India ಮಾಜಿ ಫುಟ್ಬಾಲಿಗ ಮಜುಮ್ದಾರ್ ನಿಧನ
Team Udayavani, Dec 29, 2023, 12:01 AM IST
ಹೊಸದಿಲ್ಲಿ: ಭಾರತದ ಮಾಜಿ ಫುಟ್ಬಾಲಿಗ, ಡಿಫೆಂಡರ್ ಪ್ರಬಿರ್ ಮಜುಮ್ದಾರ್ (77) ಗುರುವಾರ ನಿಧನ ಹೊಂದಿದರು. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಹಾಗೂ ಮಗನ ಆರೈಕೆಯಲ್ಲಿದ್ದರು.
1960-70ರ ದಶತ ಸ್ಟೈಲಿಶ್ ವಿಂಗ್-ಬ್ಯಾಕ್ ಆಗಿದ್ದ ಪ್ರಬಿರ್ ಮಜುಮಾªರ್ 1974ರ ಏಷ್ಯಾಡ್ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. ದೇಶಿ ಫುಟ್ಬಾಲ್ನಲ್ಲಿ ಅವರು ಈಸ್ಟ್ ಬೆಂಗಾಲ್ ಮತ್ತು ಈಸ್ಟರ್ನ್ ರೈಲ್ವೇ ತಂಡವನ್ನು ಪ್ರತಿನಿಧಿಸಿದ್ದರು. “ಸಂತೋಷ್ ಟ್ರೋಫಿ’ ಟೂರ್ನಿಯಲ್ಲಿ ಬಂಗಾಲ ಪರ ಆಡಿದ್ದರು.ಪ್ರಬಿರ್ ಮಜುಮಾªರ್ ನಿಧನಕ್ಕೆ ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ ಸಂತಾಪ ಸೂಚಿಸಿದೆ.