ರೋಚಕ ಅಂತ್ಯ; ಮಳೆಪೀಡಿತ ಲಾರ್ಡ್ಸ್‌ ಟೆಸ್ಟ್‌ ಡ್ರಾ

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಸಿತ; ಸೋಲಿನಿಂದ ಪಾರಾದ ಆಸ್ಟ್ರೇಲಿಯ

Team Udayavani, Aug 20, 2019, 5:45 AM IST

AP8_19_2019_000006A

ಲಂಡನ್‌: ಮಳೆಯಿಂದಾಗಿ ನೀರಸ ಅಂತ್ಯ ಕಾಣಬೇಕಿದ್ದ ಆ್ಯಶಸ್‌ ಸರಣಿಯ ಲಾರ್ಡ್ಸ್‌ ಟೆಸ್ಟ್‌ ರೋಚಕವಾಗಿ ಕೊನೆಗೊಂಡಿದೆ. ಅಂತಿಮ ಹಂತದಲ್ಲಿ ತೀವ್ರ ಕುಸಿತಕ್ಕೊಳಗಾದ ಆಸ್ಟ್ರೇಲಿಯ ಸೋಲಿನಿಂದ ಸ್ವಲ್ಪದರಲ್ಲೇ ಪಾರಾಗಿದೆ.

8 ರನ್ನುಗಳ ಅಲ್ಪ ಮುನ್ನಡೆ ಬಳಿಕ ದ್ವಿತೀಯ ಸರದಿ ಆರಂಭಿಸಿದ ಇಂಗ್ಲೆಂಡ್‌ 5 ವಿಕೆಟಿಗೆ 258 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. 267 ರನ್ನುಗಳ ಗುರಿ ಪಡೆದ ಆಸ್ಟ್ರೇಲಿಯ ಪಂದ್ಯ ಮುಗಿಯುವಾಗ 6 ವಿಕೆಟ್‌ ಕಳೆದುಕೊಂಡು 154 ರನ್‌ ಮಾಡಿತ್ತು. ಸ್ಟೀವನ್‌ ಸ್ಮಿತ್‌ ಗಾಯಾಳಾಗಿ ಹೊರಗುಳಿದದ್ದು ಆಸೀಸ್‌ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿತು. ಇಂಗ್ಲೆಂಡಿಗೆ ಸರಣಿ ಸಮಬಲದ ಅವಕಾಶ ತಪ್ಪಿಹೋಯಿತು. ಇದು 1997ರ ಬಳಿಕ ಲಾರ್ಡ್ಸ್‌ನಲ್ಲಿ ಡ್ರಾಗೊಂಡ ಮೊದಲ ಆ್ಯಶಸ್‌ ಟೆಸ್ಟ್‌ ಆಗಿದೆ.

ಲಬುಶೇನ್‌-ಹೆಡ್‌ ನೆರವು
ವಾರ್ನರ್‌ (5), ಖ್ವಾಜಾ (2), ಬಾನ್‌ಕ್ರಾಫ್ಟ್ (16) ವಿಕೆಟ್‌ಗಳು 47 ರನ್ನಿಗೆ ಉರುಳಿದ ಬಳಿಕ ಮಾರ್ನಸ್‌ ಲಬುಶೇನ್‌ (59) ಮತ್ತು ಟ್ರ್ಯಾವಿಸ್‌ ಹೆಡ್‌ (ಔಟಾಗದೆ 42) ತಂಡದ ನೆರವಿಗೆ ನಿಂತರು. 4ನೇ ವಿಕೆಟಿಗೆ 85 ರನ್‌ ಒಟ್ಟುಗೂಡಿಸಿದರು. ಆದರೆ ಕೊನೆಯಲ್ಲಿ 17 ರನ್‌ ಅಂತರದಲ್ಲಿ ಮತ್ತೆ 3 ವಿಕೆಟ್‌ಗಳು ಉರುಳಿದಾಗ ಆಸೀಸ್‌ ಆತಂಕಕ್ಕೆ ಸಿಲುಕಿತು.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ಆಸ್ಟ್ರೇಲಿಯ 251 ರನ್ನುಗಳಿಂದ ಗೆದ್ದಿತ್ತು. ಸರಣಿಯ 3ನೇ ಟೆಸ್ಟ್‌ ಆ. 22ರಿಂದ ಲೀಡ್ಸ್‌ನಲ್ಲಿ ಆರಂಭವಾಗಲಿದೆ.ಉರುಳಿದ 6 ವಿಕೆಟ್‌ಗಳನ್ನು ಜೋಫ‌Å ಆರ್ಚರ್‌, ಜಾಕ್‌ ಲೀಚ್‌ ಹಂಚಿಕೊಂಡರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 115 ರನ್‌ಗೆ ಬಾರಿಸಿದ ಬೆನ್‌ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ 258 ಮತ್ತು 5 ವಿಕೆಟಿಗೆ 258 ಡಿಕ್ಲೇರ್‌. ಆಸ್ಟ್ರೇಲಿಯ-250 ಮತ್ತು 6 ವಿಕೆಟಿಗೆ 154 (ಲಬುಶೇನ್‌ 49, ಹೆಡ್‌ ಔಟಾ ಗದೆ 42, ಆರ್ಚರ್‌ 32ಕ್ಕೆ 3, ಲೀಚ್‌ 37ಕ್ಕೆ 3).
ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌.

“ಲೈಕ್‌ ಫಾರ್‌ ಲೈಕ್‌’
ನೂತನ ನಿಯಮದನ್ವಯ, 143 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ “ಲೈಕ್‌ ಫಾರ್‌ ಲೈಕ್‌’ ಬದಲಿ ಕ್ರಿಕೆಟಿಗನಾಗಿ ಬ್ಯಾಟ್‌ ಹಿಡಿದು ಬಂದದ್ದು ಮಾರ್ನಸ್‌ ಲಬುಶೇನ್‌ ಪಾಲಿನ ಹೆಗ್ಗಳಿಕೆ. ಸ್ಮಿತ್‌ ಹೊರಬಿದ್ದುದರಿಂದ ಲಬುಶೇನ್‌ಗೆ ಈ ಅವಕಾಶ ಲಭಿಸಿತ್ತು. ಮೊದಲಾದರೆ ಕೀಪಿಂಗ್‌ ಹಾಗೂ ಗ್ರೌಂಡ್‌ ಫೀಲ್ಡಿಂಗ್‌ ಹೊರತುಪಡಿಸಿ ಬೇರೆ ಯಾವುದೇ ವಿಭಾಗಗಳಲ್ಲಿ ಬದಲಿ ಆಟಗಾರನಿಗೆ ಅವಕಾಶ ಇರಲಿಲ್ಲ.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.