Guwahati ಬ್ಯಾಡ್ಮಿಂಟನ್: ಅಶ್ವಿನಿ-ತನಿಷಾ ಜೋಡಿಗೆ ಪ್ರಶಸ್ತಿ
Team Udayavani, Dec 10, 2023, 11:15 PM IST
ಗುವಾಹಟಿ: ಅಶ್ವಿನಿ ಪೊನ್ನಪ್ಪ ತನಿಷಾ ಕ್ರಾಸ್ಟೊ “ಗುವಾಹಟಿ ಮಾಸ್ಟರ್ ಸೂಪರ್ 100′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ರವಿವಾರ ಸಾಗಿದ 40 ನಿಮಿಷಗಳ ಫೈನಲ್ನಲ್ಲಿ ಭಾರತದ ಜೋಡಿ ಚೈನೀಸ್ ತೈಪೆಯ ಸುಂಗ್ ಶುವೊ ಯುನ್ ಯು ಚೀನ್ ಹುಯಿ ವಿರುದ್ಧ 21 13, 21 19 ಅಂತರದ ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ “ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್ 300′ ಪಂದ್ಯಾವಳಿಯಲ್ಲಿ ಅಶ್ವಿನಿ ತನಿಷ್ಕಾ ರನ್ನರ್ ಅಪ್ ಆಗಿದ್ದರು. ಈ ವರ್ಷ ಅಶ್ವಿನಿ ತನಿಷಾ ಜೋಡಿಗೆ ಒಲಿದ 3ನೇ ಪ್ರಶಸ್ತಿ. ಇದಕ್ಕೂ ಮುನ್ನ ಅಬುಧಾಬಿ ಮಾಸ್ಟರ್ ಸೂಪರ್ 100 ಮತ್ತು ನೇಟ್ಸ್ ಇಂಟರ್ನ್ಯಾಶನಲ್ ಚಾಲೆಂಜ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ