ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್: ರಾಡುಕಾನು, ಮರಿಯಾ ಸಕ್ಕರಿಗೆ ಆಘಾತಕಾರಿ ಸೋಲು
Team Udayavani, May 25, 2022, 10:58 PM IST
ಪ್ಯಾರಿಸ್: ಕಳೆದ ವರ್ಷದ ಸೆಮಿಫೈನಲಿಸ್ಟ್ ಮತ್ತು ನಾಲ್ಕನೇ ಶ್ರೇಯಾಂಕದ ಮರಿಯಾ ಸಕ್ಕರಿ ಮತ್ತು ಹಾಲಿ ಯುಎಸ್ ಚಾಂಪಿಯನ್ 12ನೇ ಶ್ರೇಯಾಂಕದ ಬ್ರಿಟನ್‌ನ ಮ್ಮಾ ರಾಡುಕಾನು ಅವರು ಫ್ರೆಂಚ್ ಓಪನ್‌ನ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ.
ಎರಡು ಸೆಟ್‌ಗಳ ಕಠಿನ ಹೋರಾಟದಲ್ಲಿ ಸಕ್ಕಾರಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಕೈಯಲ್ಲಿ 7-6 (7-5), 7-6 (7-4) ಸೆಟ್‌ಗಳಿಂದ ಸೋಲನ್ನು ಕಂಡರು. ಇಲ್ಲಿ ಸತತ ಮೂರನೇ ಬಾರಿ ಮೂರನೇ ಸುತ್ತಿಗೇರಿರುವ ಮುಚೋವಾ ಮುಂದಿನ ಸುತ್ತಿನಲ್ಲಿ ಅಮೆರಿಕದ 27ನೇ ಶ್ರೇಯಾಂಕದ ಅಮಂಡಾ ಅನಿಸಿಮೋವಾ ಅವರ ಸವಾಲನ್ನು ಎದುರಿಸಲಿದ್ದಾರೆ.
ರಾಡುಕಾನುಗೆ ಆಘಾತ
ಯುಎಸ್ ಚಾಂಪಿಯನ್ ಆಗಿರುವ 19ರ ಹರೆಯದ ರಾಡುಕಾನು ಚೊಚjಲ ಬಾರಿ ಫ್ರೆಂಚ್ ಓಪನ್‌ನಲ್ಲಿ ಆಡು ತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಜೆಕ್‌ನ ಲಿಂಡಾ ನೊಸ್ಕೋವಾ ಅವರನ್ನು ಕೆಡಹಿದ್ದ ಅವರು ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದರು. ಎರಡು ತಾಸುಗಳ ಕಠಿನ ಹೋರಾಟದಲ್ಲಿ ಅವರು ಬೆಲಾರೂಸ್‌ನ ಅಲಿಯಾಕ್ಸಾಂಡ್ರಾ ಸ್ಯಾಸ್ನೊವಿಚ್ ಕೈಯಲ್ಲಿ 6-3, 1-6, 1-6 ಸೆಟ್‌ಗಳಿಂದ ಸೋತರು. ಆಕ್ರಮಣಕಾರಿಯಾಗಿ ಆಡಿದ ಸ್ಯಾಸ್ನೊವಿಚ್ 45 ವಿಜಯಿ ಹೊಡೆತಗಳನ್ನು ಹೊಡೆದಿದ್ದರು.
ಅಜರೆಂಕಾ, ಗಾಫ್ ಮುನ್ನಡೆ
15ನೇ ಶ್ರೇಯಾಂಕದ ವಿಕ್ಟೋರಿಯಾ ಅಜರೆಂಕಾ 34ರ ಹೆರೆಯದ ಜರ್ಮನಿಯ ಆಂದ್ರೇಯಾ ಪೆಟ್ಕೊವಿಕ್ ಅವರನ್ನು 6-1, 7-6 (7-3) ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದರು. ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಹದಿಹರೆಯದ ಕೊಕೊ ಗಾಫ್ ಬೆಲ್ಜಿಯಂನ ಅಲಿಸನ್ ವಾನ್ ಯುತ್ವಾಂಕ್ ಅವರನ್ನು ಸೋಲಿಸಿ ಮೂರನೇ ಸುತ್ತು ತಲುಪಿದ್ದಾರೆ.
18ರ ಹರೆಯದ ಗಾಫ್ ತನ್ನ ನಿರ್ವಹಣೆಯನ್ನು ಇನ್ನಷ್ಟು ಉತ್ತಮಪಡಿಸಲು ಬಯಸಿದ್ದಾರೆ. ಕಳೆದ ವರ್ಷ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಗಾಫ್ ದ್ವಿತೀಯ ಸುತ್ತಿನಲ್ಲಿ ಯತ್ವಾಂಕ್ ಅವರನ್ನು 6-1, 7-6 (4) ಸೆಟಗಳಿಂದ ಉರುಳಿಸಿದರು. ಗಾಫ್ ಈಗ ಕಣದಲ್ಲಿ ಉಳಿದಿರುವ ಅತೀ ಕಿರಿಯ ಆಟಗಾರ್ತಿಯಾಗಿದ್ದಾರೆ. ಅವರು ಈ ವಾರ ಹೈಸ್ಕೂಲ್ ಗ್ರ್ಯಾಜುವೇಶನ್ ಮುಗಿಸಿದ ಸಂಭ್ರಮ ಆಚರಿಸಿದ್ದರು.
ರಾಮ್‌ಕುಮಾರ್‌ಗೆ ಮೊದಲ ಗೆಲುವು
ಪ್ಯಾರಿಸ್: ಭಾರತದ ಟೆನಿಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅವರು ಗ್ರ್ಯಾನ್ ಸ್ಲಾಮ್ ಕೂಟದ ಮುಖ್ಯ ಡ್ರಾದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಖುಷಿಯನ್ನು ಸಂಭ್ರಮಿಸಿದ್ದಾರೆ.
ರಾಮ್‌ಕುಮಾರ್ ಮತ್ತು ಅಮೆರಿಕದ ಜತೆಗಾರ ಹಂಟರ್ ರೀಸ್ ಅವರು ಜರ್ಮನಿಯ ಡೇನಿಯಲ್ ಆಲ್ಟ್ಮೈರ್ ಮತ್ತು ಆಸ್ಕರ್ ಒಟ್ಟೆ ಅವರನ್ನು ಸೋಲಿಸಿ ಫ್ರೆಂಚ್ ಓಪನ್ ಕೂಟದ ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ.
ಸಿಂಗಲ್ಸ್ ಮುಖ್ಯ ಡ್ರಾಕ್ಕೆ ಪ್ರವೇಶಿಸಲು ಬಹಳಷ್ಟು ಪರಿಶ್ರಮ ಪಟ್ಟಿದ್ದ ರಾಮ್‌ಕುಮಾರ್ ಇದರಲ್ಲಿ ಯಶಸ್ಸು ಪಡೆದಿರಲಿಲ್ಲ. ಇದೀಗ ಡಬಲ್ಸ್‌ನಲ್ಲಿ ರೀಸ್ ಜತೆ ಆಡುತ್ತಿರುವ ಅವರು 7-6 (4), 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ. ತನ್ನ ಜತೆಗಾರ ರೋಹನ್ ಬೋಪಣ್ಣ ಜತೆಗೂಡಿ ಅಡಿಲೇಡ್‌ನಲ್ಲಿ ನಡೆದ ಎಟಿಪಿ ಟೂರ ಪ್ರಶಸ್ತಿ ಜಯಿಸಿದ್ದ ರಾಮ್‌ಕುಮಾರ್ ಡಬಲ್ಸ್‌ನಲ್ಲಿ ತನ್ನ ರ್‍ಯಾಂಕಿಂಗನ್ನು ಉತ್ತಮಪಡಿಸಿಕೊಂಡಿದ್ದರು. 27ರ ಹರೆಯದ ರಾಮ್‌ಕುಮಾರ್ ಇದೀಗ ನೂರರ ಒಳಗಿನ ರ್‍ಯಾಂಕಿಂಗ್ ಹೊಂದಿದ್ದಾರೆ.
ರೋಹನ್ ಬೋಪಣ್ಣ ಮತ್ತು ಅವರ ಡಚ್ ಜತೆಗಾರ ಮಿಡ್ಡೆಲ್‌ಕೂಪ್ ಅವರು ಸ್ಥಳೀಯ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಗುಯೆಮಾರ್ಡ್ ವಯೇನ್‌ಬರ್ಗ್ ಮತ್ತುಲುಕಾ ವಾನ್ ಅಸಚೆ ಅವರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಂಡೀಸ್ ಪ್ರವಾಸ: ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಸಾಧ್ಯತೆ
ವಿಂಬಲ್ಡನ್ ಟೆನಿಸ್ : ನೊವಾಕ್ ಜೊಕೋವಿಕ್, ತಾಟ್ಜಾನಾ ಮರಿಯಾ ಸೆಮಿಗೆ
ಮಾನವ ದೋಷ: ಸಿಂಧು ಕ್ಷಮೆ ಕೇಳಿದ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿ
ವಿಶ್ವದ ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಖ್ಯಾತ ಶಟ್ಲರ್ ಪ್ರಣಯ್
ಸಮಾನ ಪಂದ್ಯ ಶುಲ್ಕ; ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ನಿರ್ಧಾರ
MUST WATCH
ಹೊಸ ಸೇರ್ಪಡೆ
ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…
ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿತದಿಂದ ದೂರು
ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್