ಆಸ್ಟ್ರೇಲಿಯದ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಹೇಳಿದ್ದಾರೆ.
“ಟೆನಿಸ್ ಮತ್ತೆ ಆರಂಭವಾಗುವುದನ್ನು ಕಾತರದಿಂದ ಕಾಯುತ್ತಿದ್ದೇನೆ. ಆದರೆ ಇದಕ್ಕಾಗಿ ಅವಸರಪಡುವ ಅಗತ್ಯವಿಲ್ಲ. ಕೇವಲ ಆಟಗಾರರದಷ್ಟೇ ಅಲ್ಲ, ಎಲ್ಲರ ಆರೋಗ್ಯವೂ ಮುಖ್ಯ’ ಎಂಬುದಾಗಿ ಬಾರ್ಟಿ ಹೇಳಿದರು.