ಫಿನ್ಲಂಡ್‌ನಲ್ಲಿ ನೀರಜ್ ಚೋಪ್ರಾ ತರಬೇತಿ
Team Udayavani, May 25, 2022, 11:07 PM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆಗೈದ ನೀರಜ್ ಚೋಪ್ರಾ ಫಿನ್ಲಂಡ್‌ನಲ್ಲಿ ತರಬೇತಿ ಪಡೆಯುವುದಕ್ಕೆ ಸರಕಾರ ಅನುಮತಿ ನೀಡಿದೆ.
ನೀರಜ್ ಚೋಪ್ರಾ ಇಷ್ಟು ದಿನ ಟರ್ಕಿಯ “ಗ್ಲೋರಿಯಾ ಸ್ಪೋರ್ಟ್ಸ್ ಅರೇನಾ’ದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಗುರುವಾರ ಫಿನ್ಲಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಇಲ್ಲಿನ “ಕುವೊರ್ತಾನೆ ಒಲಿಂಪಿಕ್ ಟ್ರೇನಿಂಗ್ ಸೆಂಟರ್’ನಲ್ಲಿ ಜೂ. 22ರ ತನಕ ತರಬೇತಿ ಪಡೆಯಲಿದ್ದಾರೆ. ಇಲ್ಲಿ ಒಲಿಂಪಿಕ್ಸ್ ಮಟ್ಟದ ಒಳಾಂಗಣ ಹಾಗೂ ಹೊರಾಂಗಣ ಸೌಲಭ್ಯವಿದೆ. ಪ್ಯಾರಾಲಿಂಪಿಯನ್ ದೇವೇಂದ್ರ ಜಜಾರಿಯಾ ಕೂಡ ಇಲ್ಲಿಯೇ ತರಬೇತಿ ಪಡೆದಿದ್ದರು.
ಇಲ್ಲಿ ತರಬೇತಿ ಪಡೆದ ಬಳಿಕ ನೀರಜ್ ಚೋಪ್ರಾ “ಪಾವೊ ನುರ್ಮಿ ಗೇಮ್ಸ್’ನಲ್ಲಿ ಪಾಲ್ಗೊಳ್ಳಲು ಟುರ್ಕುಗೆ ತೆರಳಲಿದ್ದಾರೆ. ಬಳಿಕ ಕುವೊರ್ತಾನ್‌ನಲ್ಲಿಯೇ “ಕುವೊರ್ತಾನ್ ಗೇಮ್ಸ್’ನಲ್ಲಿ ಸ್ಪರ್ಧೆಗೆ ಇಳಿಯುವರು.
ತರಬೇತಿಯ ಅವಧಿಯಲ್ಲಿ ಫಿನ್ಲಂಡ್‌ನಲ್ಲಿ ಉಳಿಯಲಿರುವ ನೀರಜ್ ಚೋಪ್ರಾ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಹೆಲ್ಸಿಂಕಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸೂಚಿಸಿದೆ.
4 ವಾರಗಳ ಈ ತರಬೇತಿ ಸರಕಾರದ “ಟಾಪ್ಸ್’ ವ್ಯಾಪ್ತಿಗೆ ಬರಲಿದ್ದು. ಇದಕ್ಕಾಗಿ ಕ್ರೀಡಾ ಸಚಿವಾಲಯ ಸುಮಾರು 9.8 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಂಡೀಸ್ ಪ್ರವಾಸ: ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಸಾಧ್ಯತೆ
ವಿಂಬಲ್ಡನ್ ಟೆನಿಸ್ : ನೊವಾಕ್ ಜೊಕೋವಿಕ್, ತಾಟ್ಜಾನಾ ಮರಿಯಾ ಸೆಮಿಗೆ
ಮಾನವ ದೋಷ: ಸಿಂಧು ಕ್ಷಮೆ ಕೇಳಿದ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿ
ವಿಶ್ವದ ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಖ್ಯಾತ ಶಟ್ಲರ್ ಪ್ರಣಯ್
ಸಮಾನ ಪಂದ್ಯ ಶುಲ್ಕ; ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ನಿರ್ಧಾರ