ಫೆಡರರ್‌ಗೆ 10ನೇ ಹಾಲೆ ಕಿರೀಟ

Team Udayavani, Jun 24, 2019, 5:31 AM IST

ಹಾಕೆ (ಜರ್ಮನಿ): ರೋಜರ್‌ ಫೆಡರರ್‌ 10ನೇ “ಹಾಲೆ ಎಟಿಪಿ ಟೆನಿಸ್‌’ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧ 7-6 (7-2), 6-1 ನೇರ ಸೆಟ್‌ ಜಯ ಸಾಧಿಸಿದರು. ಇದು ಫೆಡರರ್‌ ಟೆನಿಸ್‌ ಬಾಳ್ವೆಯ 102ನೇ ಸಿಂಗಲ್ಸ್‌ ಪ್ರಶಸ್ತಿಯಾಗಿದೆ.

ಈ ಜಯದೊಂದಿಗೆ ಫೆಡರರ್‌ ಮುಂಬರುವ ವಿಂಬಲ್ಡನ್‌ ಪಂದ್ಯಾವಳಿಗೆ ಹೊಸ ಹುರುಪಿನಿಂದ ಸಜ್ಜುಗೊಂಡಂತಾಯಿತು. ವಿಂಬಲ್ಡನ್‌ನಲ್ಲಿ ಅವರು 9ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

“ಇದು ನಂಬಲಸಾಧ್ಯವಾದ ಸಾಧನೆ. ಮೊದಲ ಸಲ ಇಲ್ಲಿ ಆಡಲಿಳಿದಾಗ ನಾನು 10 ಪ್ರಶಸ್ತಿ ಗೆಲ್ಲಬಲ್ಲೆನೆಂಬ ಯಾವ ನಿರೀಕ್ಷೆಯೂ ಇರಲಿಲ್ಲ’ ಎಂದು ಫೆಡರರ್‌ ಹಾಲೆ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ