ಮತ್ತೆ ಗಾಯಗೊಂಡ ಮ್ಯಾಕ್ಸ್ ವೆಲ್: ಐಪಿಎಲ್ ನ ಮೊದಲಾರ್ಧ ತಪ್ಪಿಸಲಿರುವ ಗ್ಲೆನ್
Team Udayavani, Feb 12, 2020, 3:44 PM IST
ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತೆ ಗಾಯಗೊಂಡಿದ್ದಾರೆ. ಮೊಣಕೈ ಗಾಯಕ್ಕೆ ತುತ್ತಾಗಿರುವ ಗ್ಲೆನ್ ಐಪಿಎಲ್ ನ ಮೊದಲ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಮೊಣಕೈ ನೋವಿನಿಂದ ಬಳಲುತ್ತಿರುವ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈ ಸರಣಿಗೆ ಮ್ಯಾಕ್ಸವೆಲ್ ಬದಲಿಗೆ ಆಸೀಸ್ ತಂಡವನ್ನು ಡಿ ಶಾರ್ಟ್ ಸೇರಿಕೊಳ್ಳಲಿದ್ದಾರೆ.
ಗುರುವಾರ ಮ್ಯಾಕ್ಸವೆಲ್ ಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ನಂತರ ಆರರಿಂದ ಎಮಟು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ.
ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮ್ಯಾಕ್ಸ್ ವೆಲ್ ರನ್ನು 105 ಕೋಟಿಗೆ ಖರೀದಿಸಿತ್ತು. ಆದರೆ ಈ ಗಾಯದಿಂದಾಗಿ ಪಂಜಾಬ್ ತಂಡಕ್ಕೆ ಹಿನ್ನಡೆಯಾಗಿದೆ.
ಮಾರ್ಚ್ ಅಂತಿಮ ವಾರದಲ್ಲಿ ಐಪಿಎಲ್ ಆರಂಭವಾಗಲಿದೆ. ಮ್ಯಾಕ್ಸ್ ವೆಲ್ ಪಂಜಾಬ್ ತಂಡದ ಪ್ರಮುಖ ಆಟಗಾರನಾಗಿದ್ದು, ಫ್ರಾಂಚೈಸಿಯನ್ನು ಕನ್ನಡಿಗ ಕೆ ಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಷ್ಯನ್ ಕಪ್ ಹಾಕಿ; ಇಂಡೋನೇಶ್ಯ ವಿರುದ್ಧ ಭಾರತಕ್ಕೆ 16-0 ಗೆಲುವು!: ಪಾಕ್ ಗೆ ಜಪಾನ್ ಶಾಕ್
ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಲಕ್ನೋ ನಾಯಕ ಕೆ.ಎಲ್.ರಾಹುಲ್
ಮತ್ತಷ್ಟು ಬಲಿಷ್ಠರಾಗಿ ಮರಳುತ್ತೇವೆ..: ಲಕ್ನೋ ತಂಡ ಮೆಂಟರ್ ಗೌತಮ್ ಗಂಭೀರ್
ಒಂದು ಶತಕ ಹಲವು ದಾಖಲೆ: ಸಾಧನೆಗಳ ಮೈಲಿಗಲ್ಲು ನೆಟ್ಟ ರಜತ್ ಪಾಟೀದಾರ್
ಏಷ್ಯನ್ ಕಪ್ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ