ಬ್ರಾವೋ ಬರೆದಿದ್ದಾರೆ ಕೊಹ್ಲಿ, ಧೋನಿ ಕುರಿತು ಹಾಡು?
Team Udayavani, Apr 22, 2017, 10:56 AM IST
ರಾಜ್ಕೋಟ್: ಕಳೆದ ಆವೃತ್ತಿ ಐಪಿಎಲ್ ವೇಳೆ ಗುಜರಾತ್ ಲಯನ್ಸ್ ಆಟಗಾರ ಡ್ವೇನ್ ಬ್ರಾವೊ ಚಾಂಪಿಯನ್…ಚಾಂಪಿಯನ್ ಹಾಡು ರಚಿಸಿ, ಸ್ವತಃ ಹಾಡಿ ಭಾರೀ ಸುದ್ದಿಯಾಗಿದ್ದರು. ವಿಶ್ವದಾದ್ಯಂತ ಹಾಡು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೀಕ್ಷಣೆಗೆ ಕಾರಣವಾಗಿತ್ತು. ಸದ್ಯ ಈ ಆವೃತ್ತಿಯಲ್ಲಿ ಡ್ವೇನ್ ಬ್ರಾವೋ ಗಾಯದ ಕಾರಣದಿಂದ ಗುಜರಾತ್ ಪರ ಯಾವುದೇ ಪಂದ್ಯ ಆಡಿಲ್ಲ. ಹಾಗಂತ ಕೆಲಸವಿಲ್ಲದೆ ಬ್ರಾವೊ ಖಾಲಿ ಕೈಯಲ್ಲಿ ಕುಳಿತಿಲ್ಲ. ತಂಡದ ಜತೆ ಇರುವ ಸಮಯದಲ್ಲಿ ಅವರು ಹಾಡು ಬರೆಯಲು ಮುಂದಾಗಿದ್ದಾರೆ. ಸ್ವತಃ ಇದನ್ನು ಗುಜರಾತ್ ಲಯನ್ಸ್ ಅಧಿಕೃತವಾಗಿ ವಿಡಿಯೊವೊಂದನ್ನು ಪ್ರಕಟಿಸಿ ತಿಳಿಸಿದೆ.
ಡ್ವೇನ್ ಬ್ರಾವೊ ಮತ್ತೋರ್ವ ವಿಂಡೀಸ್ ಕ್ರಿಕೆಟಿಗ ಡ್ಯಾರನ್ ಬ್ರಾವೊಗೆ ತನ್ನ ಹಾಡಿನ ಸಾಲುಗಳನ್ನು ಪಂದ್ಯ ರೂಪದಲ್ಲಿ ಹೇಳುವ ವಿಡಿಯೋ ಇದೆ. ಹಾಡಿನ ಸಾಲುಗಳು ಹೀಗಿವೆ.. “ವಿ ಗೋ ಓವರ್ ಇಂಡಿಯಾ..ಇಂಡಿಯಾ..ಇಂಡಿಯಾ.. ಐ ಕಾಲ್ ಅಪ್ ಬುವೊಯ್ ಕೊಹ್ಲಿ..ಕೊಹ್ಲಿ..ಕೊಹ್ಲಿ. ವೀ ಟೆಲ್ ಹಿಮ್ ಟು ವಾಟ್ಸ್ಅಪ್ ಧೋನಿ…’ಎಂದು ಸಾಲುಗಳಿವೆ. ತಕ್ಷಣ ಇಬ್ಬರು ಜೋರಾಗಿ ನಗಾಡುತ್ತಾರೆ. ಈ ವಿಡಿಯೋ ಭಾರೀ ವೀಕ್ಷಣೆಗೆ ಕಾರಣವಾಗಿದೆ. ಇದನ್ನು ಗುಜರಾತ್ ತಂಡದ ಅಧಿಕೃತ ಮೂಲಗಳು ಪ್ರಕಟಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು